ಪ್ರಿಯ ರೈತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳಲ್ಲಿ ಹಲವು ಬದಲಾವಣೆಯಾಗಿದ್ದು ಈ ನಿಯಮಗಳನ್ನು ಸರಿಯಾಗಿ ಅನುಸರಿಸದೇ ಇದ್ದಲ್ಲಿ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತುಗಳ ಹಣ ಜಮಾ ಆಗುವುದಿಲ್ಲ. ರೈತರು ಈ ಒಂದು ಕೆಲಸ ಪೂರ್ಣಗೊಳಿಸದೆ ಇದ್ದರೆ ಮುಂದಿನ ಕಂತಿನ ಅಂದರೆ 13ನೇ ಕಂತಿನಿಂದ ವಂಚಿತರಾಗಬಹುದು. ರೈತರು ಮಾಡಬೇಕಾದ ಕೆಲಸ ಯಾವುದು ಎಂಬುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಇಲ್ಲಿಯವರೆಗೂ ಪಿಎಂ ಕಿಸಾನ್ ಯೋಜನೆಯ 12 ಕಂತುಗಳನ್ನು ಈಗಾಗಲೇ ರೈತರ ಖಾತೆಗೆ ಜಮಾ ಮಾಡಲಾಗಿದೆ. 13ನೇ ಕಂತಿನ ಹಣವನ್ನು ಜನವರಿ ತಿಂಗಳಲ್ಲಿ ರೈತರ ಖಾತೆಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯ ಹೊಸ ನಿಯಮಗಳ ಪ್ರಕಾರ
* ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಆಧಾರ್ ಕಾರ್ಡ್ ಇಲ್ಲದೆ ಈ ಯೋಜನೆಯಲ್ಲಿ ಹೆಸರು ನೋಂದಾಯಿಸಲು ಸಾಧ್ಯವಿಲ್ಲ. ಇದಕ್ಕಾಗಿ ರೈತರು ತಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇಲ್ಲದಿದ್ದರೆ ಮುಂದಿನ ಕಂತುಗಳ ಹಣ ಜಮಾ ಆಗುವುದಿಲ್ಲ.
* ಇದರ ಜೊತೆಗೆ e kycಮಾಡುವುದು ಸಹ ಕಡ್ಡಾಯವಾಗಿರುತ್ತದೆ. Ekyc ಮಾಡದೇ ಇರುವ ರೈತರು ಈ ಯೋಜನೆಯಿಂದ ವಂಚಿತರಾಗುತ್ತಾರೆ.
ನೀವು ekyc ಅನ್ನು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವುದರ ಮುಖಾಂತರ ಮಾಡಿಸಿಕೊಳ್ಳಬಹುದು.
* ಈ ಪಿಎಂ ಕಿಸಾನ್ ಯೋಜನೆಯಲ್ಲಿ ಹೆಸರು ನೊಂದಾಯಿಸಲು ಕೆಲವು ನಿಯಮಗಳನ್ನು ಬದಲಾವಣೆ ಮಾಡಲಾಗಿದ್ದು ಹೆಸರನ್ನು ನೋಂದಾಯಿಸುವಾಗ ಅದರಲ್ಲಿ ಪಡಿತರ ಚೀಟಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ನೀವು ಪಡಿತರ ಚೀಟಿಯನ್ನು ಸಲ್ಲಿಸದಿದ್ದರೆ ಈ ಯೋಜನೆಯಿಂದ ವಂಚಿತರಾಗಬಹುದು.
* ಈ ಯೋಜನೆಯ ಲಾಭ ಪಡೆಯಲು ಭೂ ದಾಖಲೆಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಈ ಯೋಜನೆಯಿಂದ ವಂಚಿತರಾಗಬಹುದು.
ಈ ಯೋಜನೆಯಲ್ಲಿ ಕಂತುಗಳ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ನೀವೇನಾದ್ರೂ ತಪ್ಪು ಮಾಹಿತಿ ಅಥವಾ ತಪ್ಪು ಆಧಾರ ಕಾರ್ಡ್ ಸಂಖ್ಯೆಯನ್ನು ನೀಡಿದರೆ ನಿಮ್ಮ ಖಾತೆಗೆ ಜಮಾ ಆಗಿರುವುದಿಲ್ಲ. ಇದಕ್ಕಾಗಿ ಸರಾಗವಾಗಿ ರೈತರ ಖಾತೆಗೆ ಜಮಾ ಮಾಡುವ ಸಲುವಾಗಿ ಹಾಗೂ ಅರ್ಹ ರೈತರನ್ನು ಗುರುತಿಸುವ ಸಲುವಾಗಿ ಈ ಯೋಜನೆ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದಕ್ಕಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು, ಪಡಿತರ ಚೀಟಿ ಸಲ್ಲಿಸುವುದು, ಭೂ ದಾಖಲೆಗಳನ್ನು ಪರಿಶೀಲಿಸುವುದು ಮತ್ತು ekyc ಮಾಡಿಸುವುದು ಕಡ್ಡಾಯವಾಗಿರುತ್ತದೆ. ಹೀಗಾಗಿ ಈ ಮೇಲೆ ಹೇಳಿದ ಕೆಲಸಗಳನ್ನು ಇನ್ನೂ ಯಾರು ಮಾಡಿ ಮುಗಿಸಿಲ್ಲವೋ ಅಂತಹವರು ಬೇಗನೆ ಮುಗಿಸಿಕೊಂಡು ಮುಂದಿನ ಕಂತುಗಳ ಜಮಾ ಆಗುವ ಅರ್ಹತೆಯನ್ನು ಪಡೆದುಕೊಳ್ಳಬೇಕು.
ಇದಿಷ್ಟು ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರಿಗೆ ಬಂದಿರುವಂತಹ ಬಹು ಉಪಯುಕ್ತ ಮಾಹಿತಿಯಾಗಿದೆ. ರೈತರು ಈ ಉಪಯುಕ್ತ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಅಧಿಕೃತ ಕೃಷಿ ಮಾಹಿತಿಗಾಗಿ ಕೃಷಿ ಮಾಹಿತಿಗಾಗಿ ಕೃಷಿ ವಾಹಿನಿ ವೆಬ್ಸೈಟ್ನ ಸಂಪರ್ಕದಲ್ಲಿರಿ 🌱