ಪ್ರಿಯ ರೈತರೇ, ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರೈತರಿಗೆ ಸಹಾಯಧನವಾಗಿ ವರ್ಷಕ್ಕೆ 6,000 ರೂಪಾಯಿಗಳನ್ನು ನೀಡಲಾಗುತ್ತಿದೆ. ಇತ್ತೀಚಿಗೆ ಹೀಗೆ ಪಡೆಯುವಂತಹ ಯೋಜನೆಯ ಹಣ ಪಡೆಯಲು ರೈತರಿಗೆ ಇ-ಕೆವೈಸಿ (EKYC) ಮಾಡಿಸುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ನೀಡಿದಂತ ಗಡುವು ವಿಸ್ತರಿಸಿದ್ದರೂ, ಈವರೆಗೆ ಇನ್ನೂ ಅನೇಕ ರೈತರು ನೋಂದಣಿ ಅಥವಾ ಈ ಕೆವೈಸಿ ಮಾಡಿಲ್ಲ. ಈ ಕಾರಣದಿಂದಾಗಿ ರಾಜ್ಯದ 16 ಲಕ್ಷಕ್ಕೂ ಹೆಚ್ಚು ರೈತರಿಗೆ ಈ ಯೋಜನೆಯ ಸಮ್ಮಾನ್ ಹಣ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಮೂಲಗಳು ಹೇಳಲಾಗುತ್ತಿವೆ. ಈ ರೀತಿ ಹೇಳುವುದರ ಮೂಲಕ ರೈತರಿಗೆ ಬಿಗ್ ಶಾಕ್ ನೀಡಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯಲು ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ಕೇಂದ್ರ ಸರ್ಕಾರ ರೈತರಿಗೆ ಮಹತ್ವದ ಮಾಹಿತಿ ನೀಡಿತ್ತು. ರೈತರಿಗೆ ನೀಡಿದ್ದಂತ ಗಡುವು ವಿಸ್ತರಣೆಯಾಗುತ್ತಾ ಬಂದರೂ ಕೂಡ ಇನ್ನೂ ಕರ್ನಾಟಕದ 16,89,402 ಅನ್ನದಾತರು ಇ-ಕೆವೈಸಿ ಮಾಡಿಸುವುದು ಬಾಕಿ ಇದೆ ಎಂಬುದಾಗಿ ತಿಳಿದು ಬಂದಿದೆ.

ಅದೇ ರೀತಿಯಾಗಿ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

» ಮೊದಲಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟನ್ನು ತೆರೆಯಬೇಕು.

pmkisan.gov.in

» ಅದರಲ್ಲಿ ನಿಮಗೆ “ಬೆನಿಫಿಶಿಯರಿ ಲಿಸ್ಟ್” ಎಂಬುದಾಗಿ ಕಾಣುತ್ತದೆ. ಆ ಆಯ್ಕೆ ಮೇಲೆ ಕ್ಲಿಕ್ ಮಾಡಿ.

» ಅಲ್ಲಿ ಕೇಳಲಾಗುವ ಕೆಲವು ಮಾಹಿತಿ ವಿವರಗಳನ್ನು ನೀಡಬೇಕು. ನಂತರ ಕೆಳಗಡೆ ಕಾಣುವ “ಗೆಟ್ ರಿಪೋರ್ಟ್” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.

» ಇದಾದ ನಂತರ ನಿಮಗೆ ಒಂದು ಲಿಸ್ಟ್ ಓಪನ್ ಆಗುತ್ತದೆ. ಅದರಲ್ಲಿ ನೀವು ಈ ಯೋಜನೆಯ ಕಂತಿನ ಹಣ ಯಾವ ರೈತರಿಗೆ ಬರುತ್ತದೆ. ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದು.

ಹಾಗೆಯೇ ರಾಜ್ಯದಲ್ಲಿ ಆಧಾರ್ ನಂಬರ್ ಆಧಾರಿತ 53,91,573 ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಹೀಗೆ ಪಿಎಂ ಸಮ್ಮಾನ್ ಯೋಜನೆಗೆ ನೋಂದಾಯಿತರಾದಂತ ರೈತರಲ್ಲಿ ಕೇವಲ 37 ಲಕ್ಷ ರೈತರಷ್ಟೇ ಈವರೆಗೆ ಇ-ಕೆವೈಸಿ ಮಾಡಿಸಿದ್ದಾರೆ. ಇನ್ನುಳಿದಂತ 16 ಲಕ್ಷಕ್ಕೂ ಹೆಚ್ಚು ಈ ಯೋಜನೆಯ ಫಲಾನುಭವಿಗಳು ಈ ಕೆವೈಸಿ ಮಾಡಿಸಿಲ್ಲ ಎಂಬುದು ಮಾಹಿತಿಯಿಂದ ತಿಳಿದು ಬಂದಿದೆ.

ಇದಿಷ್ಟು ಈ ಯೋಜನೆ ಬಗೆಗಿನ ಪ್ರಮುಖ ಮಾಹಿತಿಯಾಗಿದ್ದು ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬೇಕು.

Leave a Reply

Your email address will not be published. Required fields are marked *