ಪ್ರಿಯ ರೈತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕೋಟ್ಯಂತರ ರೈತರಿಗೆ ಬಂಪರ್ ಸಿಹಿ ಸುದ್ದಿ ಬಂದಿದೆ. ರೈತರ ಆದಾಯ ದ್ವಿಗುಣಗೊಳ್ಳಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ದ್ವಿಗುಣಗೊಳ್ಳಲಿದೆ. ಇದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಒಂದು ಮಹತ್ವದ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ವಾಸ್ತವವಾಗಿ ಕೇಂದ್ರ ಸರ್ಕಾರ ತನ್ನ ಎರಡನೇ ಅವಧಿಯ 5ನೇ ಬಜೆಟ್ ಅನ್ನು ಮಂಡಿಸಲಿದೆ. ಇದರಲ್ಲಿ ರೈತರ ಆದಾಯಕ್ಕೆ ಸಂಬಂಧಿಸಿದಂತೆ ದೊಡ್ಡ ಘೋಷಣೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ಬಾರಿಯ ಬಜೆಟ್ ರೈತರಿಗೆ ವಿಶೇಷವಾಗಲಿದೆ ಎಂದು ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಈ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆ ಮಾಡಬಹುದೆಂದು ಹೇಳಲಾಗುತ್ತಿದೆ.
ಈ ಸಾಲಿನ ಮುಂಬರುವ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಲ್ಲಿ ವಾರ್ಷಿಕವಾಗಿ ಪಡೆಯುವ 6,000 ರೂಪಾಯಿ ಮೊತ್ತದಲ್ಲಿ ಹೆಚ್ಚಳಗೊಳಿಸುವ ನಿರೀಕ್ಷೆ ಇದೆ. ವಾಸ್ತವವಾಗಿ ಈ ಯೋಜನೆಯ ಹಣದಲ್ಲಿ ಹೆಚ್ಚಳವಾಗಿ ಘೋಷಿಸುವ ಬೇಡಿಕೆ ಹಲವು ಬಾರಿ ಇಟ್ಟಿದೆ. 2023 ನೇ ಸಾಲಿನ ಸಾಮಾನ್ಯ ಬಜೆಟ್ ನಲ್ಲೂ ಈ ಯೋಜನೆಯ ಕಂತಿನ ಹಣವನ್ನು ಹೆಚ್ಚಿಸುವ ಬೇಡಿಕೆ ಪ್ರಚಳಿಲಿತದಲ್ಲಿತ್ತು. ಆದರೆ ಈ ಬಾರಿ ಬಜೆಟ್ ನಲ್ಲಿ ಈ ಮೊತ್ತ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಈ ವರ್ಷದಲ್ಲಿ ಬರುವ ಆರ್ಥಿಕ ವರ್ಷದಿಂದ ಈ ಮೊತ್ತವನ್ನು 6,000 ರೂಪಾಯಿಯಿಂದ 8,000 ರೂಪಾಯಿಗೆ ಹೆಚ್ಚಿಸಿ ರೈತರಿಗೆ ವರ್ಷಕ್ಕೆ 4 ಕಂತುಗಳಂತೆ ನೀಡಬಹುದೆಂದು ಚರ್ಚಿಸಲಾಗುತ್ತಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸರ್ಕಾರದ ಮಹಾತ್ವ ಆಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಅಡಿಯಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಲುವಾಗಿ ರೈತರ ಖಾತೆಗೆ ರೂ.2,000 ಯಂತೆ ಮೂರು ಕಂತುಗಳನ್ನು ಅಂದರೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯ 12 ಕಂತುಗಳು ಈಗಾಗಲೇ ರೈತರ ಖಾತೆಗೆ ಜಮಾ ಮಾಡಲಾಗಿದೆ. 13ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆಯ ಮೊತ್ತವನ್ನು ಹೆಚ್ಚಿಸಿದರೆ ರೈತರಿಗೆ ಹೆಚ್ಚಿನ ಲಾಭವಾಗಲಿದೆ.
ಇದೆಷ್ಟು ಈ ಯೋಜನೆ ಬಗ್ಗೆ ಪ್ರಮುಖ ಮಾಹಿತಿಯಾಗಿದ್ದು ರೈತರು ಈ ಬಹು ಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆ ಲಾಭವನ್ನು ಪಡೆದುಕೊಳ್ಳಬೇಕು.