ಇದು ‘ಬಡವರಿಗೆ ನೀಡಲಾದ ಹೊಸ ವರ್ಷದ ಉಡುಗೊರೆ. ನಯಾಪೈಸೆಯನ್ನೂ ಬಡವರು ಪಡಿತರಕ್ಕೆ ಖರ್ಚು ಮಾಡಬೇಕಿಲ್ಲ ಹೊಸ ವರ್ಷದಿಂದ ಈ ಯೋಜನೆ ಜಾರಿಗೊಳ್ಳಲಿದೆ ಎಂದು ತಿಳಿಸಿದ್ದಾರೆ..

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಯಡಿ (ಎನ್‌ಎಫ್‌ಎಸ್ಎ) ದೇಶದ 81.35 ಕೋಟಿ ಬಡವರಿಗೆ ಒಂದು ವರ್ಷ ಕಾಲ ಉಚಿತವಾಗಿ ಪಡಿತರವನ್ನು ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಇದನ್ನು ಹೊಸ ವರ್ಷಕ್ಕೆ ಕೇಂದ್ರ ನೀಡಿದ ಉಡುಗೊರೆ ಎಂದು ಬಣ್ಣಿಸಲಾಗುತ್ತಿದೆ.

ಕೋವಿಡ್ ಕಾರಣ 28 ತಿಂಗಳಿಂದ ಈವರೆಗೆ ಜಾರಿ ಯಲ್ಲಿದ್ದ ಉಚಿತ ಪಡಿತರ ನೀಡುವ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ಅವಧಿ ಡಿ.31ಕ್ಕೆ ಮುಕ್ತಾಯವಾಗುತ್ತಿದೆ. ಹೀಗಾಗಿ ಈ ಯೋಜನೆ ಯನ್ನು ಸ್ಥಗಿತಗೊಳಿಸಿ, ಅದನ್ನು ಆಹಾರ ಭದ್ರತಾ ಕಾಯ್ದೆಯಡಿ ವಿಲೀನ ಮಾಡಿ ಉಚಿತ ಪಡಿತರ ನೀಡಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ.

ಎನ್‌ಎಫ್‌ಎಸ್‌ಎ ಅಡಿಯಲ್ಲಿ ಈಗಾಗಲೇ ಪ್ರತಿ ವ್ಯಕ್ತಿಗೆ ಕೇಜಿಗೆ 2ರಿಂದ 3 ರು. ದರದಲ್ಲಿ 5 ಕೇಜಿ ಆಹಾರ ಧಾನ್ಯಗಳನ್ನು ಕೇಂದ್ರದಿಂದ ಪೂರೈಸ ಲಾಗುತ್ತಿದೆ. ಹಾಗೆಯೇ ಅಂತ್ಯೋದಯ ಅನ್ನ ಯೋಜನೆಗೆ ಒಳಪಡುವ ಕುಟುಂಬಗಳಿಗೆ 35 ಕೇಜಿ ಧಾನ್ಯ ವಿತರಿಸಲಾಗುತ್ತಿದೆ.

ಯೋಜನೆಯಡಿ ಅಕ್ಕಿಯನ್ನು ಕೇಜಿಗೆ 3 ರು. ಹಾಗೂ ಗೋಧಿಯನ್ನು ಕೇಜಿಗೆ 2 ರು. ದರದಲ್ಲಿ ವಿತರಿಸಲಾಗುತ್ತಿದೆ.

“ಆದರೆ, ಇದರ ಬದಲು ಇನ್ನು 1 ವರ್ಷ ಕಾಲ ಪಡಿತರವನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಹಾಗೂ ಇದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ’ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಶುಕ್ರವಾರ ಸಂಪುಟ ಸಭೆ ಬಳಿಕ ಹೇಳಿದ್ದಾರೆ. ಒಟ್ಟಾರೆ ಪಡಿತರಕ್ಕೆ ಕೇಂದ್ರ ಸರ್ಕಾರ ಇನ್ನು ಮಾಡುವ ಖರ್ಚು ವಾರ್ಷಿಕ 2 ಲಕ್ಷ ಕೋಟಿ ರು.ಗೆ ಹೆಚ್ಚಲಿದೆ.

ಸಚಿವ ಸಂಪುಟದ ಈ ನಿರ್ಧಾರವನ್ನು ಶ್ಲಾಘಿಸಿರುವ ಸರ್ಕಾರಿ ಅಧಿಕಾರಿಗಳು, ಇದು ‘ಬಡವರಿಗೆ ನೀಡಲಾದ ಹೊಸ ವರ್ಷದ ಉಡುಗೊರೆ. ನಯಾಪೈಸೆಯನ್ನೂ ಬಡವರು ಪಡಿತರಕ್ಕೆ ಖರ್ಚು ಮಾಡಬೇಕಿಲ್ಲ’ ಎಂದು ಬಣ್ಣಿಸಿದ್ದಾರೆ.

Leave a Reply

Your email address will not be published. Required fields are marked *