ನಮಸ್ಕಾರ ಪ್ರೀಯ ರೈತರೇ, ಭಾರತ ಸರ್ಕಾರವು ರೈತರಿಗೆ ಸಹಾಯ ಮಾಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ಪ್ರಾರಂಭಿಸಿದೆ. ಮೊದಲ ಬಾರಿಗೆ ಫೆಬ್ರವರಿ 1, 2019ರಂದು ಮೊದಲ ಕಂತು ಭಾರತದಾದ್ಯಂತ ರೈತರ ಖಾತೆಗೆ ಜಮಾ ಮಾಡಲಾಗಿದೆ. ಇದಕ್ಕಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿ, ನಿಮಗೆ ಪ್ರತಿ ವರ್ಷ 6,000 ರೂಪಾಯಿಗಳನ್ನ ಒದಗಿಸಲಾಗುವುದು. ಇದನ್ನ ಎಲ್ಲಾ ರೈತರು ತಮ್ಮ ಕೃಷಿಗೆ ಬಳಸಬಹುದು. ಈ ಯೋಜನೆಯಡಿ 12ನೇ ಕಂತನ್ನು ಅಕ್ಟೋಬರ್ 2022ರಂದು ಬಿಡುಗಡೆ ಮಾಡಲಾಯಿತು.
ಇಲ್ಲಿಯವರೆಗೆ, ಈ ಯೋಜನೆಯ ಮೂಲಕ 10 ಕೋಟಿಗೂ ಹೆಚ್ಚು ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ ಮತ್ತು ರೈತರು ಈ ಯೋಜನೆಯ ಪ್ರಯೋಜನವನ್ನ ಪಡೆದುಕೊಂಡಿದ್ದಾರೆ. ಈ ಯೋಜನೆಯನ್ನ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ನೀಡಲಾಗುತ್ತದೆ. ಇಕೆವೈಸಿ ನೋಂದಣಿ pmkisan.gov.in ಪಿಎಂ ಕಿಸಾನ್ ಕೆವೈಸಿ ನವೀಕರಣವನ್ನು ಮಾಡಬಹುದು.
ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಯಾಗಿರುವ ರೈತರು ಡಿಸೆಂಬರ್ 31 ರೊಳಗೆ ತಮ್ಮ ಇ-ಕೆವೈಸಿ ಪರಿಶೀಲನೆಯನ್ನ ಮಾಡಬೇಕೆಂದು ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಪಿಎಂ-ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿ ರೈತರು ಡಿಸೇಂಬರ್ 31, 2022 ರೊಳಗೆ ಇ-ಕೆವೈಸಿ ಪರಿಶೀಲನೆಯನ್ನ ಮಾಡುವುದನ್ನ ಕಡ್ಡಾಯಗೊಳಿಸಲಾಗಿದೆ. ಇದರಿಂದ ಅವರು ಯೋಜನೆಯ ಅಡಿಯಲ್ಲಿ ಎಲ್ಲಾ ಪ್ರಯೋಜನಗಳನ್ನು ಸರಾಗವಾಗಿ ಪಡೆಯಬಹುದು.
ಇ-ಕೆವೈಸಿ ಇಲ್ಲದೇ ಪರಿಶೀಲನೆಯ ಸಂದರ್ಭದಲ್ಲಿ ಫಲಾನುಭವಿ ರೈತರು ಮುಂಬರುವ ಕಂತುಗಳಿಂದ ವಂಚಿತರಾಗಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಫಲಾನುಭವಿ ರೈತರು ಇ- ಮಿತ್ರ ಕೇಂದ್ರಕ್ಕೆ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಮೂಲಕ ಅಥವಾ ಬಯೋಮೆಟ್ರಿಕ್ ವ್ಯವಸ್ಥೆಯಿಂದ ಇ-ಕೆವೈಸಿ ಪರಿಶೀಲನೆಯನ್ನ ಪೂರ್ಣಗೊಳಿಸಿಕೊಳ್ಳಬೇಕು.
ಎಲ್ಲಾ ಇ- ಮಿತ್ರ ಕೇಂದ್ರಗಳಲ್ಲಿ ಇ-ಕೆವೈಸಿ ಶುಲ್ಕವನ್ನು ಪ್ರತಿ ಫಲಾನುಭವಿಗೆ (ತೆರಿಗೆ ಸೇರಿದಂತೆ) 15 ರೂ.ಗೆ ನಿಗದಿಪಡಿಸಲಾಗಿದೆ. ಇ-ಕೆವೈಸಿ ಪೂರ್ಣಗೊಂಡ ನಂತರವೇ ರೈತರು ಯೋಜನೆಯಲ್ಲಿ ಮುಂಬರುವ ಕಂತಿನ ಪ್ರಯೋಜನವನ್ನು ಪಡೆಯಲು ಸಹಾಯವಾಗುತ್ತದೆ.
pmkisan.gov.in ನಲ್ಲಿ ನೋಂದಾಯಿಸುವುದು ಹೇಗೆ?
1.ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ.
2.ಮುಖಪುಟದಲ್ಲಿ ಇ-ಕೆವೈಸಿಗಾಗಿ ನೋಂದಾಯಿಸಲು ಕೆವೈಸಿ ಮೇಲೆ ಕ್ಲಿಕ್ ಮಾಡಿ.
3.ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
4.ಕ್ಯಾಪ್ಟಾ ಕೋಡ್ ನಮೂದಿಸಿ ಮತ್ತು ನಂತರ ಶೋಧಿಸಿ.
5.ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6.ಫೋನ್ ಸಂಖ್ಯೆಗೆ ಒಟಿಪಿ ಪಡೆಯಲು, ಒಟಿಪಿ ಪಡೆಯಿರಿ ಮತ್ತು ವಿವರಗಳನ್ನು ಸಲ್ಲಿಸಿ.
7.ನೀವು ಒಟಿಪಿಯನ್ನು ಸ್ವೀಕರಿಸಿದ ತಕ್ಷಣ, ಪುಟದಲ್ಲಿ ನೀಡಲಾದ ಜಾಗದಲ್ಲಿ ಅದನ್ನು ನಮೂದಿಸಿ ಮತ್ತು ಎಂಟರ್ ಮಾಡಿ.
ರೈತರು ಡಿಸೇಂಬರ 31ರ ಒಳಗೆ ಈ ಕೆಲಸವನ್ನು ಮಾಡಿಸಿದರೆ ಮಾತ್ರ ಮುಂದಿನ ಕಂತಿನ ಹಣ ಜಮಾ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಹೆಚ್ಚಿನ ಮಾಹಿತಿ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇👇
https://chat.whatsapp.com/CatKjFMzi1f5uiEQn86AW0