ಆತ್ಮೀಯ ರೈತ ಬಾಂಧವರೇ ಇಂದು ನಾವು ನೀವು ಯಾವ ಸ್ಥಳದಲ್ಲಿ ಇದ್ದೀರಿ ಹಾಗೂ ನೀವು ನಿಂತಿರುವ ಸ್ಥಳ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಹೇಗೆ ತಿಳಿದುಕೊಳ್ಳಣ.

ರೈತರೇ ಈಗ ಜಮೀನಿನ ವಿಷಯದಿಂದಲೇ ಹಲವಾರು ಜಗಳಗಳು ಹೊಡೆದಾಟಗಳು ಆಗುತ್ತಿರುತ್ತವೆ ಇದನ್ನು ತಡೆಗಟ್ಟಲು ಹಲವಾರು ರೀತಿಯ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಅಂತಹದ್ದೇ ಒಂದು ಹೊಸ ಪ್ರಯತ್ನ, ಇಲ್ಲಿ ನಾವು ನೀವು ನಿಂತಿರುವ ಜಮೀನು ಯಾರ ಐಸಿರಿಗಿದೆ ಆಗು ಅದರ ಪಹಣಿ ಸಂಖ್ಯೆ ಇದರ ಕುರಿತು ತಿಳಿದುಕೊಳ್ಳೋಣ. ರೈತರೇ ನೀವು ನಿಮ್ಮ ಜಮೀನಿನಲ್ಲಿ ನಿಂತುಕೊಂಡು ಈ ಕೆಳಗೆ ತಿಳಿಸಿರುವಂತೆ ಮಾಡುವ ಮೂಲಕ ನಿಮ್ಮ ಜಮೀನು ಯಾರ ಹೆಸರಿನಲ್ಲಿದೆ ಎಂಬ ಮಾಹಿತಿಯನ್ನು ಮೊಬೈಲ್ ಮೂಲಕ ತಿಳಿದುಕೊಳ್ಳಬಹುದು.

ಜಮೀನಿನ ಮಾಹಿತಿಯನ್ನು ಮೊಬೈಲ್ ನಲ್ಲಿ ತಿಳಿದುಕೊಳ್ಳಲು ಪಾಲಿಸಬೇಕಾದ ಹಂತಗಳು :

ರೈತರ ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ದಿಶಾಂಕ್ ಎಂಬ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳೋ ಮೂಲಕ ಮೊಬೈಲ್ ನಲ್ಲಿ ನೀವು ನಿಂತಿರುವ ಸ್ಥಳದ ಜಮೀನಿನ ಮಾಹಿತಿ ಪಡೆದುಕೊಳ್ಳಬಹುದು. ಅಥವಾ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ದಿಶಾಂಕ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

https://play.google.com/store/apps/details?id=com.ksrsac.sslr&hl=en_IN

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ನಿಮಗೆ ತೆಗೆದುಕೊಳ್ಳುತ್ತದೆ ಆಗ ರೈತರು ಅಲ್ಲಿ ಆಂಗ್ಲ ಭಾಷೆಯಲ್ಲಿ ಬರೆದಿರುವ Install ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು, ಡೌನ್ಲೋಡ್ ಆದ ನಂತರ ಓಪನ್ ಮಾಡಿ ನಂತರ ಅಲ್ಲಿ ಕೇಳುವ ಪ್ರಶ್ನೆಗಳಿಗೆ While Using the App ಎಂಬ ಆಪ್ಷನ್ ಮೇಲೆ ಒತ್ತಬೇಕು, ಯಾವ ಭಾಷೆಯೆಂದು ಕೇಳುತ್ತದೆ ಅಲ್ಲಿ ಕನ್ನಡವಾದರೆ ಕನ್ನಡ ಎಂದು ಅಥವಾ ಬೇರೆ ಭಾಷೆಯಾದರೆ ಆ ಭಾಷೆಯನ್ನು ಆಯ್ದುಕೊಳ್ಳಬೇಕು.

ಮುಂದೆ ನಿಮಗೆ ಪೋರ್ಟಲ್ ನಲ್ಲಿ ರಿಜಿಸ್ಟರ್ ಆಗಲು ಅಲ್ಲಿ ನಿಮಗೆ ನಿಮ್ಮ ಸಂಪೂರ್ಣ ಹೆಸರು ನಿಮ್ಮ ಇಮೇಲ್ ಐಡಿ ಅಥವಾ ನಿಮ್ಮ ಹೆಸರು ಇರುವ ಮೊಬೈಲ್ ನಂಬರ್ ಕೇಳುತ್ತದೆ ಇವುಗಳನ್ನು ಸರಿಯಾಗಿ ನಮೂದಿಸಿದರೆ ನಿಮಗೆ ಒಂದು ಓಟಿಪಿ ಬರುತ್ತದೆ ಆ ಒಟಿಪಿಯನ್ನು ಅಲ್ಲಿ ನಮೂದಿಸುವ ಮೂಲಕ ಪೋರ್ಟಲ್ ಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಈ ಮೂಲಕ ನೀವು ದಿಶಾಂಕ್ ಆಪ್ ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿದಂತಾಗುತ್ತದೆ ಹಾಗೂ ದಿಶಾಂಕ್ ಆಪ್ ತೆರೆದುಕೊಳ್ಳುತ್ತದೆ.

ದಿಶಾಂಕ್ ಆಪ್ ತೆರೆದುಕೊಂಡ ನಂತರ ಅಲ್ಲಿ ನಿಮಗೆ ನೀವು ನಿಂತಿರುವ ಸರ್ವೆ ನಂಬರ್ ಸ್ಥಳವು ಪಾಯಿಂಟ್ ಮೂಲಕ ಕಾಣುತ್ತದೆ ಅಲ್ಲಿ ಸ್ವಲ್ಪ ಜೂಮ್ ಮಾಡಿ ನೋಡಬೇಕು ಆಗ ನೀವು ಆ ಸರ್ವೇ ನಂಬರ್ ನ ಜಮೀನಿನ ಯಾವ ಜಾಗದಲ್ಲಿ ಇದ್ದೀರಿ ಎಂಬುದು ನಿಮಗೆ ಕಾಣಿಸುತ್ತದೆ. ಹಾಗೂ ಆ ಸರ್ವೇ ನಂಬರ್ ನ ಸುತ್ತಮುತ್ತಲಿನ ಜಮೀನಿನ ಸರ್ವೆ ನಂಬರುಗಳು ಹಾಗೂ ಅಲ್ಲಿರುವ ರಸ್ತೆಗಳು ಜಮೀನಿನ ಸ್ಥಳದಲ್ಲಾದರೆ ಕಾಣುತ್ತವೆ. ನೀವು ಪಟ್ಟಣದಲ್ಲಿ ದಿಶಾಂಕ್ ಆಪ್ ಉಪಯೋಗಿಸಿ ಸರ್ವೇ ನಂಬರ್ ಪತ್ತೆ ಹಚ್ಚಿದಿದ್ದರೆ ಅಲ್ಲಿ ನಿಮಗೆ ಪಕ್ಕದ ಏರಿಯಾ ರಸ್ತೆ ಕಾಣುತ್ತವೆ.

ಅಲ್ಲಿ ಕಾಣುವ ಪಾಯಿಂಟ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮತ್ತೊಂದು ಹೊಸ ಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನಿಮಗೆ ಆ ಜಮೀನಿನ ಸಂಪೂರ್ಣ ಮಾಹಿತಿ ಅಂದರೆ ಜಮೀನಿನ ಸರ್ವೆ ನಂಬರ್ ಗ್ರಾಮದ ಹೆಸರು ಹೋಬಳಿ ತಾಲೂಕು ಹಾಗೂ ಜಿಲ್ಲೆಯ ಹೆಸರು ನಿಮಗೆ ಕಾಣಸಿಗುತ್ತದೆ. ನಂತರ ಅಲ್ಲಿ ಹೆಚ್ಚಿನ ವಿವರಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಮತ್ತೊಂದು ಪೇಜ್ ಕಾಣುತ್ತದೆ ಅಲ್ಲಿ ನೀವು ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹಿಸ್ಸಾ ನಂಬರ್ ನಲ್ಲಿ ಹಿಸ್ಸಾ ಆಯ್ಕೆ ಮಾಡಿಕೊಂಡು, ಅಲ್ಲಿ ಒಂದಕ್ಕಿಂತ ಹೆಚ್ಚಿನ ಹಿಸ್ಸಾಗಳಿದ್ದರೆ ಒಂದು ಬಾರಿಗೆ ಒಂದು ಹಿಸ್ಸಾ ಆಯ್ಕೆ ಮಾಡಿಕೊಂಡು ಚೆಕ್ ಮಾಡಿ.

