ನಮಸ್ಕಾರ ಪ್ರಿಯ ರೈತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರಿಗೆ ಈ ಯೋಜನೆ ಕುರಿತಾಗಿ ಬಿಗ್ ಅಪ್ಡೇಟೆಡ್ ಮಾಹಿತಿ ಬಂದಿದೆ. ಈಗ ಪತಿ ಮತ್ತು ಪತ್ನಿ ಇಬ್ಬರಿಗೂ 6,000 ರೂಪಾಯಿ ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ. ಇದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ಅದಕ್ಕೆ ಇರುವ ನಿಯಮಗಳನ್ನು ಕಾಲ ಕಾಲಕ್ಕೆ ಬದಲಾಯಿಸುತ್ತಲೇ ಇರುತ್ತದೆ. ಈ ಯೋಜನೆಯು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರವು ರೈತಾರ ಖಾತೆಗೆ ವಾರ್ಷಿಕವಾಗಿ 6,000ರೂಪಾಯಿ ಅಂದರೆ 2,000 ರೂಪಾಯಿಗಳ 3 ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇಲ್ಲಿಯವರೆಗೂ ಈ ಯೋಜನೆ ಅನೇಕ ಬದಲಾವಣೆಗಳಿಗೆ ಒಳಗಾಗಿದೆ.
ಅರ್ಜಿ ಸಲ್ಲಿಸುವುದು ಹಾಗೂ ಅರ್ಹತೆಗೆ ಸಂಬಂಧಿಸಿದ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈಗ ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಕೂಡ ಈ ಯೋಜನೆ ಲಾಭ ಪಡೆಯುವ ಬಗ್ಗೆ ಚರ್ಚೆ ಶುರುವಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪೋರ್ಟಲ್ ನಲ್ಲಿ ನೀಡಿದ ಮಾಹಿತಿ ಪ್ರಕಾರ ಪತಿ ಮತ್ತು ಪತ್ನಿ ಇಬ್ಬರೂ ಕೂಡ ಈ ಯೋಜನೆ ಅಡಿ ಲಾಭ ಪಡೆಯಲು ಸಾಧ್ಯವಿಲ್ಲ. ಯಾರಾದರೂ ಈ ನಿಯಮವನ್ನು ಮೀರಿದರೆ ಅವರನ್ನು ನಕಲಿ ಎಂದು ಘೋಷಿಸಲಾಗುವುದು. ಇಂತಹ ರೈತರಿಂದ ಸರ್ಕಾರ ಈಗಾಗಲೇ ಪಡೆದುಕೊಂಡಿರುವ ಹಿಂದಿನ ಕಂತುಗಳನ್ನು ಮರಳಿ ಪಡೆಯುತ್ತದೆ.
ಆದರೆ ಯೋಜನೆ ನಿಯಮದ ಪ್ರಕಾರ ರೈತರನ್ನು ಅನರ್ಹಗೊಳಿಸುವ ಅನೇಕ ನಿಬಂಧನೆಗಳಿವೆ. ಇಂತಹ ರೈತರು ಈ ಯೋಜನೆ ಲಾಭವನ್ನು ಪಡೆದರೆ ಹಿಂದೆ ಪಡೆದಿರುವಂತಹ ಎಲ್ಲ ಕಂತುಗಳ ಹಣವನ್ನು ಹಿಂದಿರುಗಿಸಬೇಕಾಗುತ್ತದೆ.
ಇದು ಇತ್ತೀಚಿಗೆ ಜಾರಿಗೆ ತಂದ ನಿಯಮವಾಗಿದ್ದು, ಅನರ್ಹ ರೈತರು ತಮ್ಮ ಎಲ್ಲಾ ಕಂತುಗಳನ್ನು ಹಿಂದುರುಗಿಸಬೇಕಾಗುತ್ತದೆ.
ಅನರ್ಹರನ್ನು ಗುರುತಿಸುವ ಕಾರ್ಯ ನಡೆದಿದ್ದು ಅದಕ್ಕಾಗಿ ಮುಂದಿನ ಕಂತು ಬಿಡುಗಡೆ ವಿಳಂಬವಾಗುತ್ತಿದೆ.
ಅಂತಹ ರೈತರಿಂದ ಹಣ ಮರಳಿ ಪಡೆಯುವ ಕ್ರಮ ಕೈಗೊಳ್ಳಲಾಗುವುದು.
ಇದೆಷ್ಟು ಪಿ ಎಮ್ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿ ರೈತರಿಗೆ ಬಂದಿರುವ ಬಹು ಮುಖ್ಯ ಮಾಹಿತಿಯಾಗಿದೆ. ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇👇
https://chat.whatsapp.com/CatKjFMzi1f5uiEQn86AW0