ಪ್ರಿಯ ರೈತರೇ, ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬರಿಗೂ 2 ಲಕ್ಷ ರೂಪಾಯಿಗಳ ಇನ್ಸೂರೆನ್ಸ್ ಹಣ ಪಡೆಯುವ 2 ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಹೊಸ ಯೋಜನೆಗಳ ಬಗ್ಗೆ ಇರುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬರಿಗೂ 2 ಲಕ್ಷ ರೂಪಾಯಿಗಳವರೆಗೆ ಇನ್ಸೂರೆನ್ಸ್ ಹಣ ಪಡೆಯುವ ಯೋಜನೆ ಜಾರಿಗೆ ತರಲಾಗಿದೆ.

ಇಲ್ಲಿ ಎರಡು ರೀತಿಯ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

» ಮೊದಲನೆಯದಾಗಿ “ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ”

» ಇನ್ನೊಂದು “ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ”

ಇವೆರಡುಗಳಲ್ಲಿ ಯಾವುದನ್ನು ಮಾಡಿಸಿದರೂ ಕೂಡ ನೀವು ಹಣವನ್ನು ಪಡೆಯಬಹುದು.

ಈ ಯೋಜನೆಯಲ್ಲಿ ಮೊದಲಿಗೆ ನಾವು ಎಷ್ಟು ರೂಪಾಯಿಯನ್ನು ಎಲ್ಲಿ ಮತ್ತು ಹೇಗೆ ಕಟ್ಟಬೇಕು ಎಂಬುದನ್ನು ನೋಡುವುದಾದರೆ,

• ಮೊದಲಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಬಗ್ಗೆ ಹೇಳುವುದಾದರೆ ವಾರ್ಷಿಕವಾಗಿ ನೀವು 436 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ ನಿಮಗೆ 2 ಲಕ್ಷ ರೂಪಾಯಿಗಳವರೆಗೆ ಜೀವ ವಿಮಾ ಸುರಕ್ಷೆ ಪಡೆಯಬಹುದು.

ಈ ಯೋಜನೆಯ ಲಾಭ ಪಡೆಯಲು ನಿಮ್ಮ ವಯಸ್ಸು 18 ರಿಂದ 50 ವರ್ಷ ವಯಸ್ಸಿನೊಳಗೆ ಇರಬೇಕು.

• ಇನ್ನೊಂದು ಯೋಜನೆಯಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ ಕೇವಲ ನೀವು ವಾರ್ಷಿಕವಾಗಿ ರೂ.20 ಗಳನ್ನು ಕಟ್ಟಿದರೆ ಸಾಕು ಇದಕ್ಕೆ ಪ್ರತಿಯಾಗಿ ನಿಮಗೆ 2 ಲಕ್ಷ ರೂಪಾಯಿಗಳ ಅಪಘಾತ ವಿಮೆಯ ಸುರಕ್ಷಾ ಪಡೆಯಬಹುದು.

ಈ ಯೋಜನೆಯ ಲಾಭ ಪಡೆಯಲು ನಿಮ್ಮ ವಯಸ್ಸು 18 ರಿಂದ 70 ವರ್ಷ ವಯಸ್ಸಿನೊಳಗೆ ಇರಬೇಕು.

ನೀವು ಇಲ್ಲಿ ತನಕ ಸುರಕ್ಷಾ ಭೀಮಾ ಯೋಜನೆಗಳನ್ನು ಮಾಡಿಲ್ಲವೆಂದರೆ ನಿಮಗೆ ಹತ್ತಿರದ ಅಥವಾ ನಿಮಗೆ ಸಂಬಂಧಪಟ್ಟ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿಗೆ ಹೋಗಿ ಖಾತೆಯನ್ನು ತೆರೆಯಬೇಕಾಗುತ್ತದೆ.

ನೀವೇನಾದರೂ ಈಗಾಗಲೇ ಖಾತೆಯನ್ನು ಹೊಂದಿದ್ದರೆ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಈ ಸುರಕ್ಷಾ ವಿಮಾ ಯೋಜನೆಗಳನ್ನು ಚಾಲ್ತಿ ಮಾಡಿಸಬಹುದು.

ನೀವು ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಅನ್ನು ಸಂಪರ್ಕಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

18001801111“ಈ ಸಂಖ್ಯೆಗೆ ಕರೆ ಮಾಡಿ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇಲ್ಲಿಯವರೆಗೆ “ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ” ಅಡಿಯಲ್ಲಿ 13 ಕೋಟಿಗೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಅದೇ ರೀತಿ “ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ” ಅಡಿಯಲ್ಲಿ ಇಲ್ಲಿಯವರೇ 29 ಕೊಟಿಗೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ರೈತರು ಈ ಎರಡು ಹೊಸ ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ

ವೆಬ್ಸೈಟ್ ನ ಸಂಪರ್ಕ ದಲ್ಲಿರಿ..

ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಒತ್ತಿ 👇

https://chat.whatsapp.com/CatKjFMzi1f5uiEQn86AW0

Leave a Reply

Your email address will not be published. Required fields are marked *