ನಮಸ್ಕಾರ ಪ್ರಿಯ ರೈತ ಭಾಂದವರೇ, ಇಂದು ನಾವು ಯಾವ ಹೊಲದ ಅಥವಾ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ಬರೀ ಕೇವಲ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಇದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲ ರೈತರು ತಮ್ಮ ತಮ್ಮ ಹೊಲದ ಮೇಲೆ ಸಾಲವನ್ನು ತೆಗೆದಿರುತ್ತಾರೆ. ಬರೀ ಕೇವಲ ಸರ್ವೇ ನಂಬರ್ ಮತ್ತು ಹಿಸ್ಸಾ ಸಂಖ್ಯೆಯನ್ನು ನಮೂದಿಸಿ ಯಾರ ಹೊಲದ ಮೇಲೆ ಎಷ್ಟು ಸಾಲ ಇದೆ ಎಂಬುದನ್ನು ತಿಳಿದುಕೊಳ್ಳಬಹುದು.
ಇದರ ಪ್ರಕ್ರಿಯೆಯನ್ನು ನೋಡುವುದಾದರೆ,
* ಮೊದಲಿಗೆ ಗೂಗಲ್ ನಲ್ಲಿ “ಭೂಮಿ” ಎಂದು ಸರ್ಚ್ ಮಾಡಿಕೊಳ್ಳಿ.
* ನಂತರ ನಿಮಗೆ “ಭೂಮಿ” ಪೋರ್ಟಲ್ ಓಪನ್ ಆಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಇನ್ನೊಂದು ಮುಖಪುಟ ತೆರೆದುಕೊಳ್ಳುತ್ತದೆ.
* ಅದರಲ್ಲಿ ನಿಮಗೆ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಹಳ್ಳಿ, ಸರ್ವೇ ನಂಬರ್, ಹಿಸ್ಸಾ ನಂಬರ್ ಹೀಗೆ ಅನೇಕ ಮಾಹಿತಿಯನ್ನು ಆಯ್ಕೆ ಮಾಡಲು ಕೇಳುತ್ತದೆ.
* ಸರಿಯಾದ ಆಯ್ಕೆಯನ್ನು ಆಯ್ಕೆ ಮಾಡಿದ ನಂತರ ಅಲ್ಲಿ ಕಾಣುವ “fetch details” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
* ನಂತರ ನಿಮಗೆ ನೀವು ನಮೂದಿಸಿದ ಸರ್ವೇ ನಂಬರ್ ಗೆ ಸಂಭಂಧಿಸಿದಂತೆ ಹೊಲದ ಮಾಲೀಕರ ಹೆಸರು ಮತ್ತು ಒಟ್ಟು ಹೊಲದ ವಿಸ್ತೀರ್ಣ ಮತ್ತು ಇನ್ನಿತರ ಮಾಹಿತಿಗಳನ್ನು ತೋರಿಸುತ್ತದೆ.
* ನಂತರ ಕೆಳಗೆ ಕಾಣುವ “view” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಆ ಹೊಲದ ಉತಾರ ತೆರೆದುಕೊಳ್ಳುತ್ತದೆ.
* ಹೊಲದ ಉತಾರಿಯಲ್ಲಿ ಕೊನೆಯ ಕಾಲಂನಲ್ಲಿ ಅಂದರೆ 11ನೇ ಕಾಲಮ್ನಲ್ಲಿ ಆ ಸರ್ವೇ ನಂಬರ್ ನ ಮೇಲೆ ಎಷ್ಟು ಸಾಲ ತೆಗೆದುಕೊಂಡಿದೆ ಮತ್ತು ಬೋಜ ಎಷ್ಟು ಮತ್ತು ಇನ್ನಿತರ ಮಾಹಿತಿಗಳನ್ನು ನಮೂದಿಸುತ್ತದೆ.
ನೀವು ಈ ಸರ್ವೇ ನಂಬರ್ ನ ಮೇಲೆ ಅಥವಾ ಆ ಹೊಲದ ಮೇಲೆ ತೆಗೆದುಕೊಂಡಿರುವ ಸಾಲಕ್ಕೆ ಬೋಜ ಎನ್ನುವರು. ನೀವು ನಿಮ್ಮ ಹೊಲವನ್ನು ಇನ್ನೊಬ್ಬರಿಗೆ ಮಾರಾಟ ಮಾಡುವಾಗ ಅಥವಾ ಹಸ್ತಾಂತರಿಸುವಾಗ ಈ ಬೋಜವನ್ನು ತೆಗೆಸಿಕೊಡಲು ಹೇಳುತ್ತಾರೆ. ಆಗ ನೀವು ಆ ಹೊಲದ ಮೇಲಿರುವ ಸಾಲವನ್ನು ತುಂಬಿ ತಾಲೂಕಿನಲ್ಲಿರುವ ಸಬ್ ರಿಜಿಸ್ಟರ್ ಆಫೀಸ್ ಗೆ ಭೇಟಿ ನೀಡಿ ನಿಮ್ಮ ಹೊಲದ ಮೇಲಿನ ಬೋಜಾವನ್ನು ತೆಗೆಸಬೇಕು.
ನೀವು ಮತ್ತೆ ಆ ಹೊಲದ ಮೇಲೆ ಸಾಲ ತೆಗೆಯಲು ಹೋದರೇ ಬ್ಯಾಂಕಿನವರು ನಿಮ್ಮ ಹೊಲದ ಮೇಲಿನ ಬೋಜಾ ತೆಗೆಸಲು ಹೇಳುತ್ತಾರೆ. ಅದನ್ನು ತೆಗೆಸಿದಾಗ ಮಾತ್ರ ನೀವು ಆ ಹೊಲದ ಮೇಲೆ ಇನ್ನೊಮ್ಮೆ ಸಾಲ ತೆಗೆಯಲು ಬರುತ್ತದೆ.ನೀವು ಆ ಹೊಲದ ಮೇಲಿನ ಬೋಜಾ ತೆಗೆಸಲು ನೀವೇ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಬೇಕು.
ನೀವೇನಾದರೂ ಬೋಜಾ ತೆಗೆಸದೆ ಹೊಲವನ್ನು ಇನ್ನೊಬ್ಬರಿಗೆ ಮಾರಾಟ ಮಾಡಿದರೆ ಆ ಹೊಲದ ಮೇಲಿನ ಬೋಜವು ಮಾರಾಟ ಮಾಡಿದವರಿಗೆ ಹಸ್ಥಾ0ತರವಾಗುತ್ತದೆ. ಆ ಹೊಲದ ಮೇಲಿನ ಸಾಲವನ್ನು ಖರೀದಿ ಮಾಡಿದವರು ತುಂಬ ಬೇಕಾಗುತ್ತದೆ.
ಈ ರೀತಿಯಾಗಿ ಯಾವ ಹೊಲದ ಮೇಲೆ ಎಷ್ಟು ಸಾಲ ಇದೆ ಎಂಬುದನ್ನು ಕೇವಲ ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್ ನಮೂದಿಸಿ ನಿಮ್ಮ ಮೊಬೈಲಲ್ಲಿ ಪಡೆದುಕೊಳ್ಳಬಹುದು. ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು.