ನಮಸ್ಕಾರ ಪ್ರಿಯ ರೈತರೇ, ರಾಜ್ಯ ಸರ್ಕಾರವು ಹೊಸ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ 3 ಲಕ್ಷ ಹೊಸ ರೈತರೂ ಸೇರಿ ಒಟ್ಟು 33 ಲಕ್ಷ ಜನ ರೈತರಿಗೆ ಬಡ್ಡಿ ಇಲ್ಲದೇ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಮುಂದಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಸಚಿವರಾದ ಮಾನ್ಯ ಎಸ್.ಟಿ.ಸೋಮಶೇಖರ್ ಅವರು ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದ ಹಲವಾರು ರೈತರಿಗೆ ನೆರವಾಗಲೆಂದು ರಾಜ್ಯದ ಸಹಕಾರ ಇಲಾಖೆಯ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸರಿಸುಮಾರು 24,000 ಕೋಟಿ ರೂಪಾಯಿ ಹೊಸ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಈ ಶೂನ್ಯ ಬಡ್ಡಿ ದರ ಸಾಲ ಯೋಜನೆಯ ಮೂಲಕ 33 ಲಕ್ಷ ಜನ ರೈತರು ಸಾಲ ಪಡೆಯಲು ಅರ್ಹರಗಿದ್ದು ಇದರಲ್ಲಿ ಸುಮಾರು 3 ಲಕ್ಷ ಜನ ಹೊಸ ರೈತರಿಗೂ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ. ಈಗಾಗಲೇ ಡಿಸಿಸಿ ಹಾಗೂ ಸಹಕಾರಿ ಬ್ಯಾಂಕುಗಳ ಮೂಲಕ ರಾಜ್ಯದ ಹಲವಾರು ರೈತರಿಗೆ ಸಾಲ ನೀಡುತ್ತಿದ್ದು, ಈ ಹಿಂದೆ ಸಾಲ ಪಡೆದ ರೈತರು ಕೂಡ ಹೊಸ ಸಾಲ ಪಡೆಯಬಹುದು ಎಂದು ಸಚಿವರು ಹೇಳಿದ್ದಾರೆ.
ಸಾಲ ಸೌಲಭ್ಯ ಪಡೆಯಲು ಬೇಕಾಗುವ ಬಹು ಮುಖ್ಯ ದಾಖಲೆಗಳನ್ನು ನೋಡುವುದಾದರೆ,
* ಆಧಾರ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಹೊಲದ ಪಹಣಿ ಅಥವಾ ಉತಾರಿ
* ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
* ಪಾಸ್ ಪೋರ್ಟ್ ಸೈಜ್ ಫೋಟೋ
* ಅರ್ಜಿ ನಮೂನೆ
ಹಾಗೂ ಇನ್ನಿತರ ಮಹತ್ವದ ದಾಖಲೆಗಳು.
ಈ ಸಾಲ ಯೋಜನೆ ಬಗೆಗಿನ ಇನ್ನೂ ಹೆಚ್ಚಿನ ಮಾಹಿತಿಗಾಗಿ ರೈತರು ತಮಗೆ ಹತ್ತಿರ ಇರುವ ಡಿಸಿಸಿ ಅಥವಾ ಸಹಕಾರಿ ಬ್ಯಾಂಕ್ ಗಳನ್ನು ಸಂಪರ್ಕಿಸಬಹುದು.
ಎಲ್ಲಾ ರೈತರು ಈ ಸಾಲ ಯೋಜನೆಯ ಬಗ್ಗೆ ಇರುವ ಉಪಯುಕ್ತ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.