ಪ್ರಿಯ ರೈತರೇ, ಕರ್ನಾಟಕ ರಾಜ್ಯದ್ಯಂತ ಇರುವ ಎಲ್ಲಾ ರೈತರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ನೀವು ಹಸು, ಎಮ್ಮೆ, ಕುರಿ ಅಥವಾ ಮೇಕೆ ಘಟಗಳ ಸ್ಥಾಪನೆಗೆ ಹೊಸ ಅರ್ಜಿಗಳನ್ನು ಕರೆಯಲಾಗಿದೆ.
ಅಂದರೆ ಈ ಘಟಕಗಳ ಸ್ಥಾಪನೆ ಮಾಡಲು ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಸರ್ಕಾರದಿಂದ ನೇರವಾಗಿ ಕೇವಲ 21 ದಿನಗಳಲ್ಲಿ ನಿಮ್ಮ ಖಾತೆಗೆ ಹಣವನ್ನು ಬಿಡುಗಡೆ ಮಾಡಿಸಬಹುದು. ಸಹಾಯಧನ ಪಡೆಯಲು ಬೇಕಾಗುವ ದಾಖಲೆಗಳೇನು? ಅರ್ಜಿಗಳನ್ನು ಸಲ್ಲಿಸುವುದು ಹೇಗೆ? ಇವೆಲ್ಲವುಗಳ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಪಶುಪಾಲನ ಮತ್ತು ಪಶುಸೇವೆ ಇಲಾಖೆ ವತಿಯಿಂದ 2022 ಮತ್ತು 23ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು ಹಸು, ಎಮ್ಮೆ, ಕುರಿ ಅಥವಾ ಮೇಕೆಗಳ ಘಟಕದ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಂದು ಮಿಶ್ರತಳಿ ಹಸು ಹಾಗೂ ಸುಧಾರಿತ ಎಮ್ಮೆ ಘಟಕದಲ್ಲಿ ಒಂದು ಮಿಶ್ರತಳಿ ಹಸು ಅಥವಾ ಒಂದು ಸುಧಾರಿತ ತಳಿ ಎಮ್ಮೆ ವಿತರಿಸಲಾಗುವುದು.
ಈ ಶೆಡ್ ಅಥವಾ ಘಟಕಗಳ ಸ್ಥಾಪನೆಗೆ ಖರ್ಚು ವೆಚ್ಚ ಒಟ್ಟಾರೆಯಾಗಿ 60,000/- ರೂಪಾಯಿ ಇದ್ದು ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 54,000 ರೂಪಾಯಿ ಅಷ್ಟು ಸಹಾಯಧನ ನೀಡಲಾಗುತ್ತದೆ. ಹಾಗೂ 60,000 ರೂಪಾಯಿಗಳನ್ನು ಬ್ಯಾಂಕ್ ನಿಂದ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು. 10+1 ಕುರಿ ಅಥವಾ ಮೇಕೆ ಘಟಕದಲ್ಲಿ ಕುರಿ ಅಥವಾ ಮೇಕೆ ಘಟಕದಲ್ಲಿ ಒಂದು ಟಗರು ಅಥವಾ ಒಂದು ಹೋತವನ್ನು ವಿತರಿಸಲಾಗುವುದು. ಈ ಘಟಕದ ವೆಚ್ಚ 66,000 ರೂಪಾಯಿ ಇದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 59,000 ರೂಪ ಅಷ್ಟು ಸಹಾಯಧನ ನೀಡಲಾಗುವುದು. ಹಾಗೂ ಉಳಿದ 6,600 ರೂಪಾಯಿಗಳನ್ನು ಬ್ಯಾಂಕ್ ನಿಂದ ಸಾಲವಾಗಿ ಅನುಷ್ಠಾನಗೊಳಿಸಲಾಗುವುದು.
ಸಹಾಯಧನ ಪಡೆಯಲು ಇರಬೇಕಾದ ಅರ್ಹತೆಗಳನ್ನು ನೋಡುವುದಾದರೆ,
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು
* ಕೂಲಿ ಕಾರ್ಮಿಕರು
* ಕೃಷಿ ಕಾರ್ಮಿಕರು
* ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರು.
* ಸರ್ಕಾರದ ನಿಯಮದಂತೆ ಮಹಿಳೆಯರಿಗೆ ಶೇಕಡ 33.33ರಷ್ಟು ಮತ್ತು ವಿಶೇಷ ಚೇತನರಿಗೆ ಪ್ರಥಮ ಆದ್ಯತೆ ನೀಡಲಾಗುವುದು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು RD ನಂಬರ್ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
* ಅರ್ಜಿದಾರರು Fruits ಐಡಿಯನ್ನು(FID) ಹೊಂದಿರಬೇಕು.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/12/2022 ಆಗಿರುತ್ತದೆ.
ಇದನ್ನು ಓದಿರಿ :-
ಬೆಳೆ ಪಡೆಯಲು ಆಧಾರ್ ಲಿಂಕ್ ಆಗಿದೆ ಇಲ್ಲವೋ ಚೆಕ್ ಮಾಡುವುದು ಹೇಗೆ??
ಈ ಕೆಲಸ ಮಾಡದಿದ್ದರೆ ಮುಂದಿನ ಕಂತಿನ ಹಣ ಜಮಾವಾಗುವುದಿಲ್ಲ ಪಿ ಎಮ್ ಕಿಸಾನ್ ಯೋಜನೆ!!
ಈ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿಗಾಗಿ ತಾಲೂಕುಗಳ ಮುಖ್ಯ ಪಶು ವೈದ್ಯಧಿಕಾರಿಗಳ ಕಚೇರಿಗೆ ಸಂಪರ್ಕಿಸಬಹುದು ಮತ್ತು ಸಂಬಂಧಪಟ್ಟ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಲಾಗುವುದು.
ಆಸಕ್ತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.