ಪ್ರಿಯ ರೈತರೇ, ರಾಜ್ಯದ ಎಲ್ಲಾ ರೈತರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಬಂದಿದೆ. ಹಿಂಗಾರು ಬೆಳೆ ವಿಮೆ ಪಡೆಯಲು ಕೂಡಲೇ ರೈತರು ಬೆಳೆ ಸಮೀಕ್ಷೆಯನ್ನು ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಹೀಗಾಗಿ ರೈತರು ಬೆಳೆ ಸಮೀಕ್ಷೆಯನ್ನು ಮಾಡಿಕೊಳ್ಳುವುದು ಹೇಗೆ? ಇದಕ್ಕಾಗಿ ಯಾವ ಆಪನ್ನು ಬಳಸಬೇಕು? ಇದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಕರ್ನಾಟಕ ಸರ್ಕಾರ ಆಡಳಿತ ಮತ್ತು ಕೃಷಿ ಇಲಾಖೆ ಕಡೆಯಿಂದ 2020-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ ಆಪನ್ನು ಬಿಡುಗಡೆ ಮಾಡಲಾಗಿದೆ. ರೈತರು ಗೂಗಲ್ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆ 2022-23 ಆಪನ್ನು ಡೌನ್ಲೋಡ್ ಮಾಡಿಕೊಂಡು ತಾವು ಬೆಳೆದ ಬೆಳೆಗಳ ಛಾಯಾಚಿತ್ರವನ್ನು ಅಪ್ಲೋಡ್ ಮಾಡಬಹುದು. ಸದರಿ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ಪರಿಹಾರ, ಬೆಂಬಲ ಬೆಲೆ ಹೀಗೆ ವಿವಿಧ ಯೋಜನೆಯಡಿ ಸವಲತ್ತುಗಳನ್ನು ಪಡೆಯಲು ಆರ್ ಟಿ ಸಿ (RTC) ಅಲ್ಲಿ ಅಳವಡಿಸಲು ಬಳಸಲಾಗುತ್ತದೆ. ರೈತರು ಬೆಳೆ ಸಮೀಕ್ಷೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿ ತಮ್ಮ ಹೊಲದ ಬೆಳೆಗಳ ಮಾಹಿತಿಯನ್ನು ತಾವೇ ಖುದ್ದಾಗಿ ದಾಖಲಿಸಬೇಕು. ಬೆಳೆ ಸಮೀಕ್ಷೆ ದತ್ತಾಂಶವನ್ನು ಕೃಷಿ, ತೋಟಗಾರಿಕೆ ಹೀಗೆ ಮುಂತಾದ ಇಲಾಖೆಗಳಿಂದ ಪ್ರಕೃತಿ ವಿಕೋಪ ಸಮಯದಲ್ಲಿ, ಪರಿಹಾರ ಪಟ್ಟಿ ತಯಾರಿಸುವಲ್ಲಿ, ಸರ್ವೆ ನಂಬರ್, ಬೆಳೆ ಪರಿಶೀಲನೆ ಹಾಗೂ ಬೆಳಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಸರ್ವೇ ನಂಬರ್ ಆಯ್ಕೆ ಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಜಿಲ್ಲೆಯ ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಪ್ಪದೇ ದಾಖಲಿಸಬೇಕು. ಗ್ರಾಮದಲ್ಲಿರುವ ವಿದ್ಯಾವಂತ ರೈತರು ರೈತರ ಬೆಳೆ ಸಮೀಕ್ಷೆ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಗ್ರಾಮದ ರೈತ ಸಮುದಾಯದ ಮಾಹಿತಿಗಳನ್ನು ದಾಖಲಿಸಬಹುದು. ನೀವು ಬೆಳೆ ವಿವರಗಳನ್ನು ದಾಖಲಿಸದಿದ್ದರೆ ಸರ್ಕಾರದಿಂದ ಸಿಗುವ ಯೋಜನೆಗಳಿಂದ ವಂಚಿತರಾಗಬಹುದು. ಹೀಗಾಗಿ ರೈತರ ತಪ್ಪದೆ ಬೆಳೆ ಸಮೀಕ್ಷೆಯನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಬೇಕು.

* ರೈತರು ಬೆಳೆ ಸಮೀಕ್ಷೆಯನ್ನು ಮಾಡಲು ಗೂಗಲ್ ಪ್ಲೇ ಸ್ಟೋರ್ ನಿಂದ “ಮುಂಗಾರು ಬೆಳೆ ಸಮೀಕ್ಷೆ 2022-23″ ಎಂಬ ಆಪನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

* ಅದರಲ್ಲಿ ಕೇಳಲಾಗುವ ನಿಮ್ಮ ಮೊಬೈಲ್ ಸಂಖ್ಯೆ, ನಿಮ್ಮ ಹೊಲದ ಉತಾರ ಅಥವಾ ಪಹಣಿ, ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಹೀಗೆ ಮುಂತಾದ ವಿವರಗಳನ್ನು ನೀಡಬೇಕು.

* ನಂತರ ಸರ್ವೆ ನಂಬರ್ ಗಡಿ ರೇಖೆ ಒಳಗೆ ನಿಂತು ನಿಮ್ಮ ಹೊಲದ ಬೆಳೆಗಳ ವಿವರಗಳನ್ನು ಅಪ್ಲೋಡ್ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ರೈತರು ನಿಮಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು, ಗ್ರಾಮ ಲೆಕ್ಕಾಧಿಕಾರಿಗಳನ್ನು, ಸಹಾಯಕ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಇದರ ಬಗೆಗಿನ ಇನ್ನು ಹೆಚ್ಚಿನ ಮಾಹಿತಿಗಾಗಿ ರೈತರು ಮೊಬೈಲ್ ಸಂಖ್ಯೆ 844 844 7115ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಇದಿಷ್ಟು ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ರಾಜ್ಯದ ರೈತರಿಗೆ ಬಂದಿರುವ ಮಹತ್ವದ ಮಾಹಿತಿಯಾಗಿದೆ. ಎಲ್ಲ ರೈತರು ಈ ಉಪಯುಕ್ತ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.

Leave a Reply

Your email address will not be published. Required fields are marked *