ಪ್ರಿಯ ರೈತರೇ, ರಾಜ್ಯದ ರೈತರಿಗೆ ಸಿಹಿ ಸುದ್ದಿ ಬಂದಿದ್ದು ಮತ್ತೊಂದು ಹಂತದ ಬೆಳೆ ಪರಿಹಾರ ಬಿಡುಗಡೆ ಆಗಿದೆ. ಇದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಎಲ್ಲರಿಗೂ ತಿಳಿದಿರುವಂತೆ ದೇಶದಲ್ಲಿ ಅತಿ ವೃಷ್ಟಿಯಿಂದ ರೈತರಿಗೆ ಹಾಗೂ ರೈತರು ಬೆಳೆದಂತಹ ಬೆಳೆಗಳು ನಾಶವಾಗಿ ಸಂಪೂರ್ಣ ನಷ್ಟವನ್ನು ಅನುಭವಿಸಿದ್ದಾರೆ. ನಾಶವಾದ ಬೆಳೆಗಳಿಗೆ ರಾಜ್ಯ ಸರ್ಕಾರವು ಬೆಳೆ ಪರಿಹಾರ ನೀಡುವ ಮೂಲಕ ರೈತರಿಗೆ ಉಂಟಾಗುವ ನಷ್ಟವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಕರ್ನಾಟಕದಲ್ಲಿ 2018 ರಿಂದ 2022ರ ಮೇ 2ರ ವರೆಗೆ ನಾಶವಾದ ಅಂತಹ ಬೆಳೆಗಳಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ರಾಜ್ಯದ ಲಕ್ಷಾಂತರ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿತ್ತು. ಬೆಳೆ ಹಾನಿಗೆ ಒಳಗಾದ ಲಕ್ಷಾಂತರ ರೈತರಿಗೆ ಪರಿಹಾರ ಹಣ ಈಗಾಗಲೇ ಜಮಾ ಮಾಡಲಾಗಿದೆ. ಮೂಲಗಳ ಪ್ರಕಾರ ಬೆಳೆ ಹಾನಿ ಪರಿಹಾರ ಅರ್ಜಿ ಸಲ್ಲಿಸಿದ 49,737 ರೈತರಿಗೆ ಇನ್ನೂ ಪರಿಹಾರ ಹಣ ಸಿಕ್ಕಿಲ್ಲ. ಆದರೆ ಈ ಬಾರಿ ಎಲ್ಲಾ ರೈತರಿಗೂ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ರೈತರು ಫಸಲ್ ಭೀಮಾ ಯೋಜನೆ ಮೂಲಕ ಬೆಳೆ ವಿಮೆಯನ್ನು ಮಾಡಿಸಿಕೊಳ್ಳಬಹುದು. ಈ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 5 ಲಕ್ಷಗಳವರೆಗೆ ವಿಮಾ ಅರ್ಜಿಗಳು ಬಂದಿದ್ದವು. ಇವುಗಳಿಗೆ 2022 ರ ಜೂನ್ ಮತ್ತು ಸೆಪ್ಟೆಂಬರ್ ತಿಂಗಳುಗಳ ಒಳಗೆ ಎಲ್ಲ ರೈತರ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಇನ್ನೂ ಕೆಲವು ರೈತರ ಖಾತೆಗೆ ಜಮಾ ಆಗಿರುವುದಿಲ್ಲ. ಆದರೆ ಈ ವರ್ಷದಲ್ಲಿ ಎಲ್ಲಾ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಅರ್ಜಿ ಸಲ್ಲಿಸಿದ ರೈತರಿಗೆ ಜಮಾ ಮಾಡಲಾಗುವುದೆಂದು ಸರ್ಕಾರ ಮಾಹಿತಿ ನೀಡಿದೆ.
ರೈತರು ನಿಮ್ಮ ಖಾತೆಗೆ ಬೆಳೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದರ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈಗ ತಿಳಿದುಕೊಳ್ಳೋಣ.
» ಮೊದಲಿಗೆ ಗೂಗಲ್ ನಲ್ಲಿ “ಫಸಲ್ ಭೀಮಾ ಯೋಜನೆ”ಯ ವೆಬ್ ಸೈಟ್ ತೆರೆದುಕೊಳ್ಳಬೇಕು.
» ಅದರಲ್ಲಿ ಆಧಾರ್ ಕಾರ್ಡ್ ನಂಬರ್ ಆಯ್ಕೆ ಕಾಣುತ್ತದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡನ್ನು ನಮೂದಿಸಿ “get data” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
» ನಂತರ ನಿಮಗೆ ಇನ್ನೊಂದು ಮುಖಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮಗೆ ಯಾವ ಕಾರಣಕ್ಕಾಗಿ ಬೆಳೆ ಪರಿಹಾರ ಹಣ ಬಿಡುಗಡೆಯಾಗಿದೆ ಎಂಬ ಪ್ರಶ್ನೆಗೆ ಪ್ರವಾಹ ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.
» ಅಲ್ಲಿ ಕೇಳಲಾಗುವ ಕೆಲವು ಮಾಹಿತಿಗಳನ್ನು ತುಂಬಿದ ನಂತರ “fetch details” ಎಂಬುದರ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನೀವು ಬೆಳೆ ಪರಿಹಾರ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದರ ಸ್ಟೇಟಸ್ ಅನ್ನು ನೋಡಬಹುದು.
ಈ ರೀತಿಯಾಗಿ ನೀವು ಹಿಂದಿನ ಮತ್ತು ಈಗಿನ ವರ್ಷಗಳ ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು.
ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಹಾಗೂ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡಲ್ಲಿ ಲಿಂಕ್ ಒತ್ತಿ 👇
https://chat.whatsapp.com/CatKjFMzi1f5uiEQn86AW0