ನಮಸ್ಕಾರ ಪ್ರಿಯ ರೈತರೇ, ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯ ಸರ್ಕಾರವು ಕೃಷಿ ಯಂತ್ರೋಪಕರಣ ಖರೀದಿ, ಇತರ ತೋಟಗಾರಿಕಾ ಕಾರ್ಯಗಳಿಗೆ ಸಹಾಯಧನ ನೀಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ರಾಜ್ಯದ ತೋಟಗಾರಿಕೆ ಇಲಾಖೆಯಿಂದ 2022-23 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನ ಯೋಜನೆಯ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಕಾರ್ಯಕ್ರಮದಡಿ ಕೃಷಿ ಯಂತ್ರೋಪಕರಣ ಖರೀದಿಸುವ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಂದ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ರೈತರು ಖರೀದಿಸುವ ಕೃಷಿ ಯಂತ್ರೋಪಕರಣಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ.50 ರಷ್ಟು ಸಹಾಯಧನ ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಶೇ.40 ರಷ್ಟು ಸಹಾಯಧನದ ಸೌಲಭ್ಯವಿರುತ್ತದೆ. ಅರ್ಜಿ ಸಲ್ಲಿಸಲು ಮತ್ತು ಈ ಯೋಜನೆ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಿಮ್ಮ ತಾಲೂಕಿನ ಅಥವಾ ನಿಮಗೆ ಸಂಬಂಧಪಟ್ಟ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಂಪರ್ಕಸಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು.
ಈ ಸೌಲಭ್ಯದ ಅಡಿ ಅಂದರೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೋಹಕ ಕೀಟ ಬಲೆ, ಜಿಗುಟಾದ ಬಲೆಗಳು, ನೀರಿನಲ್ಲಿ ಕರಗುವ ರಸಗೊಬ್ಬರ, ಲಘು ಪೋಷಕಾಂಶಗಳ ಮಿಶ್ರಣ, ಕೊಯ್ಲುತ್ತರ ನಂತರದ ಚಟುವಟಿಕೆಗಳಿಗೆ ಬಳಸುವ ಪ್ಲಾಸ್ಟಿಕ್ ಕ್ರೇಟ್ಸ್, ಪುನೇಟ್ ಬಾಕ್ಸ್, ಕೊರುಗೇಟೆಡ್ ಬಾಕ್ಸ್ ಗಳನ್ನು ಅನುಮೋದಿತ ಸಂಸ್ಥೆಯವರಿಂದ ಖರೀದಿಸಿದರೆ ಮಾತ್ರ ಸಹಾಯಧನದ ಸೌಲಭ್ಯ ಒದಗಿಸಲಾಗುತ್ತದೆ.
ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ ಮತ್ತು ಕ್ಷೇತ್ರ ಮಟ್ಟದಲ್ಲಿ ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೂ ಸಹ ಸಹಾಯಧನದ ಸೌಲಭ್ಯ ಒದಗಿಸಲಾಗುತ್ತದೆ. ಆಸಕ್ತ ತೋಟಗಾರಿಕೆ ಬೆಳೆಗಾರರು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಿಷ್ಟು ಈ ಯೋಜನೆ ಬಗ್ಗೆ ಇರುವ ಮಹತ್ವದ ಮಾಹಿತಿಯಾಗಿದ್ದು, ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ🌱 ಜಾಲತಾಣದ ಸಂಪರ್ಕದಲ್ಲಿರಿ..