ಪ್ರಿಯ ರೈತರೇ, ನಿಮ್ಮ ಜಮೀನು ಯಾವ ವರ್ಷ ನಿಮ್ಮ ಹೆಸರಿಗೆ ವರ್ಗಾವಣೆ ಆಗಿದೆ? ಹಾಗೆಯೇ ಖಾತ ನಂಬರ್, ಮುಟೇಷನ್ ನಂಬರ್ ಯಾವ ವರ್ಷ ನಿಮ್ಮ ಹೆಸರಿಗೆ ವರ್ಗವಾಗಿದೆ? ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ವಿವರವನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ನಿಮ್ಮ ಜಮೀನು ಯಾವ ವರ್ಷ ನಿಮ್ಮ ಹೆಸರಿಗೆ ವರ್ಗಾವಣೆ ಆಗಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಅದರ ಬಗ್ಗೆ ಇರುವ ಮಹತ್ವದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಹೌದು ರೈತರೇ, ನಿಮ್ಮ ಬಳಿ ಅಥವಾ ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು ಮನೆಯಲ್ಲಿ ಕುಳಿತು ಜಮೀನು ತಮ್ಮ ಹೆಸರಿಗೆ ಯಾವಾಗ ವರ್ಗಾವಣೆಯಾಗಿದೆ ಹಾಗೂ ಖಾತಾ ನಂಬರ್ ಮತ್ತು ಮುಟೇಶನ್ ನಂಬರ್ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ.

» ಮೊಬೈಲ್ ನಲ್ಲಿ ಜಮೀನು ಯಾವ ವರ್ಷ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ

https://landrecords.karnataka.gov.in/Service2/

ರೈತರು ಈ ಮೇಲೆ ಹೇಳಿರುವ ಅಧಿಕೃತ ವೆಬ್ ಸೈಟಿಗೆ ಲಾಗಿನ್ ಆಗಬೇಕಾಗುತ್ತದೆ.

ಅಥವಾ ಇದರ ಬದಲಿಗೆ ನೀವು ಗೂಗಲ್ ನಲ್ಲಿ “ಭೂಮಿ” ಎಂದು ಸರ್ಚ್ ಮಾಡಿದರು ಕೂಡ ಬರುತ್ತದೆ.

» ಈ ಮೇಲೆ ಹೇಳಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಭೂಮಿ ಆನ್ಲೈನ್ ಮುಖಪುಟ ತೆಗೆದುಕೊಳ್ಳುತ್ತದೆ.

ಅಲ್ಲೇ ನೀವು ಸರ್ವೇ ನಂಬರ್ ನ ಆಯ್ಕೆಯನ್ನು ಮಾಡಬೇಕು.

» ಇದಾದ ನಂತರ ಅಲ್ಲಿ ಕೇಳಲಾಗುವ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ನಿಮ್ಮ ಗ್ರಾಮದ ಆಯ್ಕೆಯನ್ನು ಮಾಡಬೇಕಾಗುತ್ತದೆ.

» ಇದಾದ ನಂತರ ನಿಮ್ಮ ಜಮೀನಿನ ಸರ್ವೇ ನಂಬರ್ ಅಲ್ಲಿರುವ ಜಾಗದಲ್ಲಿ ನಮೂದಿಸಬೇಕು.

» ಇದಾದ ನಂತರ ಅಲ್ಲಿ ಕಾಣುವ ಸರ್ ನೋಕ್ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಯಾವ ಹಿಸ್ಸಾ ನಂಬರ್ ಬೇಕೋ ಆ ಹಿಸ್ಸಾ ನಂಬರನ್ನು ಆಯ್ಕೆ ಮಾಡಿಕೊಳ್ಳಬೇಕು.

» ಇದಾದ ನಂತರ ಕೊನೆಯಲ್ಲಿ view land data ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ಆಗ ನಿಮಗೆ ಇನ್ನೊಂದು ಮುಖಪುಟ ತೆರೆದುಕೊಳ್ಳುತ್ತದೆ. ಅದು ಆರ್ ಟಿ ಸಿ ಫಾರಂ 16 ಆಗಿರುತ್ತದೆ.

» ಅದರಲ್ಲಿ ನಿಮಗೆ ನಿಮ್ಮ ತಾಲೂಕು, ಹೋಬಳಿ,ಗ್ರಾಮ, ಸರ್ವೆ ನಂಬರ್ ಇನ್ನು ಅನೇಕ ಮಾಹಿತಿಗಳು ಯಾವ ವರ್ಷದಿಂದ ವ್ಯಾಲಿಡ್ ಆಗಿರುತ್ತದೆ ಎಂಬುದನ್ನು ನಮೂದಿಸಿರಲಾಗುತ್ತದೆ.

» ಇದರ ಕೆಳಗೆ ನೀವು ನಮೂದಿಸಿರುವ ಸರ್ವೇ ನಂಬರ್ ನ ಒಟ್ಟು ಜಮೀನು ಎಷ್ಟು ಎಕರೆ ಗುಂಟೆಯಲ್ಲಿದೆ ಎಂಬ ಮಾಹಿತಿ ಸಿಗುತ್ತದೆ. ಖರಾಬು ಎ ಮತ್ತು ಖರಾಬು ಬಿ ಜಮೀನು ಎಷ್ಟಿದೆ ಎಂಬ ಮಾಹಿತಿಯು ಸಹ ಒಳಗೊಂಡಿರುತ್ತದೆ.

» ಜಮೀನು ಯಾವ ಪ್ರಕಾರದ್ದಾಗಿದೆ? ಆ ಸರ್ವೇ ನಂಬರ್ ನಲ್ಲಿ ಎಷ್ಟು ಗಿಡಗಳಿವೆ? ಜಮೀನು ಪಟ್ಟ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ.

» ಫಾರ್ಮ್ ನಂಬರ್ 9ರಲ್ಲಿ ಜಮೀನಿನ ಮಾಲೀಕರ ಹೆಸರು, ಅವರ ತಂದೆಯ ಹೆಸರು, ಎಷ್ಟು ಎಕರೆ ಜಮೀನಿದೆ? ಜಮೀನಿನ ಖಾತಾ ನಂಬರ್ ಹಾಗೂ ಜಮೀನು ಯಾವಾಗ ಖರೀದಿ ಮಾಡಲಾಗಿದೆ ಅಥವಾ ಯಾರ ಹೆಸರಿಗೆ ಬದಲಾಗಿದೆ ಅಂದರೆ ಯಾವ ದಿನಾಂಕ, ತಿಂಗಳು ಅಥವಾ ವರ್ಷದಂದು ವರ್ಗವಾಗಿದೆ ಎಂಬುದರ ಮಾಹಿತಿ ಸಿಗುತ್ತದೆ.

» ಒಂದು ವೇಳೆ ಜಮೀನಿನ ಮೇಲೆ ಸಾಲ ಪಡೆದಿದ್ದರೂ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆಯಲಾಗಿದೆ? ಜಮೀನು ಜಂಟಿ ಆಗಿದ್ದರೆ ಯಾರ ಹೆಸರಿಗೆ ಜಂಟಿಯಾಗಿದೆ? ಅವರ ಹೆಸರು ಮತ್ತು ತಂದೆ ಹೆಸರು, ಎಷ್ಟು ಎಕರೆ ಜಂಟಿಯಾಗಿದೆ? ಇವೆಲ್ಲವುಗಳ ಮಾಹಿತಿ ಲಭ್ಯವಿರುತ್ತದೆ.

» ಜಮೀನಿನಲ್ಲಿ ಪ್ರಸಕ್ತ ವರ್ಷ ಹಾಗೂ ಹಿಂದಿನ ವರ್ಷ ಯಾವ ಬೆಳೆ ಬೆಳೆಯಲಾಗಿದೆ? ಎಷ್ಟು ಎಕರೆ ಬಿತ್ತನೆ ಮಾಡಲಾಗಿದೆ? ಎಂಬ ಮಾಹಿತಿ ರೈತರಿಗೆ ಕುಳಿತಲ್ಲೇ ಸಿಗುತ್ತದೆ.

ಇದಿಷ್ಟು ಇದರ ಬಗ್ಗೆ ಇರುವ ಮಹತ್ವದ ಮಾಹಿತಿಯಾಗಿದ್ದು ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿ ಸದುಪಯೋಗವನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ಕೃಷಿ ಸಂಬಂಧಿಸಿದೆ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *