ಪಿಎಂ ಕಿಸಾನ್ ಯೋಜನೆಯು ಭಾರತ ಸರ್ಕಾರದ ಪ್ರಮುಖ ರೈತರ ಕಲ್ಯಾಣ ಯೋಜನೆಯಾಗಿದೆ. ಪಿಎಂ ಕಿಸಾನ್ ಯೋಜನೆಯನ್ನು ಡಿಸೆಂಬರ್ 2018 ರಲ್ಲಿ ಪ್ರಾರಂಭಿಸಲಾಯಿತು. ಪಿಎಂ ಕಿಸಾನ್ ಕನಿಷ್ಠ ಬೆಂಬಲ ಆದಾಯ ನೀಡುವ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹ ರೈತ ಕುಟುಂಬಗಳಿಗೆ ರೂ.6000 ನೆರವು ನೀಡಲಾಗುತ್ತದೆ.
ಪಿಎಂ ಕಿಸಾನ್ ಯೋಜನೆಯ ಪ್ರಾಥಮಿಕ ಉದ್ದೇಶ ದೇಶದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವುದು.ಈಗಾಗಲೇ 12 ಕಂತಿನವರೆಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಹಲವು ಜನಪ್ರಿಯ ರೈತರ ಕಲ್ಯಾಣ ಯೋಜನೆಗಳು ಪ್ರಯೋಜನವಾಗುತ್ತಿದೆ.ನಗರಗಳನ್ನು ಹೊರತು ಪಡಿಸಿ ಹಳ್ಳಿಗಳಲ್ಲಿರುವ ಅರ್ಹ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣ ತಲುಪುತ್ತಿದೆ.ಇದಕ್ಕೆ ರಾಜ್ಯಗಳಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದು ಪ್ರತಿಯೊಬ್ಬ ಬಡವರಿಗೂ ನೇರವಾಗುವುದು ಇದರ ಉದ್ದೇಶವಾಗಿದೆ.ಅಂತಹ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಲ್ಲಿದೆ.
ಈ ಯೋಜನೆ ಅಡಿಯಲ್ಲಿ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ 2000 ರೂ. ಅಂತೆ ವಾರ್ಷಿಕವಾಗಿ 6000ರೂ. ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗುತ್ತದೆ.ಈಗಾಗಲೇ ಈ ಯೋಜನೆಯಡಿಯಲ್ಲಿ 12 ನೇ ಕಂತಿನ ವರೆಗೆ ಹಣ ವರ್ಗಾವಣೆ ಆಗಿದ್ದು,13 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.
13 ನೇ ಕಂತಿನ ಹಣವನ್ನು ಪಡೆಯಲು ಈ ತಪ್ಪುಗಳನ್ನು ಮಾಡಬೇಡಿ.
ಈ ಸಮಯದಲ್ಲಿ ರೈತರು ಈ ತಪ್ಪುಗಳನ್ನು ಮಾಡಬಾರದು.ಒಂದು ತಪ್ಪು ಮಾಡಿದರು ಹಣ ಹಿಂದಿರುಗುವ ಸಂಭವ ಇರುತ್ತದೆ.
1) ಮೊದಲನೇ ತಪ್ಪು ಭೂ ದಾಖಲೆಗಳನ್ನು ಪರಿಶೀಲನೆ ಮಾಡಿರುವುದಿಲ್ಲ ಹಾಗಾಗಿ ಹಣ ಬರುವ ಸಾಧ್ಯತೆ ಇರುವುದಿಲ್ಲ ಅದಕ್ಕಾಗಿ ಭೂ ದಾಖಲೆಗಳನ್ನು ಪರಿಶೀಲನೆಯನ್ನು ಮಾಡಬೇಕಾಗುತ್ತದೆ.
2) ಎರಡನೇ ತಪ್ಪು, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಹರಾಗದ ಅನೇಕ ರೈತರು ಹಾನಿಯಾಗಿದ್ದಾರೆ, ಇಂತಹ ರೈತರು ತಪ್ಪಾಗಿ ನೊಂದಣಿ ಮಾಡಿಕೊಳ್ಳುತ್ತಿದ್ದಾರೆ ಈ ತಪ್ಪಿನಿಂದ ಹಣ ಬರುತ್ತಿಲ್ಲ.ಹಣ ಪಾವತಿಸಿದ ನಂತರ ಹಣವನ್ನು ವಾಪಸ್ ಪಡೆಯುತ್ತಾರೆ.
3) ಮೂರನೆಯದಾಗಿ ನೀವು ಕಡತವನ್ನು ತಪ್ಪಾಗಿ ನಮೂದಿಸಿದ್ದರೆ ಸರಿಯಾಗಿ ನಮೂದಿಸಬೇಕು ಯಾಕಂದರೆ ಸರ್ಕಾರದಿಂದ ವಸೂಲಾತಿಯ ನೋಟಿಸ್ ಕೂಡ ಬರಲಿದೆ. ಇದನ್ನು ಹಿಂತಿರುಗಿಸದೆ ಇದ್ದರೆ ನಿಮ್ಮ ಮೇಲೆ ಸರ್ಕಾರ ಕಾನೂನಿನ ಪ್ರಕಾರ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.
4) ನಾಲ್ಕನೇಯದಾಗಿ ಸಾಕಷ್ಟು ರೈತರು ಇ -ಕೆವೈಸಿ ಮಾಡಿರುವುದಿಲ್ಲ. ಆದರೆ ನೀವು ಅಂತಹ ತಪ್ಪನ್ನು ಮಾಡದೆ ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಿ ಕಂತಿನ ಲಾಭ ಪಡೆಯಲು ಇದು ಕಡ್ಡಾಯವಾಗಿದೆ.
ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ.ಇದು ರೈತರಿಗೆ ನಿಶ್ಚಿತವಾದ ಆದಾಯ ಕಲ್ಪಿಸುವ ಯೋಜನೆಯಾಗಿದೆ.ಇದರಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೋಳಿಸಿದೆ.