ಡ್ರ್ಯಾಗನ್ ಹಣ್ಣು ವಿದೇಶದ ಹಣ್ಣಿನ ಬೆಳೆಯಾಗಿದೆ,ಈ ಹಣ್ಣನ್ನು ಮಧ್ಯ ಅಮೆರಿಕ ಹಾಗೂ ದಕ್ಷಿಣ ಅಮೆರಿಕದಲ್ಲಿ ಮೊದಲ ಬಾರಿಗೆ ಬೆಳೆದಿದ್ದಾರೆ ಎಂದು ಹೇಳಲಾಗುತ್ತದೆ.ಡ್ರಾಗನ್ ಹಣ್ಣನ್ನು ಪ್ರಸ್ತುತ ಏಷಿಯಾ, ಮೆಕ್ಸಿಕೋ, ದಕ್ಷಿಣ ಅಮೆರಿಕ ಹಾಗೂ ಇಸ್ರೇಲ್ ಮುಂತಾದ ದೇಶಗಳಲ್ಲಿ ಬೆಳೆಯುತ್ತಿದ್ದಾರೆ.
ಕರ್ನಾಟಕದಲ್ಲಿ ಅನೇಕ ರೈತರು ಡ್ರ್ಯಾಗನ್ ಹಣ್ಣನ್ನು ಬೆಳೆಯುತ್ತಿದ್ದಾರೆ,ಈ ಬೆಳೆಯನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯಲು ಕಾರಣ ಡ್ರ್ಯಾಗನ್ ಹಣ್ಣಿನ ರುಚಿ, ಔಷಧೀಯ ಮೌಲ್ಯ ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ.
ಡ್ರ್ಯಾಗನ್ ಫ್ರುಟ್ ಥೈಲ್ಯಾಂಡ್, ವಿಯಟ್ನಾಂ, ಶ್ರೀಲಂಕಾ ದೇಶಗಳಲ್ಲಿ ಜನಪ್ರಿಯ. ಸ್ಟಾರ್ ಹೋಟೆಲ್‌ಗಳ ಕಾಕ್‌ಟೆಲ್ ಜ್ಯೂಸ್, ಫ್ರುಟ್ ಪ್ಲೇಟ್‌ಗಳಲ್ಲಿ ಈ ಹಣ್ಣಿಗೆ ಸ್ಥಾನವಿದೆ. ಕಡಿಮೆ ಸಕ್ಕರೆ ಅಂಶ, ಅಧಿಕ ಐರನ್, ಕ್ಯಾಲ್ಶಿಯಂ, ವಿಟಮಿನ್ ಹೊಂದಿರುವ ಈ ಹಣ್ಣು ಆರೋಗ್ಯಕ್ಕೆ ಪೂರಕ. ಮಾಲ್‌ಗಳಲ್ಲಿ ಹಣ್ಣು ಮಾರಾಟಕ್ಕೆ ಇದ್ದರೂ ನಮ್ಮ ರೈತರಿಗೆ ಇದು ಹೊಸ ಬೆಳೆ. ಆಮದಾಗುವ ’ಡ್ರ್ಯಾಗನ್ ಫ್ರುಟ್‌ಗಿಂತ ಸ್ಥಳೀಯವಾಗಿ ಬೆಳೆದ ಹಣ್ಣು ಖರೀದಿಸಲು ವ್ಯಾಪಾರಿಗಳೂ ಆಸಕ್ತಿ ತೋರುತ್ತಿರುವ ಪರಿಣಾಮ ರಾಜ್ಯದ ರೈತರು ಡ್ರ್ಯಾಗನ್‌ಬೇಸಾಯ ಮಾಡುತ್ತಿದ್ದಾರೆ
ಡ್ರ್ಯಾಗನ್ ಕೃಷಿಯ ಬಗ್ಗೆ ಮಾಹಿತಿ: ಡ್ರ್ಯಾಗನ್ ಹಣ್ಣು ಉಷ್ಣವಲಯದ ಹಣ್ಣಾಗಿದ್ದು ಈ ಹಣ್ಣನ್ನು ಯಾವುದೇ ಮಣ್ಣಿನಲ್ಲಿ ಬೆಳೆಯಬಹುದಾಗಿದೆ,ಡ್ರ್ಯಾಗನ್ ಫ್ರೂಟ್ ಕ್ಯಾಕ್ಟಸ್ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ ಆದರೂ ಈ ಡ್ರ್ಯಾಗನ್ ಸಸ್ಯವು ಸಾಮಾನ್ಯವಾಗಿ ಮರುಭೂಮಿಯಲ್ಲಿ ಬೆಳೆಯುವ ಕ್ಯಾಕ್ಟಿಯಂತಲ್ಲ. ಡ್ರ್ಯಾಗನ್ ಹಣ್ಣು ಸೌಮ್ಯವಾದ, ಆರ್ದ್ರ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಡ್ರ್ಯಾಗನ್ ಹಣ್ಣು ಹೆಚ್ಚಾಗಿ ಬೆಳೆಯಲು ಒಂದು ಪ್ರಮುಖ ಕಾರಣವೆಂದರೆ ಈ ಹಣ್ಣಿನ ಲಕ್ಷಣವಾದ ತಾಪಮಾನದ ತೀವ್ರತೆಯನ್ನು ಸಹಿಸಿಕೊಂಡು ಬೆಳೆಯುವುದು.
ಡ್ರ್ಯಾಗನ್ ಸಸ್ಯಗಳು ಕಳಪೆ ಮಣ್ಣಿನಲ್ಲಿಯು ಉತ್ತಮವಾಗಿ ಬೆಳೆಯುತ್ತವೆ ಹಾಗೂ ಅವುಗಳ ಬೆಳವಣಿಗೆಗೆ 400 ರಿಂದ 600 ಮಿ.ಮೀ ಮಳೆಯೊಂದಿಗೆ ಉಷ್ಣವಲಯದ ಹವಾಮಾನ ಸೂಕ್ತವಾಗಿರುತ್ತದೆ. ಡ್ರ್ಯಾಗನ್ ಹಣ್ಣಿನ ಬೆಳೆಗಳನ್ನು ಬೆಳೆಯಲು 20°C ನಿಂದ 30°C ನಡುವಿನ ತಾಪಮಾನವನ್ನು(temprature) ಉತ್ತಮವಾಗಿದೆ.
ಡ್ರಾಗನ್ ಫ್ರೂಟ್ ತಿನ್ನುವುದರಿಂದ ಆಗುವ ಲಾಭಗಳು :
ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇರುವ ಈ ಹಣ್ಣು ಡಯಟ್ ಮಾಡುವವರಿಗೆ ಸಿಕ್ಕಾಪಟ್ಟೆ ಫೆವರೇಟ್. ದೇಹದಲ್ಲಿರುವ ಅನ್‌ಸ್ಯಾಚುರೇಟೆಡ್ ಫ್ಯಾಟ್ / ಕೆಟ್ಟ ಫ್ಯಾಟ್‌ಗಳನ್ನು ಕರಗಿಸುತ್ತದೆ. ಹೃದಯಕ್ಕೆ ಹರಿಯುವ ರಕ್ತವನ್ನು ಈ ಹಣ್ಣು ಶುದ್ಧೀಕರಿಸುತ್ತದೆ.ಡ್ರಾಗನ್ ಫ್ರೂಟ್‌ನಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆಯನ್ನು ನಿವಾರಿಸಬಲ್ಲದು. ವಯಸ್ಸಾಗುತ್ತಿದ್ದಂತೆ ಮುಖದ ಚರ್ಮ ಸುಕ್ಕು ಸಾಮಾನ್ಯ. ಆದರೆ ಅದನ್ನು ತಪ್ಪಿಸುವ ಶಕ್ತಿ ಡ್ರಾಗನ್ ಫ್ರೂಟ್‌ಗಿದೆ. ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಈ ಫ್ರೂಟ್ ಮುಖ್ಯ ಪಾತ್ರವಹಿಸುತ್ತದೆ.
ಡ್ರ್ಯಾಗನ್ ಹಣ್ಣಿನ ಮೂರು ವಿಧಗಳು :
ಬಣ್ಣಕ್ಕನುಗುಣವಾಗಿ ಡ್ರ್ಯಾಗನ್ ಹಣ್ಣು ಮೂರು ವಿಧಗಳಲ್ಲಿ ವರ್ಗಿಕರಣ.
ಕೆಂಪುಹಣ್ಣು-ಬಿಳಿ ತಿರುಳು; ಎಲೆ ದಪ್ಪವಾಗಿದ್ದು, ಕಡಿಮೆ ಮುಳ್ಳು ಹೊಂದಿರುತ್ತದೆ. ಹಳದಿ ವರ್ಣದ ಹೂವು. ಗಾತ್ರದಲ್ಲಿ ಕಾಯಿ ಹಿರಿದು. ಇಳುವರಿ ಹೆಚ್ಚು.
