ಪ್ರಿಯರೇ, ರಾಜ್ಯ ಸರ್ಕಾರವು ನೇಕಾರ ವರ್ಗಕ್ಕೆ ಸೇರಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ 5,000 ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡುವ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ.ಪಿ ಎಂ ಕಿಸಾನ್ ಯೋಜನೆ, ಇನ್ನು ಮುಂದೆ ರೈತರಿಗೆ ಸಿಗಲಿದೆ 8000 ರೂಪಾಯಿ ಈ ಯೋಜನೆ ಹೆಸರು ನೇಕಾರ ಸಮ್ಮಾನ್ ಯೋಜನೆ. ಇದರ ಫಲನುಭವಿಗಳು ಹಣವನ್ನು ಪಡೆಯುವುದು ಹೇಗೆ?ಇದಕ್ಕೆ ಇರಬೇಕಾದ ಅರ್ಹತೆಗಳೇನು? ಎಂಬುದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ರಾಜ್ಯ ಸರ್ಕಾರದ ಕಡೆಯಿಂದ ನೇಕಾರ ಸಮ್ಮಾನ್ ಯೋಜನೆ ಎಂದು ಕೈಮಗ್ಗ ನೇಕಾರರಿಗೆ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ನೇಕಾರ ವರ್ಗಕ್ಕೆ ಸೇರಿದ ಫಲನುಭವಿಗಳಿಗೆ ಐದು ಸಾವಿರ ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಆರ್ಥಿಕ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ ಹಾಗೂ ನೋಂದಾಯಿತ ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯಲ್ಲಿ ಆರ್ಥಿಕ ಸಹಾಯಧನವಾಗಿ 5,000 ವರೆಗೂ ಹಣವನ್ನು ಪಡೆಯಬಹುದು.
ಮುಖ್ಯಮಂತ್ರಿಗಳು 46,864 ನೋಂದಾಯಿತ ಕೈಮಗ್ಗ ನೇಕಾರರಿಗೆ 5,000 ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನೀವೇನಾದರೂ ಕೈಮಗ್ಗ ನೇಕಾರರಾಗಿದ್ದಾರೆ ನೇಕಾರ ಸಮ್ಮಾನ್ ಯೋಜನೆ ಮೂಲಕ ಪ್ರತಿ ವರ್ಷ ಆರ್ಥಿಕ ಸಹಾಯಧಾನವಾಗಿ 5,000 ರೂಪಾಯಿಗಳನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಿಕೊಳ್ಳಬಹುದು.
ಇದನ್ನು ಓದಿರಿ :: ಪಿ ಎಂ ಕಿಸಾನ್ ಯೋಜನೆ, ಇನ್ನು ಮುಂದೆ ರೈತರಿಗೆ ಸಿಗಲಿದೆ 8000 ರೂಪಾಯಿ
ನೀವು ಈ ಹಣವನ್ನು ಪಡೆಯಲು,
* ನೋಂದಾಯಿತ ನೇಕಾರರು ಆಗಿರಬೇಕು.
* ಕಚೇರಿಗೆ ಹೋಗಿ ಮೊದಲು ನೊಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ.
* ಹಾಗೆಯೇ ನೋಂದಣಿಯನ್ನು ಸೇವ್ ಸಿಂಧೂ ಪೋರ್ಟಲ್ ಮೂಲಕ ಕೂಡ ಮಾಡಿಕೊಂಡು ಈ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.
* ನಿಮ್ಮ ಬ್ಯಾಂಕ ಖಾತೆಗೆ NPCI ಮ್ಯಾಪಿಂಗ್ ಮಾಡಿದರೆ ಮಾತ್ರ ನೀವು ಈ ಹಣವನ್ನು ಪಡೆಯಬಹುದು.
ಫಲನುಭವಿಗಳು ಹಾಗೂ ಅಭ್ಯರ್ಥಿಗಳು ಈ ಬಹುಮುಖ್ಯ ಮಾಹಿತಿಯ ಸದುಪಯೋಗವಂನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.