ಜಮೀನಿನ ಮಾಲೀಕರ ಮಾಹಿತಿ ಪಡೆದುಕೊಳ್ಳುವುದು :

ಅಲ್ಲಿ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡು ಈಶ ನಂಬರನ್ನು ಪರೀಕ್ಷಿಸುವಾಗ ಮಾಲೀಕರು ಎಂಬ ಆಕ್ಷನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಆ ಜಮೀನಿನ ಮಾಲೀಕರ ಹೆಸರು ಹಾಗೂ ಆ ಜಮೀನಿನ ಮಾಲೀಕರು ಹೆಸರಿನಲ್ಲಿರುವ ಸಂಪೂರ್ಣ ಜಮೀನಿನ ವಿಸ್ತೀರ್ಣ ಎಷ್ಟಿದೆ ಎಂದು ತಿಳಿಯುತ್ತದೆ. ಒಂದೇ ಸರ್ವೆ ನಂಬರಿಗೆ ಒಂದಕ್ಕಿಂತ ಹೆಚ್ಚು ಯಜಮಾನರಿದ್ದರೆ ಅಂದರೆ ಮಾಲೀಕರು ಎಲ್ಲರ ಹೆಸರು ಅಲ್ಲಿ ಕಾಣುತ್ತದೆ.

ಮೊಬೈಲ್ ನಲ್ಲಿ ನಿಮ್ಮ ಜಮೀನನ್ನು ಅಳತೆ ಮಾಡುವ ವಿಧಾನ:

ನಿಮಗೆ ನೀವು ನಿಂತಿರುವ ಜಮೀನಿನ ಮಾಹಿತಿ ದೊರೆತಿದೆ ಆದರೆ ಆ ಜಮೀನನ್ನು ಅಳತೆ ಮಾಡಬೇಕು ಎಂದಾಗರೇ ಆಗ ನೀವು ಅಲ್ಲಿ ಮಾಪನ ಸಾಧನಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಅಲ್ಲಿ ಮೂರು ಆಯ್ಕೆಗಳು ಕಾಣುತ್ತವೆ ಅಲ್ಲಿ ಲೈನ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಅಲ್ಲಿ ಜಮೀನಿನ ಒಂದು ಮೂಲೆಯನ್ನು ಆಯ್ದುಕೊಳ್ಳಬೇಕು ಆ ಮೂಲೆಯಿಂದ ಮತ್ತೊಂದು ಮೂಲೆಗೆ ಕಾಣುವ ಪಾಯಿಂಟ್ ಮೇಲೆ ಕ್ಲಿಕ್ ಮಾಡಬೇಕು, ಆಗ ಅಲ್ಲಿ ನಿಮಗೆ ಜಮೀನಿನ ಅಳತೆ ಮೀಟರ್ ನಲ್ಲಿ ಬೇಕಾದರೆ ಮೀಟರ್ ಎಂದು ಕಿಲೋಮೀಟರ್ ನಲ್ಲಿ ಬೇಕಾದರೆ ಕಿಲೋಮೀಟರ್ ಎಂದು ಫೀಟ್ನಲ್ಲಿ ಬೇಕಾದರೆ ಫೀಟ್ ಎಂದು ನಿಮಗೆ ಯಾವುದು ಬೇಕು ಅದನ್ನು ಆಯ್ದುಕೊಳ್ಳಬೇಕು. ಈ ರೀತಿ ನೀವು ಜಮೀನಿನ ಉದ್ದ ಅಗಲವನ್ನು ಸುಲಭವಾಗಿ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *