ರೇಷನ್ ಕಾರ್ಡ್ ಇದ್ದವರಿಗೆ ಆಹಾರ ಇಲಾಖೆಯಿಂದ ಬಹು ಮುಖ್ಯವಾದ ಮಾಹಿತಿ ಲಭ್ಯ ಇದರ ಬಗ್ಗೆ ಇಂದಿನ ದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ನಿಮ್ಮ ಹತ್ತಿರ APL/BPL ಕಾರ್ಡ್ ಅಥವಾ ಇತರೆ ಕಾರ್ಡುಗಳು ಇದ್ದಲ್ಲಿ ಹೊಸ ಅಪ್ಡೇಟ್ ಬಗ್ಗೆ ಇರುವ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ.

ನಿಮಗೆ ಮೊದಲೇ ತಿಳಿದ ಹಾಗೆ ರೇಷನ್ ಕಾರ್ಡ್ ಇದ್ದವರಿಗೆ ಅನ್ನಭಾಗ್ಯ ಯೋಜನೆ ಅಡಿ ದವಸ ಧಾನ್ಯಗಳನ್ನು ನೀಡುವ ವಿಚಾರ ನಿಮಗೆ ಮೊದಲೇ ತಿಳಿದಿದೆ ಬಹಳಷ್ಟು ಜನ ಅನ್ನಭಾಗ್ಯ ಯೋಜನೆ ಅಡಿ ಸಿಗುವ ದವಸ ಧಾನ್ಯಗಳಾದ ಅಕ್ಕಿ, ರಾಗಿ, ಜೋಳ, ಇವುಗಳನ್ನು ಹೊರಗೆ ಮಾರಾಟ ಮಾಡಲಾಗುತ್ತಿದೆ. ಅಂತವರಿಗೆ ಒಂದು ಕಠಿಣವಾದ ನಿರ್ಧಾರವನ್ನು ಆಹಾರ ಇಲಾಖೆಯು ತೆಗೆದುಕೊಂಡಿದೆ. ಯಾವ ಜನರು ರೇಷನ್ ಕಾರ್ಡ್ ನಲ್ಲಿ ಸಿಗುವ ದವಸ ಧಾನ್ಯಗಳನ್ನು ಮುಕ್ತ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಾರೋ ಅಂಥವರ ರೇಷನ್ ಕಾರ್ಡನ್ನು ಆರು ತಿಂಗಳುಗಳ ಕಾಲ ಅಮಾನತ್ತು ಮಾಡಲಾಗುತ್ತದೆ. ಎಂದು ಆಹಾರ ಇಲಾಖೆಯು ಸ್ಪಷ್ಟಪಡಿಸಿದೆ. ಈ ಮೂಲಕ ನಿಮಗೆ ಆರು ತಿಂಗಳ ಕಾಲಾವಧಿಯವರೆಗೆ ರೇಷನ್ ಕಾರ್ಡನ್ನು ರದ್ದು ಮಾಡಲಾಗುತ್ತದೆ. ಇದರ ಮೂಲಕ ನಿಮಗೆ ಆರು ತಿಂಗಳ ಕಾಲ ರೇಷನ್ ಹಾಗೂ ವಿವಿಧ ದವಸ ಧಾನ್ಯಗಳು ಸಿಗುವುದಿಲ್ಲ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈ ಸಂದೇಶವನ್ನು ಹೊರಡಿಸಿದ್ದು ಅಕ್ರಮವಾಗಿ ಪಡಿತರ ಚೀಟಿಯಿಂದ ರೇಷನ್ ತೆಗೆದುಕೊಂಡು ಮುಕ್ತ ಅಥವಾ ಹೊರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದಲ್ಲಿ ನಿಮ್ಮ ರೇಷನ್ ಕಾರ್ಡನ್ನು ಅಮಾನತ್ತು ಮಾಡುವಲಾಗುವುದು ಎಂದು ಆಹಾರ ಇಲಾಖೆಯು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *