ಇವತ್ತಿನ ದಿನ ರೈತರಿಗೆ ನಿಮ್ಮ ಮನೆಯಲ್ಲಿ ನೀವೇ ಸಾವಯವ ರೀತಿಯಲ್ಲಿ ಕಳೆನಾಶಕ ತಯಾರಿಕೆಯ ಬಗ್ಗೆ ಇರುವ ಸಂಪೂರ್ಣ ವಿವರವನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಮಾರುಕಟ್ಟೆಯಲ್ಲಿ ಸಿಗುವಂತಹ ಕಳೆನಾಶಕಗಳು ತುಂಬಾ ದುಬಾರಿಯಾಗಿರುತ್ತವೆ. ಕೆಲವೊಂದು ಸಲ 100ರಷ್ಟು ಅವು ಪಲಿತಾಂಶ ನೀಡುವುದಿಲ್ಲ. ಇದರಿಂದ ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತದೆ. ಇಂತಹ ಸಮಯದಲ್ಲಿ ರೈತರು ಮನೆಯಲ್ಲಿ ಕುಳಿತು ಮತ್ತು ಕಡಿಮೆ ವೆಚ್ಚದಲ್ಲಿ ಸಾವಯುವ ಕಳೆನಾಶಕ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಸಾವಯವ ಕಳೆನಾಶಕ ತಯಾರಿಸಲು ಬೇಕಾಗುವ ಸಾಮಗ್ರಿಗಳು:
* 20 ಲೀಟರ್ ಸಾಮರ್ಥದ ನೀರಿನ ಡ್ರಮ್
* 10 ಲೀಟರ್ ಗೋಮೂತ್ರ
* 2ಕೆಜಿ ಬಿಳಿ ಎಕ್ಕದ( ಯಕ್ಕಿ ಗಿಡ ) ಗಿಡದ ಎಲೆಗಳು
* 2ಕೆಜಿ ದಪ್ಪನೆಯ ಹರಳು ಉಪ್ಪು
* ಅರ್ಧ ಕೆಜಿ ಸುಣ್ಣದ ಕಲ್ಲು
* 2 ದೊಡ್ಡ ಗಾತ್ರದ ನಿಂಬೆಹಣ್ಣು
ಕಳೆನಾಶಕ ತಯಾರಿಸುವ ಪ್ರಕ್ರಿಯೆಯನ್ನು ನೋಡುವುದಾದರೆ,
» ಮೊದಲಿಗೆ ಬಿಳಿಯಕ್ಕದ ಎಲೆಗಳನ್ನು ಚೆನ್ನಾಗಿ ಅರೆದು ಅಥವಾ ರುಬ್ಬಿಕೊಳ್ಳಬೇಕಾಗುತ್ತದೆ.
» ಚೆನ್ನಾಗಿ ಅರೆದ ನಂತರ 10ಲೀಟರ್ ಗೋಮೂತ್ರಕ್ಕೆ ಬೆರೆಸಿಕೊಳ್ಳಬೇಕು.
» ಇದಾದ ನಂತರ ಈ ಮಿಶ್ರಣಕ್ಕೆ ಅರ್ಧ ಕೆಜಿ ಸುಣ್ಣದ ಕಲ್ಲನ್ನು ಬೆರೆಸಬೇಕು.
» ಇದಾದ ನಂತರ 2ಕೆಜಿ ಹರಳು ಉಪ್ಪನ್ನು ಈ ದ್ರವಣಕ್ಕೆ ಸೇರಿಸಬೇಕು.
» ಇವೆಲ್ಲವನ್ನೂ ತೆಗೆದುಕೊಂಡು ಡ್ರಮ್ನಲ್ಲಿರುವ ದ್ರಾವಣಕ್ಕೆ ಸೇರಿಸಬೇಕು.
» ಅದಾದ ನಂತರ ಒಂದು ಉದ್ದ ಕೋಲಿನಿಂದ ಡ್ರಮ್ ನಲ್ಲಿರುವ ದ್ರಾವಣವನ್ನು ಎಡದಿಂದ ಬಲಕ್ಕೆ ಚೆನ್ನಾಗಿ ತಿರುಗಿಸಬೇಕು ಅಥವಾ ಮಿಶ್ರಣ ಮಾಡಬೇಕು.
» ಇದಾದ ನಂತರ ಬ್ಯಾರಲನ್ನು ಒಂದು ಗೋಣಿ ಚೀಲದಿಂದ ಗಟ್ಟಿಯಾಗಿ ಮುಚ್ಚಬೇಕು.
» ಇದರ ನಂತರ ದ್ರಾವಣವನ್ನು ಒಂದು ವಾರದವರೆಗೆ ಕೊಳೆಯಲು ಬಿಡಬೇಕು. ಹಾಗೆಯೇ ಬ್ಯಾರೆಲ್ ನ ಬಾಯಿಯನ್ನು ಗಾಳಿಯಾಡದಂತೆ ಗೋಣಿ ಚಿಲದಿಂದ ಮುಚ್ಚಬೇಕು.
» ಒಂದು ವಾರದ ನಂತರ ಕಳೆನಾಶಕ ಅಥವಾ ಮಿಶ್ರಣ ಚೆನ್ನಾಗಿ ಕೊಳೆತು ಒಂದು ಹದಕ್ಕೆ ಬರುತ್ತದೆ.
» ಈ ಮಿಶ್ರಣಕ್ಕೆ ಒಂದು ವಾರದ ನಂತರ ನಿಂಬೆ ಹಣ್ಣಿನ ರಸವನ್ನು ಹಿಂಡಬೇಕಾಗುತ್ತದೆ.
ಇದನ್ನು ಓದಿರಿ : ಪಿ ಎಂ ಕಿಸಾನ್ ಯೋಜನೆಯಲ್ಲಿ ರೈತರಿಗೆ ಇನ್ನು ಮುಂದೆ 8000 ರೂ ಸಿಗುತ್ತದೆ.
ಹೀಗೆ ತಯಾರಿಸಿದ 1 ಲೀಟರ್ ಮಿಶ್ರಣ ಅಥವಾ ಕಳೆನಾಶಕವನ್ನು 9 ಲೀಟರ್ ನೀರಿಗೆ ಬೆರೆಸಿ ಕಳೆ ಮೇಲೆ ಸಿಂಪಡಿಸಿದರೆ ಮಾತ್ರ ಕಳೆ ನಾಶವಾಗುತ್ತದೆ.
ಇಲ್ಲಿ ನೆನಪಿಡಬೇಕಾದ ಒಂದು ಮುಖ್ಯ ಅಂಶವೇನೆಂದರೆ ಕಳೆ ನಾಶಕ ಸಿಂಪಡಣೆ ಮಾಡುವಾಗ ಮುಖ್ಯ ಬೆಳೆಗೆ ತಾಕದಂತೆ ಸಿಂಪಡಣೆ ಮಾಡಬೇಕು.
ಬಲಿತ ಕಳೆಗಳಿಗೆ ಈ ಸಾವಯವ ಕಳೆನಾಶಕವು ಅಷ್ಟೊಂದು ಪರಿಣಾಮಕಾರಿ ಆಗಿರುವುದಿಲ್ಲದಿದ್ದರೂ ಕೂಡ ಮುಖ್ಯವಾಗಿ ಸಣ್ಣ ಕಳೆಗಳು ಹಾಗೂ 2 ರಿಂದ 3 ಇಂಚು ಏತ್ತರ ಇರುವ ಕಳೆಗಳಿಗೆ ಇದು 100ರಷ್ಟು ಫಲಿತಾಂಶವನ್ನು ನೀಡುತ್ತದೆ. ಇದೊಂದು ಯಾವುದೇ ಖರ್ಚಿಲ್ಲದೇ ಮನೆಯಲ್ಲಿ ಸುಲಭವಾಗಿ ತಯಾರಿಸುವಂತಹ ಕಳೆನಾಶಕವಾಗಿದ್ದು ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಉಪಯೋಗವನ್ನು ಪಡೆದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬೇಕು.