ನಮಸ್ಕಾರ ಪ್ರಿಯ ರೈತರೇ, ಇಂದು ನಾವು ತಿಳಿಸಿಕೊಡುವ ಮಾಹಿತಿಯು ಪ್ರತಿಯೊಬ್ಬರಿಗೂ ಅವಶ್ಯಕತೆ ಇದ್ದೇ ಇರುತ್ತದೆ. ನಿಮ್ಮ ಜಮೀನಿಗೆ ಅಥವಾ ಸಂಬಂಧಪಟ್ಟ ಹೊಲಕ್ಕೆ ದಾರಿ ಪಡೆಯಲು ಏನೇನು ಮಾಡಬೇಕು ಎಂಬುದು ಇವತ್ತಿನ ವಿಷಯವಾಗಿದೆ.

ಯಾವುದೇ ಒಂದು ಜಮೀನಿಗೆ ಹೋಗಲು ಕಾಲುದಾರಿ ಆಗಿರಬಹುದು ಅಥವಾ ಬಂಡಿದಾರಿ ಇಲ್ಲದೇ ಇರುವ ಸಂದರ್ಭದಲ್ಲಿ ನಾಗರಿಕರು ಅಂದರೆ ರೈತರು ಏನು ಮಾಡಬೇಕು?

ಹೊಸದಾಗಿ ದಾರಿಯನ್ನು ಹೇಗೆ ಸೃಷ್ಟಿಸಬಹುದು? ದೂರನ್ನು ಎಲ್ಲಿ ಸಲ್ಲಿಸಬೇಕು?

ಅದಕ್ಕೆ ಬೇಕಾಗುವ ದಾಖಲೆಗಲೇನು?

ಅದಕ್ಕೆ ಸಿಗಬಹುದಾದ ಪರಿಹಾರ ಮಾರ್ಗಗಳೇನು? ಇವೆಲ್ಲವುಗಳ ಮಾಹಿತಿಯನ್ನು ಇಂದು ನಾವು ತಿಳಿದುಕೊಳ್ಳೋಣ.

ಕರ್ನಾಟಕ ರಾಜ್ಯ ಭೂ ಕಂದಾಯ ನಿಯಮದ ಕಾಯ್ದೆ ಪ್ರಕಾರ ಯಾವುದೇ ಒಂದು ಜಮೀನಿಗೆ ಹೋಗಿಬರಲು ಖಚಿತವಾದ ದಾರಿ ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಾಮಾನ್ಯವಾಗಿ ದಾರಿ ಇಲ್ಲದ ಜಮೀನು ಇಲ್ಲವೇ ಇಲ್ಲ ಎಂದು ಹೇಳಬಹುದು.

ಅನೇಕ ತಪ್ಪುಗಳಿಂದ ಇವತ್ತಿನ ಕಾಲದಲ್ಲಿ ಜಮೀನುಗಳಿಗೆ ಹೋಗಿ ಬರಲು ದಾರಿ ಅಂದರೆ ರಸ್ತೆಯು ರೈತರಿಗೆ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆ.

ಕೆಲವು ಜಮೀನುಗಳಿಗೆ ಅಧಿಕೃತವಾಗಿ ದಾರಿ ಇಲ್ಲದೆ ಹೆಣಗಾಡುತ್ತಿರುವ ರೈತರು ಮಾಡಬೇಕಾದ ಕೆಲಸ ಯಾವುದೆಂದರೆ,

» ಮೊದಲು ಪಕ್ಕದ ಜಮೀನಿನ ರೈತರ ಜೊತೆ ಪರಸ್ಪರ ಮಾತುಕತೆ ಮೂಲಕ ದಾರಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

» ಮಾತುಕತೆ ಮೂಲಕ ಬಗೆಹರಿಯದಿದ್ದ ಪಕ್ಷದಲ್ಲಿ ಏನು ಮಾಡಬೇಕು ಎಂಬುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ರೈತರಿಗೆ ಈಸೆಮೆಂಟ್(Easement) ಆಕ್ಟ್ ಪ್ರಕಾರ ನಿಮ್ಮ ಹಕ್ಕು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

» ಈ ಹಕ್ಕನ್ನು ಪಡೆಯಲು ಅಂದರೆ ದಾರಿಯನ್ನು ಪಡೆಯಲು ಮುಖ್ಯವಾಗಿ ಏನೇನು ದಾಖಲೆಗಳು ಸಲ್ಲಿಸಬೇಕು ಎಂಬುದನ್ನು ನೋಡುವುದಾದರೆ,

1) ನಿಮ್ಮ ಹೊಲದ ಅಥವಾ ಜಮೀನಿನ ಪೂರ್ಣ ಸರ್ವೇ ನಂಬರ್ ನ ನಕ್ಷೆ.

2)ಸರ್ವೆ ನಕ್ಷೆಗಳನ್ನು ತಹಶೀಲ್ದಾರ್ ಆಫೀಸ್ನ ಸರ್ವೇ ಇಲಾಖೆಯ ಮೂಲಕ ಪಡೆದುಕೊಳ್ಳಬಹುದು.

3)ನಿಮ್ಮ ಸರ್ವೇ ನಂಬರ್ ನ ಆಜು ಬಾಜು ಅಂದರೆ ನಾಲ್ಕು ದಿಕ್ಕುಗಳಲ್ಲಿನ ಸರ್ವೆ ನಂಬರ್ ನಕ್ಷೆ.

4) ನಿಮ್ಮ ಸರ್ವೇ ನಂಬರ್ ನ ಕಾಲಕಾಲಕ್ಕೆ ಆದ ಟಿಪ್ಪಣಿಗಳು.

* ನಿಮ್ಮ ಹೊಲದ ಪಹಣಿ ಮತ್ತು ನಿಮ್ಮ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ.

* ಎದುರುದಾರರ ಪಹಣಿ ಮತ್ತು ವಿಳಾಸ.

* ತಾಲೂಕು ಸರ್ವೆ ಕಚೇರಿಯಿಂದ ನಿಮ್ಮ ಜಮೀನಿಗೆ ದಾರಿ ಇಲ್ಲ ಎಂದು ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.

* ಇದರ ಜೊತೆಗೆ ಜಮೀನಿಗೆ ಹೋಗಿ ಬರಲು ದಾರಿ ಇಲ್ಲ ಎಂದು ಸರಳವಾಗಿ ಒಂದು ಅರ್ಜಿ ಬರೆಯಬೇಕು.

ದಾರಿ ಪಡೆಯಲು ದಾಖಲೆಗಳನ್ನು ಎಲ್ಲಿ ಮತ್ತು ಯಾರಿಗೆ ಸಲ್ಲಿಸಬೇಕು? ಇದರ ಪ್ರಕ್ರಿಯೆ ಹೇಗಿರುತ್ತದೆ? ಎಂಬುದನ್ನು ತಿಳಿದುಕೊಳ್ಳೋಣ.

# ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ನಿಮ್ಮ ಜಿಲ್ಲೆಯಲ್ಲಿರುವ DDLR ಕಚೇರಿಗೆ ದೂರಿನ ರೂಪದಲ್ಲಿ ಸಲ್ಲಿಸಬೇಕಾಗುತ್ತದೆ.

# DDLR ಕಚೇರಿಗೆ ಸಲ್ಲಿಸಿದ ಬಳಿಕ ಆ ಕಚೇರಿ ಇಂದ ಆಗುವ ಸಾಧ್ಯತೆಗಳನ್ನು ತಿಳಿದುಕೊಳ್ಳಬೇಕು.

# ನೀವು ಕೊಟ್ಟಿರುವ ಅರ್ಜಿಗೆ ಅನುಗುಣವಾಗಿ ಹೊಸದಾಗಿ ಪುನಃ ಸರ್ವೇ ಮಾಡಲು ಅದೀಶಿಸಬಹುದು.

ಅಥವಾ ರೆವೆನು ಇನ್ಸ್ಪೆಕ್ಟರ್ ಮತ್ತು ವಿಲ್ಲೇಜ್(Village Accountant) ಅಕೌಂಟ್ ಟೆಂಟ್ ಅವರ ಮೂಲಕ ವರದಿ ಕೇಳಬಹುದು.

# ಆ ವರದಿಯ ಆಧಾರೀಸಿ ಎದುರುದಾರರಿಗೆ ನೋಟೀಸ್ ಹೊರಡಿಸಲಾಗುತ್ತದೆ.

# ಇವರೆಲ್ಲರ ಹೇಳಿಕೆಗಳನ್ನು ಆಧಾರಿಸಿ ಹೊಸದಾಗಿ ದಾರಿ ಸೃಷ್ಟಿಸಲು ಅದೇಶಿಸಬಹುದು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಕೆಲವು ಸಂದರ್ಭಗಳಲ್ಲಿ ಸ್ವತಃ ಮಾನ್ಯ ಅಧಿಕಾರಿಗಳೇ ಸ್ಥಳ ಪರಿಶೀಲನೆಗೆ ಬರಬಹುದು.

ನಿಮ್ಮ ಜಮೀನಿಗೆ ಬಂಡಿದಾರಿ ಮತ್ತು ಕಾಲುದಾರಿ ಪಡೆಯಲು ಈ ಮೇಲೆ ಹೇಳಿರುವ ಅಂಶಗಳನ್ನು ಅನುಸರಿಸಿದರೆ ರೈತರಿಗೆ ಸಹಾಯವಾಗಬಹುದು.

ರೈತರು ಈ ಉಪಯುಕ್ತ ಮಾಹಿತಿಯ ಉಪಯೋಗವನ್ನು ಪಡೆದುಕೊಂಡು ತಮ್ಮ ಜಮೀನಿನ ಅಥವಾ ಹೊಲದ ಇಂತಹ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.

ಇನ್ನೂ ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ ಸೈಟ್ ನ ಸಂಪರ್ಕದಲ್ಲಿರಿ..

ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇

https://chat.whatsapp.com/CatKjFMzi1f5uiEQn86AW0

Leave a Reply

Your email address will not be published. Required fields are marked *