ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಹೊಸ ಸಂತಸದ ಸುದ್ದಿ ನೀಡಿದೆ. ರಾಜ್ಯದಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ರೈತರಿಗೆ ಹಿಂಗಾರಿ ಬೆಳೆಗಳ ವಿಮೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿದ ರೈತರು ತಮ್ಮ ಬೆಳೆವಿಮೆ ಬಗ್ಗೆ ಮಾಹಿತಿ ಪಡೆಯುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ರೈತರು ತಮ್ಮ ಹೊಲದಲ್ಲಿ ಬೆಳೆದ ಹಿಂಗಾರಿ ಬೆಳೆಗಳ ಸಮೀಕ್ಷೆ ನಡೆಸಿ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಇದೊಂದು ಒಳ್ಳೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ ಹಾಗೂ ರೈತರಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ.

ಪರಿಹಾರ ಪಡೆಯುವ ರೈತರ ಪೈಕಿ ಆಧಾರ್ ಕಾರ್ಡ್ ಲಿಂಕ್ ಆಗದವರು ಹೆಚ್ಚಿದ್ದಾರೆ. ಕೂಡಲೇ ರೈತರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಬೆಳೆವಿಮೆಗೆ ಲಿಂಕ್ ಆಗಿದೆ ಇಲ್ಲವೆಂದು ಪರಿಶೀಲಿಸಿಕೊಳ್ಳಬೇಕು. ಆದರೆ ಇನ್ನಿತರ ತಿದ್ದುಪಡಿ ಇದ್ದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಕ್ಕೆ ತರಬೇಕು ಜೊತೆಗೆ ಸಲ್ಲಿಸಲಾದ ದಾಖಲೆಗಳು ಪಾಲಿಸಬೇಕಾದ ನಿಯಮಗಳು ಸರಿಯಾಗಿದೆಯೇ ಎಂದು ರೈತರು ಗಮನವಹಿಸಬೇಕು ಎಂದರು.

ನೀವು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಜಿಲ್ಲೆಯಲ್ಲಿ ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನ ಯಾವುದು ಎಂಬುದನ್ನು ತಿಳಿಯಲು ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡರೆ ಸಾಕು, ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಿದ್ದಿರಿ ಹಾಗೂ ಎಷ್ಟು ಹಣ ಹಾಗೂ ನಿಮ್ಮ ಬೆಳೆ ವಿಮೆ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಈ ಲಿಂಕ್ ಅನ್ನು ಉಪಯೋಗಿಸಿ.

ಈ ಲಿಂಕ್ open ಆಗದಿದ್ದರೆ ಈ ಲಿಂಕ್ ನ್ನು copy ಮಾಡಿ Google ನಲ್ಲಿ Paste ಮಾಡಿ ಚೆಕ್ ಮಾಡಿ

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಅಥವಾ ಇಲ್ಲ ಎಂಬುದನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.https://www.samrakshane.karnataka.gov.in/PublicView/FindCutOff.aspx ಕ್ಲಿಕ್ ಮಾಡಬೇಕು.

ನಂತರ ವರ್ಷದ ಆಯ್ಕೆ “ 2022 – 23 ” ಮತ್ತು ಋುತು ” Kharif / Rabi / Summer ” o select ಮಾಡಬೇಕು. ನಂತರ ಮುಂದೆ ಹೋಗಬೇಕು.

ಅದಾದ ನಂತರ ಅಲ್ಲಿ ಒಂದು Farmer ಕಾಲಂನಲ್ಲಿ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಅಲ್ಲಿರುವ ” captcha ಹಾಕಬೇಕು. ಈ ರೀತಿ ಮಾಡಿ ಬೆಳೆವಿಮೆ ಪರಿಹಾರ ಸ್ಟೇಟಸ್ ಚೆಕ್ ಮಾಡಬಹುದು.

ಬೆಳೆ ಹಾನಿ ಪರಿಹಾರ ಎಂದರೇನು? ಅದರ ಬಗ್ಗೆ ತಿಳಿಯೋಣ –

ಬೆಳೆಹಾನಿ ಪರಿಹಾರ ಎಂದರೆ ಪ್ರಕೃತಿಯಲ್ಲಿ ಹೆಚ್ಚಿನ ಮಳೆ, ಅತೀವೃಷ್ಟಿ, ಭಾರಿ ಪ್ರವಾಹ, ಹಾಗೂ ಬರಗಾಲ ಉಂಟಾಗಿ ಬೆಳೆ ಹಾನಿಯಾಗಿದ್ದರೆ ಪ್ರತಿ ಎಕರೆಗೆ ಬೆಳೆಗಳ ಆಧಾರದ ಮೇಲೆ ಬೆಳೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರವು ಪ್ರತಿ ವರ್ಷ ಘೋಷಿಸುತ್ತದೆ. ಹಾಗೂ ಅದು ಬೆಳೆಗಳ ಆಧಾರದ ಮೇಲೆ ವಿಭಜಿಸಿ ಪರಿಹಾರ ನೀಡಲಾಗುವುದು. ರೈತರಿಗೆ ಸಹಾಯ ಮಾಡಬೇಕು ಎಂಬ ಹಿತದೃಷ್ಟಿಯಿಂದ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.

ಮುಖ್ಯವಾಗಿ ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ರೈತರು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡು, ಫ್ಲಡ್ ಆಯ್ಕೆ ಮಾಡಿ ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದಾರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.

ಅದೇ ರೀತಿ ಕೃಷಿ ಸಚಿವರು ವಿಮಾ ಕಂಪೆನಿಗೆ ತಾಕಿತ್ತು ಮಾಡಿದ್ದಾರೆ. ಸಚಿವರು ಸ್ಪಷ್ಟನೆ ನೀಡಿದ್ದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ವಿವರಿಸಿದರು. ಈಗಾಗಲೇ ಬೆಳೆ ವಿಮೆ ಮಾಡಿಸಿರುವ ರೈತರು ಪೂರ್ವ ಮುಂಗಾರು ಹೊಂಗಮಿನ ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ ಪರಿಹಾರ ಕ್ರಮದ ಸಲುವಾಗಿ ವಿಮಾ ಕಂಪನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರಿ ಎಂದು ಸಚಿವರು ತಾಕಿತ್ತು ಮಾಡಿದರು.

Leave a Reply

Your email address will not be published. Required fields are marked *