ನಮಸ್ಕಾರ ಪ್ರಿಯ ರೈತರೇ, ಕೇಂದ್ರ ಸರ್ಕಾರ ರೈತರಿಗೆ ಒಂದು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣ ಯಾವ್ಯವ ರೈತರಿಗೆ ಬರುತ್ತದೆ ಎನ್ನುವ ಲಿಸ್ಟನ್ನು ಬಿಡುಗಡೆ ಮಾಡಲಾಗಿದೆ.ಈ ಲಿಸ್ಟನಲ್ಲಿ ಯಾರ ಹೆಸರು ಇರುತ್ತದೋ ಅಂತಹ ರೈತರಿಗೆ 13ನೇ ಕಂತಿನ ಹಣ ಜಮಾ ಮಾಡಲಾಗುವುದು.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರ ಅಕ್ಟೋಬರ್ 17 ನೇ ತಾರೀಕಿನಂದು 12ನೇ ಕಂತಿನ ಹಣ ಬಿಡುಗಡೆ ಮಾಡಿದೆ. ಈಗ ಎಲ್ಲಾ ರೈತರು 13ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ 13ನೇ ಕಂತಿನ ಹೊಸ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಮಾಡಲಾಗುವುದು.
ಹಾಗೂ ಅದೇ ರೀತಿಯಾಗಿ ಇನ್ನು ಕೆಲವು ರೈತರಿಗೆ 12ನೇ ಕಂತಿನ ಹಣ ಜಮಾ ಆಗಿರುವುದಿಲ್ಲ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೂ ಸಹ ಹಣ ಜಮಾ ಆಗುವ ಸಾಧ್ಯತೆ ಇದೆ. ಅಂದರೆ 12 ಮತ್ತು 13ನೇ ಕಂತನ ಹಣ ಬರುವ ಸಾಧ್ಯತೆ ಇದೆ.
ಅದೇ ರೀತಿಯಾಗಿ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
» ಮೊದಲಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟನ್ನು ತೆರೆಯಬೇಕು.
» ಅದರಲ್ಲಿ ನಿಮಗೆ “ಬೆನಿಫಿಶಿಯರಿ ಲಿಸ್ಟ್” ಎಂಬುದಾಗಿ ಕಾಣುತ್ತದೆ. ಆ ಆಯ್ಕೆ ಮೇಲೆ ಕ್ಲಿಕ್ ಮಾಡಿ.
» ಅಲ್ಲಿ ಕೇಳಲಾಗುವ ಕೆಲವು ಮಾಹಿತಿ ವಿವರಗಳನ್ನು ನೀಡಬೇಕು. ನಂತರ ಕೆಳಗಡೆ ಕಾಣುವ “ಗೆಟ್ ರಿಪೋರ್ಟ್” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
» ಇದಾದ ನಂತರ ನಿಮಗೆ ಒಂದು ಲಿಸ್ಟ್ ಓಪನ್ ಆಗುತ್ತದೆ. ಅದರಲ್ಲಿ ನೀವು 13ನೇ ಕಂತಿನ ಹಣ ಯಾವ ರೈತರಿಗೆ ಬರುತ್ತದೆ. ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದು.
» ನಿಮ್ಮ ಹೆಸರನ್ನು ಸಹ ಚೆಕ್ ಮಾಡಿಕೊಳ್ಳಬಹುದು.
» ನೀವೇನಾದ್ರೂ ಒಂದು ವೇಳೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಹೊಂದಿದ್ದರೆ ನಿಮಗೆ 12ನೇ ಕಂತಿನ ಹಣ ಬರೆದಿದ್ದರೆ 12 ಮತ್ತು 13ನೇ ಕಂತಿನ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ರೀತಿಯಾಗಿ ನೀವು ಈ 13ನೇ ಕಂತಿನ ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳುವುದು.
ಎಲ್ಲ ರೈತರು ಈ ಬಹು ಮುಖ್ಯ ಮಾಹಿತಿ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ನ್ನು ಒತ್ತಿ 👇👇
https://chat.whatsapp.com/CatKjFMzi1f5uiEQn86AW0