ಕೆಂಪುಹಣ್ಣು-ಕೆಂಪು ತಿರುಳು: ಎಲೆ ತುಸು ಲೋಳೆ ಹೊಂದಿದ್ದು, ಮುಳ್ಳು ದೂರ ಇದ್ದು ನಂತರ ದಪ್ಪಗಾಗುತ್ತದೆ. ಕೆಂಪು ಬಣ್ಣದ ಹೂವು. ಕಾಯಿ ಇಳುವರಿ ಕಡಿಮೆ. ಒಳ್ಳೆಯ ರುಚಿ. ಆಕರ್ಷಕ ತಿರುಳು ಹಾಗೂ ದರ ಹೆಚ್ಚು.
ಹಳದಿ ಹಣ್ಣು-ಬಿಳಿ ತಿರುಳು: ಇದಕ್ಕೆ ಬೇಡಿಕೆ ಕಡಿಮೆ.
ಡ್ರ್ಯಾಗನ್ ಹಣ್ಣನ್ನು ಬೆಳೆಯುವ ರೀತಿ : ಬೆಂಗಳೂರಿನ ಯಲಹಂಕದ ರೈತ ಶ್ರೀನಿವಾಸ ರೆಡ್ಡಿ ಅವರ ಪ್ರಕಾರ ಒಂದು ಎಕರೆ ಡ್ಯಾಗನ್ ಫ್ರೂಟ್ ಬೆಳೆಯಲು ಅವರು ಹೊಸ ರೈತರಿಗೆ ನೀಡಿರುವ ಮಾರ್ಗದರ್ಶನ ಹೀಗಿದೆ.
•ಯಾವುದೇ ರೈತರು ಡ್ರ್ಯಾಗನ್ ಫ್ರೂಟ್ ಬೆಳೆಯ ಬೇಕೆಂದಿದ್ದರೆ ಒಂದು ತಿಂಗಳ ಮುಂಚಿತವಾಗಿಯೇ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಬೇಕು.
•ಒಂದು ಎಕರೆಯಲ್ಲಿ ಸುಮಾರು 500 ಕಂಬಗಳನ್ನು ನೆಟ್ಟು ಆ ಕಂಬಗಳ ಮೇಲೆ ಈ ಡ್ರ್ಯಾಗನ್ ಸಸ್ಯಗಳನ್ನು ಹಬ್ಬಿಸುವ ಮೂಲಕ ಡ್ರ್ಯಾಗನ್ ಫ್ರೂಟ್ ಬೆಳೆಯಬಹುದಾಗಿದೆ.
ರೈತರು ಎರಡು ರೀತಿಯ ಕಂಬಗಳನ್ನು ಉಪಯೋಗಿಸಬಹುದಾಗಿದೆ, ಕಲ್ಲು ಹಾಗೂ ಸಿಮೆಂಟ್ ಕಾಂಕ್ರೀಟ್ ನಿಂದ ಮಾಡಿದ ಕಂಬಗಳನ್ನು ಉಪಯೋಗಿಸಿ ಬೆಳೆಬಹುದಾಗಿದೆ. ಕಲ್ಲಿನ ಕಂಬವನ್ನು ಉಪಯೋಗಿಸುವುದರಿಂದ ಖರ್ಚು ಕಡಿಮೆಯಾಗುತ್ತದೆ ಆದರೆ ಕಾಂಕ್ರೀಟ್ ಕಂಬವು ಹೆಚ್ಚಿನ ಖರ್ಚಾದರೂ ಕಲ್ಲಿನ ಕಂಬಕ್ಕಿಂತ ಉತ್ತಮ.
ಯಾವುದೇ ಕಂಬವಾದರೂ 7 ಅಡಿ ಇರಲೇಬೇಕು ಆ 7 ಅಡಿಯಲ್ಲಿ ಎರಡು ಅಡಿಯನ್ನು ಮಣ್ಣಿನಲ್ಲಿ ಮುಚ್ಚಬೇಕು.
•ಡ್ರ್ಯಾಗನ್ ಫ್ರೂಟ್ ನೆಡಲು ಅನುಕೂಲವಾಗುವಂತೆ ಮಣ್ಣನ್ನು ಕಂಬಗಳಿಗೆ ಅರ್ಧ ಅಡಿ ಎತ್ತರದವರೆಗೆ ಮೊದಲು ಮಡಿ ಮಾಡಬೇಕು.
• ಒಂದು ಮಂಕರಿಯಷ್ಟು ಗೊಬ್ಬರವನ್ನು ಮಣ್ಣಿನ ಜೊತೆ ಬೆರೆಸಿ ಕಂಬಗಳ ಸುತ್ತ ಹಾಕಬೇಕು. ಹೀಗೆ ಮಾಡಿ ಒಂದು ತಿಂಗಳವರೆಗೆ ಹಾಗೆಯೇ ಬಿಡಬೇಕು ಏಕೆಂದರೆ ಆ ಮಣ್ಣು ಗೊಬ್ಬರ ಹೊಂದಿಕೊಳ್ಳಬೇಕು.
•ಒಂದು ಕಂಬಕ್ಕೆ ನಾಲ್ಕು ಸಸಿಗಳನ್ನು ನೆಡುವುದು ಉತ್ತಮ. ಹೆಚ್ಚು ಸಸಿಗಳನ್ನು ನೆಡುವುದರಿಂದ ಆ ಸಸ್ಯಗಳ ನಡುವೆ ಪೋಷಕಾಂಶಗಳಿಗಾಗಿ ಪೈಪೋಟಿ ಉಂಟಾಗುತ್ತದೆ.
•ಸಸಿಗಳನ್ನು ನೆಟ್ಟ ಕೆಲವು ತಿಂಗಳುಗಳ ನಂತರ ಅಂದರೆ ಐದರಿಂದ ಆರು ತಿಂಗಳುಗಳ ನಂತರ ಸಸ್ಯವು ಕಂಬಕ್ಕೆ ಹಬ್ಬಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಸಸ್ಯಗಳಿಗೆ ಮತ್ತೊಮ್ಮೆ ಒಂದು ಮಂಕರಿಯಷ್ಟು ಪ್ರತಿ ಕಂಬಕ್ಕೆ ಗೊಬ್ಬರ ನೀಡಬೇಕು, ಈ ಗೊಬ್ಬರವು ಸಸ್ಯಗಳ ಮುಂದುವರಿದ ಬೆಳವಣಿಗೆಗೆ ಉಪಕಾರಿಯಾಗುತ್ತದೆ.
•ಸಸಿಗಳು ಕಂಬದ ತುದಿಯನ್ನು ಮುಟ್ಟಿದಾಗ ತುದಿಯಲ್ಲಿರುವ ಸ್ಲಾಬ್ ಅಥವಾ ಟೈರುಗಳಲ್ಲಿ ಹಬ್ಬಲು ಪ್ರಾರಂಭಿಸುತ್ತವೆ.ಸುಮಾರು 11 ರಿಂದ 12 ತಿಂಗಳ ನಂತರ ಸಸಿಗಳು ಹಬ್ಬಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ಮತ್ತೊಮ್ಮೆ ಸಸಿಗಳಿಗೆ ಒಂದರಿಂದ ಒಂದೂವರೆ ಮಂಕರಿ ಗೊಬ್ಬರ ನೀಡುವುದರಿಂದ ಸಸಿಗಳಿಗೆ ಹಣ್ಣುಗಳನ್ನು ಬಿಡಲು ಸಹಕಾರಿಯಾಗುತ್ತದೆ.
•ಮೊದಲ ವರ್ಷದಲ್ಲಿ ಎರಡು ಬಾರಿ ಗೊಬ್ಬರವನ್ನು ನೀಡಬೇಕು ನಂತರ ವರ್ಷಕ್ಕೊಮ್ಮೆ ಗೊಬ್ಬರವನ್ನು ನೀಡಿದರೆ ಸಾಕು.
•ಉತ್ತಮವಾದ ಗೊಬ್ಬರವನ್ನು ಉಪಯೋಗಿಸುವುದರಿಂದ ಉತ್ತಮವಾದ ಇಳುವರಿಯನ್ನು ಪಡೆಯಬಹುದಾಗಿದೆ.
ಡ್ರ್ಯಾಗನ್ ಹಣ್ಣಿಗೆ ಯಾವ ಮಣ್ಣು ಸೂಕ್ತ : ಡ್ರ್ಯಾಗನ್ ಹಣ್ಣನ್ನು ಬೆಳೆಯಲು ಎಲ್ಲಾ ರೀತಿಯ ಮಣ್ಣು ಸೂಕ್ತ ಆದರೆ ಆ ಮಣ್ಣಿನಲ್ಲಿ ನೀರು ನಿಲ್ಲಬಾರದು. ಯಾವುದೇ ಭೂಮಿಯಾದರೂ ಉತ್ತಮವಾದ ಗೊಬ್ಬರ ಹಾಗೂ ಏರ್ ಮಡಿ ಅಂದರೆ ಮಣ್ಣನ್ನು ಎತ್ತರ ಮಾಡಿಕೊಂಡು ಡ್ರ್ಯಾಗನ್ ಹಣ್ಣಿನ ಸಸ್ಯವನ್ನು ಸುಲಭವಾಗಿ ಬೆಳೆಯಬಹುದಾಗಿದೆ.
ಡ್ರ್ಯಾಗನ್ ಹಣ್ಣಿನಲ್ಲಿ ಕೀಟ ಹಾಗೂ ರೋಗಗಳ ಬಾಧೆ : ಡ್ರ್ಯಾಗನ್ ಹಣ್ಣಿನಲ್ಲಿ ಹೆಚ್ಚಾಗಿ ಕೀಟ ಹಾಗೂ ರೋಗಗಳ ತೊಂದರೆ ಇರುವುದಿಲ್ಲ, ಹೂವಿನ ಮಕರಂದ ಹಾಗೂ ಎಲೆ ತಿರುಳು ಸಿಹಿಯಾಗಿರುವುದರಿಂದ ಅದನ್ನು ತಿನ್ನಲು ಬರುವ ಕೆಂಪು ಇರುವೆ ಈ ಬೆಳೆಯ ಮುಖ್ಯ ಪೀಡೆ. ಗೆದ್ದಲು ಬಾಧೆ ಹೆಚ್ಚು. ಬೆಳೆಗೆ ಕೊಡುವ ನೀರು ಹೆಚ್ಚಾದಲ್ಲಿ ಕೊಳೆರೋಗ ಬರುತ್ತದೆ. 200 ಲೀ ನೀರಿನಲ್ಲಿ 250ಗ್ರಾಂ ಉತ್ತಮ ಗುಣಮಟ್ಟದ ಇಂಗು, 100ಗ್ರಾಂ ಖಾರಪುಡಿ ಬೆರೆಸಿ ಎರಡು ದಿನ ಇಟ್ಟು ನಂತರ ಹನಿ ನೀರಿನ ಮೂಲಕ ಬೆಳೆಗೆ ಒದಗಿಸಿ ಇರುವೆ, ಗೆದ್ದಲು ನಿಯಂತ್ರಣ ಮಾಡಬಹುದಾಗಿದೆ.
ಡ್ರ್ಯಾಗನ್ ಹಣ್ಣಿನ ಇಳುವರಿ :
•ಹಣ್ಣು ಸಂಪೂರ್ಣವಾಗಿ ಬೆಳೆಯಲು 27-30 ದಿನಗಳು ಬೇಕಾಗುತ್ತದೆ. 4-5 ದಿನಗಳ ವಿಳಂಬವೂ ಕೊಳೆಯಲು ಕಾರಣವಾಗಬಹುದು ಎಂಬ ಕಾರಣದಿಂದ ಹಣ್ಣನ್ನು ಸಂಪೂರ್ಣವಾಗಿ ಬೆಳೆದ ತಕ್ಷಣ ಕಟಾವು ಮಾಡಬೇಕು.
•ಡ್ರ್ಯಾಗನ್ ಹಣ್ಣಿನಮರವುಫಲನೀಡಲುಪ್ರಾರಂಭಿಸಿದಾಗ, ಕೊಯ್ಲುಸುಲಭವಾಗುತ್ತದೆ. ರೆಕ್ಕೆಗಳು ಒಣಗಲು ಪ್ರಾರಂಭವಾಗುವ ಗಾಢಬಣ್ಣದಹಣ್ಣುಗಳನ್ನು ನೋಡಿ. ಹಣ್ಣನ್ನುನಿಧಾನವಾಗಿತಿರುಗಿಸಿ – ಅದುಹಣ್ಣಾಗಿದ್ದರೆ, ಅದುಸುಲಭವಾಗಿಕಾಂಡದಿಂದಹೊರಬರುತ್ತದೆ.
•ಡ್ರ್ಯಾಗನ್ ಹಣ್ಣು ಮೊದಲ ಬಾರಿಗೆ 14 ತಿಂಗಳ ನಂತರ ಕೊಯ್ಲು ಮಾಡಬಹುದು. ಮೊದಲ ಬಾರಿ ಸುಮಾರು 3 ರಿಂದ 4 ಟನ್ ಪ್ರತಿ ಎಕರೆಗೆ ಪಡೆಯಬಹುದು.
