ಪ್ರಿಯ ರೈತರೇ, ಬೆಳೆ ಸಾಲ ಮನ್ನಾ ಯಾವಾಗ ಎಂಬುದರ ಬಗ್ಗೆ ಸಿಹಿ ಸುದ್ದಿ ಒಂದು ಹೊರಬಿದ್ದಿದೆ. ರೈತರ ಬೆಳೆ ಸಾಲ ಮನ್ನಾ ಯಾವಾಗ ಆಗುತ್ತದೆ ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಬೆಳೆ ಸಾಲ ಮನ್ನಾ ಕುರಿತಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ರೈತರ ಬೆಳೆ ಸಾಲ ಮನ್ನಾ ಬಗ್ಗೆ ಗಾಳಿ ಸುದ್ದಿಗಳಿಗೆ ತೆರೆ ಎಳದಿದ್ದಾರೆ. ರೈತರು ಬೆಳೆ ಸಾಲ ಮನ್ನಾದ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದು, 2018ರಲ್ಲಿ ಆದ ಸಾಲ ಮನ್ನಾದ ಬಗ್ಗೆ ಇರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬಹಳಷ್ಟು ರೈತರು ತಪ್ಪಾಗಿ ತಿಳಿದುಕೊಂಡಿದ್ದು ಈ ವರ್ಷ ಬೆಳೆ ಸಾಲ ಮನ್ನಾ ಆಗಿದೆ ಎಂದು ನಂಬಿದರೆ ಅದು ಸುಳ್ಳು. ಈಗಿನ ಪ್ರಸ್ತುತ ವರ್ಷದ ಬೆಳೆ ಸಾಲ ಮನ್ನಾದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ವರ್ಷದ ಬೆಳೆ ಸಾಲ ಮನ್ನಾ ಬರೀ ಕೇವಲ ಒಂದು ತಪ್ಪು ಕಲ್ಪನೆಯಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. ಆದರೆ ರೈತರ ಹಿತ ದೃಷ್ಟಿಯಿಂದ ಒಂದು ಸಿಹಿ ಸುದ್ದಿಯನ್ನು ನೀಡುತ್ತೇನೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. ಹೀಗಾಗಿ ಬೊಮ್ಮಾಯಿ ಸರ್ಕಾರ ಯಾವುದೇ ರೀತಿಯ ರೈತರ ಬೆಳೆ ಸಾಲ ಮನ್ನಾ ಮಾಡಿಲ್ಲ. 2018ರಲ್ಲಿ ಆದ ಸಾಲ ಮನ್ನಾದ ಪಟ್ಟಿಯನ್ನು ಸದ್ಯಕ್ಕೆ ಬಿಡುಗಡೆ ಮಾಡಲಾಗಿದೆ. ನೀವು ನಿಮ್ಮ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಸಂಖ್ಯೆಯನ್ನು ನೀಡಿ ನಿಮ್ಮ ಬೆಳೆ ಸಾಲ ಮನ್ನಾದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಹೀಗೆ ಮುಖ್ಯಮಂತ್ರಿ ಬಸವರಾಜ್ ಅವರು ರೈತರ ಬೆಳೆ ಸಾಲ ಮನ್ನಾದ ಬಗ್ಗೆ ಇರುವ ಗೊಂದಲಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ರೈತರು ಈ ಪ್ರಮುಖ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಇತರ ಉಹಾಪೊಹಗಳಿಗೆ ಕಿವಿಗೊಡಬಾರದು.