ಪ್ರಿಯರೇ, ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಪುರುಷರಿಗೆ ಮತ್ತು ಮಹಿಳೆಯರಿಗೆ ತಮ್ಮದೇ ಆದಂತಹ ಸ್ವಂತ ವ್ಯಾಪಾರ ಪ್ರಾರಂಭಿಸಲು 5 ಲಕ್ಷ ರೂಪಾಯಿಗಳವರೆಗೆ ಹಣವನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಕೆಲವು ಯೋಜನೆಗಳ ಮುಖಾಂತರ ಮಹಿಳೆಯರಿಗೆ ಮತ್ತು ಪುರುಷರಿಗೆ ಈ ಹಣವನ್ನು ನೀಡಲಾಗುತ್ತಿದೆ. ಇದರ ಜೊತೆಗೆ ನೀವು ಯಾವ ಹೊಸ ವ್ಯಾಪಾರ ಪ್ರಾರಂಭಿಸುತ್ತಿರೋ ಅಲ್ಲಿ ತಯಾರಾಗುವ ಉತ್ಪನ್ನಗಳನ್ನು ಕೆಲವೊಂದು ಕಂಪನಿಗಳು ಅಥವಾ ಏಜೆನ್ಸಿಗಳು ಅವುಗಳನ್ನು ಖರೀದಿ ಮಾಡುತ್ತವೆ. ಇದರ ಬಗ್ಗೆ ಇರುವ ಹೆಚ್ಚಿನ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ರಾಜ್ಯದಲ್ಲಿ ಇರುವಂತಹ ಮಹಿಳೆಯರಿಗೆ ಮತ್ತು ಪುರುಷರಿಗೆ ತಲಾ 5 ಲಕ್ಷ ರೂಪಾಯಿಗಳ ಹಣವನ್ನು ಹೊಸ ವ್ಯಾಪಾರ ಪ್ರಾರಂಭಿಸಲು ಕೊಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದೀಗ ಕರ್ನಾಟಕ ರಾಜ್ಯ ಸರ್ಕಾರ ಎರಡು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.
1.ಸ್ತ್ರೀ ಸಾಮರ್ಥ್ಯ ಯೋಜನೆ
2. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ
ಈ ಎರಡು ಯೋಜನೆಗಳ ಮುಖಾಂತರ ಪುರುಷರಿಗೆ ಮತ್ತು ಮಹಿಳೆಯರಿಗೆ ತಮ್ಮದೇ ಆದಂತಹ ಹೊಸ ವ್ಯಾಪಾರ ಪ್ರಾರಂಭಿಸಲು 5 ಲಕ್ಷ ರೂಪಾಯಿಗಳನ್ನು ರಾಜ್ಯ ಸರ್ಕಾರ ಈ ಯೋಜನೆ ಅಡಿ ನೀಡುತ್ತಿದೆ.
ನಿಮ್ಮ ಹೊಸ ವ್ಯಾಪಾರದಲ್ಲಿ ಯಾವ ಉತ್ಪನ್ನಗಳನ್ನು ತಯಾರು ಮಾಡುತ್ತಿರೋ ಅವುಗಳನ್ನು ಕೆಲವು ಏಜೆನ್ಸಿಗಳು ಅಥವಾ ಕಂಪನಿಗಳು ನೇರವಾಗಿ ಖರೀದಿ ಮಾಡುತ್ತವೆ. ಇದರಿಂದ ತಯಾರಕರ ಮಾರುಕಟ್ಟೆ ಗೊಂದಲಗಳನ್ನು ಕಡಿಮೆ ಮಾಡಬಹುದು. ಸರ್ಕಾರ ಕೆಲವೊಂದು ಏಜೆನ್ಸಿಗಳು ಅಥವಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತದೆ.
ಈ ರೀತಿಯಾಗಿ ಈ ಎರಡು ಯೋಜನೆ ಮುಖಾಂತರ ರಾಜ್ಯದಲ್ಲಿರುವ ಪುರುಷರಿಗೆ ಮತ್ತು ಮಹಿಳೆಯರಿಗೆ 5 ಲಕ್ಷ ರೂಪಾಯಿ ಹಣ ನೀಡಲಾಗುತ್ತದೆ.
ಈ ಎರಡು ಹೊಸ ಯೋಜನೆ ಗಳಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಲು ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಈ ಎರಡು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ನೀವು ಹೆಸರು ನೊಂದಾಯಿಸಲು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿ ನೀಡುವ ಅರ್ಜಿ ಫಾರಂ ತುಂಬಿ ಸ್ತ್ರೀಶಕ್ತಿ ಸಾಮರ್ಥ್ಯ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿ 5 ಲಕ್ಷಗಳ ಹಣವನ್ನು ಪಡೆಯಬಹುದು.
ಈ ರೀತಿಯಾಗಿ ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಎರಡು ಹೊಸ ಯೋಜನೆಗಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಸ್ವಂತ ವ್ಯಾಪಾರ ಪ್ರಾರಂಭಿಸಲು 5 ಲಕ್ಷಗಳವರೆಗೆ ಹಣವನ್ನು ಪಡೆಯಬಹುದು.
ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.