•ಎರಡನೆಯ ಬಾರಿ ಆರು ಟನ್ ನಷ್ಟು ಹಣ್ಣಿನ ಇಳುವರಿಯನ್ನು ಪಡೆಯಬಹುದು. ಮೂರನೇ ಬಾರಿ ಸುಮಾರು 10 ರಿಂದ 12 ಟನ್ ಇಳುವರಿ ಪಡೆಯಬಹುದಾಗಿದೆ.
•ಪ್ರಸ್ತುತ ಡ್ರ್ಯಾಗನ್ ಹಣ್ಣಿನ ಬೆಲೆ ಪ್ರತಿ ಕಿಲೋ ಗ್ರಾಂ ಗೆ 150 ರಿಂದ 300 ರೂ ಆಗಿದೆ.ಹಾಗಾಗಿ ಡ್ರ್ಯಾಗನ್ ಬೆಳೆಯು ಲಾಭದಾಯಕವಾಗಿದೆ.400 ಗ್ರಾಂ ಮೇಲ್ಪಟ್ಟು ತೂಗುವ ಹಣ್ಣು ಗಳು ಮೊದಲ ದರ್ಜೆ ದರ ಪಡೆದರೆ ಉಳಿದವು ಕಡಿಮೆ.
ಡ್ರ್ಯಾಗನ್ ಬೆಳೆಯಬೇಕೆಂದಿರುವ ರೈತರಿಗೆ ಕೆಲವು ಸೂಚನೆಗಳು :
•ಡ್ರ್ಯಾಗನ್ ಬೆಳೆಯ ಬೆಳೆಗಾರರು ಕಡಿಮೆ ಇರುವುದರಿಂದ ಹಾಗೂ ಡ್ರ್ಯಾಗನ್ ಹಣ್ಣಿಗೆ ಉತ್ತಮ ಮಾರುಕಟ್ಟೆ ಇರುವುದರಿಂದ ಈ ಹಣ್ಣನ್ನು ತಾವು ಬೆಳೆದ ಸ್ಥಳದಲ್ಲಿಯೇ ಉತ್ತಮವಾದ ಬೆಲೆಗೆ ಮಾರಾಟ ಮಾಡಬಹುದಾಗಿದೆ.
•ಈ ಹಣ್ಣಿನ ಬೆಲೆಯನ್ನು ಅರಿತವರು ಹೆಚ್ಚಾಗಿ ಈ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ ಹಾಗಾಗಿ ಈ ಬೆಳೆಯನ್ನು ಬೆಳೆಯಬೇಕೆಂದಿರುವವರು, ಈಗಲೇ ಬೆಳೆಯಲಾರಂಭಿಸಿದರೆ ಸೂಕ್ತ.
•ಹಣ್ಣಿನ ಉತ್ಪಾದನೆ ಹೆಚ್ಚಾದಷ್ಟು ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆ ಕುಸಿಯುತ್ತದೆ ಆಗ ಆ ಬೆಳೆಯನ್ನು ಬೆಳೆದ ರೈತರು ಸಂಕಷ್ಟಕ್ಕೆ ಈಡಾಗುತ್ತಾರೆ. ಹಾಗಾಗಿ ಈಗ ಹಣ್ಣಿನ ಕಡಿಮೆ ಉತ್ಪಾದನೆ ಇರುವ ಸಮಯದಲ್ಲಿ ಬೆಳೆಯುವುದು ರೈತರಿಗೆ ಆದಾಯವನ್ನು ತಂದುಕೊಡುವಲ್ಲಿ ಸಹಾಯಕವಾಗುತ್ತದೆ.
•ಪ್ರಸ್ತುತ ಮಾರುಕಟ್ಟೆಯಲ್ಲಿ ಗುಲಾಬಿ ಬಣ್ಣದ ಹಣ್ಣಿಗೆ ಹೆಚ್ಚಿನ ಬೆಲೆ ಇರುವುದರಿಂದ ಬಿಳಿ ಬಣ್ಣದ ಹಣ್ಣಿಗಿಂತ ಗುಲಾಬಿ ಬಣ್ಣದ ಹಣ್ಣನ್ನು ಬೆಳೆಯುವುದು ಸೂಕ್ತ.
•ಡ್ರ್ಯಾಗನ್ ಸಸ್ಯಗಳು ಹಣ್ಣುಗಳನ್ನು ಉತ್ಪಾದಿಸಲು ಸಹಾಯ ಮಾಡಲು ಪತಂಗಗಳು ಮತ್ತು ಬಾವಲಿಗಳು ರಾತ್ರಿ ಪರಾಗಸ್ಪರ್ಶಕಗಳನ್ನು ಅವಲಂಬಿಸಿವೆ.ಡ್ರ್ಯಾಗನ್ ಹಣ್ಣಿನ ಕೆಲವು ಪ್ರಭೇದಗಳು ಸ್ವಯಂ ಪರಾಗಸ್ಪರ್ಶ ಮಾಡುತ್ತವೆ ಆದರೆ ಇತರವುಗಳು ಅಡ್ಡ-ಪರಾಗಸ್ಪರ್ಶ ಮಾಡಲು ಮತ್ತೊಂದು ಸಸ್ಯದ ಅಗತ್ಯವಿರುತ್ತದೆ – ನೀವು ಯಾವ ವೈವಿಧ್ಯತೆಯನ್ನು ಹೊಂದಿದ್ದೀರಿ ಮತ್ತು ಹಣ್ಣುಗಳನ್ನು ಉತ್ಪಾದಿಸಲು ಒಂದಕ್ಕಿಂತ ಹೆಚ್ಚು ಸಸ್ಯಗಳ ಅಗತ್ಯವಿದೆಯೇ ಎಂದು ತಿಳಿದುಕೊಳ್ಳಬೇಕು.
ನೀರಾವರಿ ಹಾಗೂ ಗೊಬ್ಬರ :
•ಸಸ್ಯಕ್ಕೆ ಕಡಿಮೆ ನೀರು ನೀರಾವರಿ ಅಗತ್ಯವಿರುವುದರಿಂದ ವಾರಕ್ಕೊಮ್ಮೆ ನೀರು ಹಾಯಿಸುವುದು ಉತ್ತಮ ಮತ್ತು ಉತ್ತಮ ದಕ್ಷತೆಗಾಗಿ ಹನಿ ನೀರಾವರಿಯನ್ನು ಡ್ರಿಪ್ ಮೂಲಕ ಬಳಸಿ. ಡ್ರಿಪ್ ಮೂಲಕ ನೀರಾವರಿ ಮಾಡುವುದರಿಂದ ನೀರಿನ ಉಳಿತಾಯದ ಜೊತೆಗೆ ಕಡಿಮೆ ನೀರಿನ ವ್ಯವಸ್ಥೆ ಇರುವ ಜಾಗದಲ್ಲಿಯು ಬೆಳೆಯಲು ಸಹಕಾರಿಯಾಗುತ್ತದೆ.
ಭೂಮಿಯನ್ನು ದಿಬ್ಬಗಳಲ್ಲಿ ರಸಗೊಬ್ಬರಗಳೊಂದಿಗೆ ಸಂಸ್ಕರಿಸಬೇಕು. ಬಳಸಿದ ರಸಗೊಬ್ಬರಗಳು 20-ಕಿಲೋಗ್ರಾಂ ಸಾವಯವ ಗೊಬ್ಬರಗಳಾಗಿರಬೇಕು 0.5 ಕಿಲೋಗ್ರಾಂಗಳ ಸೂಪರ್ಫಾಸ್ಫೇಟ್ ಮತ್ತು 1 ಕೆಜಿ N-P-K 16-16-8 ಅನ್ನು 50 ಪೋಸ್ಟಿಂಗ್‌ಗಳಿಗೆ ಡ್ರ್ಯಾಗನ್ ಹಣ್ಣಿನ ಗಿಡಗಳನ್ನು ನೆಡುವ ಮೊದಲು ಬಳಸಬೇಕು.
ತೋಟದ ಹಂತದಲ್ಲಿ, ಮೊದಲ ವರ್ಷದಲ್ಲಿ 50 ಗ್ರಾಂ ಯೂರಿಯಾವನ್ನು 50 ಗ್ರಾಂ ಫಾಸ್ಫೇಟ್ನೊಂದಿಗೆ ವರ್ಷಕ್ಕೆ ಮೂರು ಬಾರಿ ಬಳಸಬೇಕು.
ಟ್ರೈಕೋಡರ್ಮ ಹಾಗೂ ಸುಡೋಮನಾಸ್ ನೊಂದಿಗೆ ಫರ್ಮೆಂಟೇಷನ್ ಮಾಡಿದ ಗೊಬ್ಬರ ಉಪಯೋಗಿಸುವುದು ಉತ್ತಮ ಎಂಬುದು ಕೆಲವು ರೈತರ ಅಭಿಪ್ರಾಯ.
ಇದನ್ನು ಓದಿ:
ಎಂ ಕಿಸಾನ್ ರೈತರ ಖಾತೆಗೆ ಮುಂದೆ ಜಮಾ ಆಗುವ ರೈತರ ಪಟ್ಟಿ ಬಿಡುಗಡೆ ಮಾಡಲಾಗಿದೆ ಇಲ್ಲಿ ಚೆಕ್ ಮಾಡಿ
ಡ್ರ್ಯಾಗನ್ ಬೆಳೆಯ ಸಂಪೂರ್ಣ ಸಂಶೋಧನೆ :
ತುಮಕೂರಿನ ಈರಳ್ಳಿಯಲ್ಲಿರುವ ಕೇಂದ್ರಿಯ ತೋಟಗಾರಿಕೆ ಸಂಶೋಧನೆ ಕೇಂದ್ರ (ಸಿಎಚ್‌ಇಎಸ್) ಡ್ರ್ಯಾಗನ್ ಫ್ರುಟ್ ಬೆಳೆಯುವ ಆಸಕ್ತ ರೈತರನ್ನು ಆಕರ್ಷಿಸುತ್ತಿದೆ. ಈ ಕೇಂದ್ರದ 1 ಎಕರೆಯಲ್ಲಿ 3 ವರ್ಷಗಳಿಂದ ಡ್ರ್ಯಾಗನ್ ಹಣ್ಣಿನ ಬೇಸಾಯದ ಸಂಶೋಧನೆ ಕೈಗೊಂಡಿದ್ದಾರೆ ಅಲ್ಲಿನ ಮುಖ್ಯ ವಿಜ್ಞಾನಿ ಡಾ.ಜಿ. ಕರುಣಾಕರನ್. ‘’ಫೀಲ್ಡ್ ಡೇ’’ ಆಯೋಜಿಸಿದ ರೈತರಿಗೆ ಈ ಬೆಳೆಯ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ. ‘’38 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಇರುವ ಪ್ರದೇಶದಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆಯುವುದು ಸೂಕ್ತವಲ್ಲ. ಉಷ್ಣಾಂಶ ಜಾಸ್ತಿಯಾದರೆ ಗಿಡಗಳು ಸನ್ ಬರ್ನ್‌ಗೆ ತುತ್ತಾಗುತ್ತವೆ. ಇದಕ್ಕೆ ಔಷಧ ಇದ್ದರೂ ಇಳುವರಿ ದೃಷ್ಟಿಯಿಂದ ಇಷ್ಟು ಪ್ರಮಾಣದ ಉಷ್ಣಾಂಶ ಉತ್ತಮವಲ್ಲ. ಡ್ರ್ಯಾಗನ್ ಫ್ರುಟ್ ಮಾರುಕಟ್ಟೆಯ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಬೇಕು. ಇಲ್ಲವಾದರೆ ಯಾರೂ ಈ ಬೆಳೆ ಬೆಳೆಯಲು ಮುಂದಾಗ ಬಾರದು’’ ಎಂಬುದು ಡಾ.ಜಿ. ಕರುಣಾಕರನ್ ಅವರ ಸಲಹೆ. ‘’ಈ ಬೆಳೆಗೆ ಬೆಳಕು ಜಾಸ್ತಿ ಬೇಕು. ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಡ್ರ್ಯಾಗನ್ ಬೆಳೆಯಲು ಸಾಧ್ಯವೇ ಎಂದು ಹಲವು ರೈತರು ಪ್ರಶ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ಶೇಡ್‌ನೆಟ್‌ನಲ್ಲಿ ಡ್ರ್ಯಾಗನ್ ಬೆಳೆಯುತ್ತಿದ್ದೇವೆ’’ ಎನ್ನುತ್ತಾರೆ ಡಾ.ಕರುಣಾಕರನ್
ಪ್ರಸ್ತುತ ಡ್ರ್ಯಾಗನ್ ಹಣ್ಣನ್ನು ಬೆಳೆದು ಎಕರೆಗೆ ಲಕ್ಷ ಲಕ್ಷದಷ್ಟು ಆದಾಯ ಮಾಡಿದ ರೈತರಿದ್ದಾರೆ. ಇಂತಹ ರೈತರ ಮಾಹಿತಿ ನಿಮಗೆ ಯೂಟ್ಯೂಬ್ ನಲ್ಲಿ ದೊರೆಯುತ್ತದೆ.
ಇಂತಹ ಹೆಚ್ಚಿನ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ..