ಪ್ರಿಯ ರೈತರೇ, ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಸರ್ಕಾರವು ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರಿಗೆ ಬಹುಮುಖ್ಯ ಮಾಹಿತಿಯನ್ನು ನೀಡಿದೆ.
2022-23ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ರಾಜ್ಯ ಸರ್ಕಾರವು ರೈತರಿಗೆ ಸೂಚಿಸಿದೆ.
ಈ ಯೋಜನೆಯಡಿ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಜೋಳ(ನೀ), ಕಡಲೆ (ನೀ/ಮ.ಆ), ರಾಗಿ(ನೀ) ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ನೆಲಗಡಲೆ(ಶೇಂಗಾ)(ನೀ), ಭತ್ತ(ನೀ), ಸೂರ್ಯಕಾಂತಿ(ನೀ) ಹಾಗೂ ಹೋಬಳಿ
ಮಟ್ಟದ ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ(ನೀ/ಮ.ಆ),ಜೋಳ(ನೀ/ಮ.ಆ), ಮೆಕ್ಕೆಜೋಳ(ನೀ/ಮ.ಆ) ಹುರುಳಿ(ಮ.ಆ), ಸೂರ್ಯಕಾಂತಿ(ನೀ/ಮ.ಆ), ರಾಗಿ(ನೀ), ಈರುಳ್ಳಿ(ನೀ), ಗೋಧಿ(ಮ.ಆ) ಮತ್ತು ಬೇಸಿಗೆ ಹಂಗಾಮಿನ ಸೂರ್ಯಕಾಂತಿ(ನೀ), ಈರುಳ್ಳಿ (ನೀ)ನೆಲಗಡಲೆ(ಶೇಂಗಾ)(ನೀ), ಭತ್ತ(ನೀ), ರಾಗಿ(ನೀ) ಇಂತಹ ಬೆಳೆಗಳಿಗೆ ರೈತರು ವಿಮೆಯನ್ನು ಮಾಡಿಸಬಹುದು ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಹಿಂಗಾರು ಹಂಗಾಮಿನ ಬೆಳೆಗಳಾದ-ಜೋಳ(ನೀ) ಡಿ.31, ಜೋಳ (ಮ) ಡಿ.15, ಮುಸುಕಿನ ಜೋಳ(ನೀ/ಮ.ಆ), ಕಡಲೆ(ನೀ/ಮ)ಡಿ.31, ಹುರುಳಿ(ಮ)ಡಿ.31, ಸೂರ್ಯಕಾಂತಿ(ನೀ/ಮ.ಆ) ಡಿ.16, ಗೋಧಿ(ಮ.ಆ/ನೀ) ಡಿ.16, ಈರುಳ್ಳಿ(ನೀ) ನ.30, ಬೇಸಿಗೆ ಬೆಳೆಗಳಾದ ಭತ್ತ(ನೀ), ನೆಲಗಡಲೆ(ಶೇಂಗಾ)(ನೀ) ಸೂರ್ಯಕಾಂತಿ(ನೀ) ಮತ್ತು ಈರುಳ್ಳಿ(ನೀ) 2023ನೇ ಫೆ.28 ರಂದು ರೈತರು ಬೆಳೆ ವಿಮೆ ಮಾಡಿಸಲು ಅಂತಿಮ ದಿನಾಂಕವಾಗಿರುತ್ತದೆ.
ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‌ಗಳು/ಸಾರ್ವಜನಿಕ ಸೇವಾ ಟೋಲ್ ಫ್ರೀ ನಂಬರ್: 08026- 564535, 180042579, ವಿಮಾ ಕಂಪನಿ ಟೋಲ್ ಫ್ರೀ ನಂಬರ್: 18002664141 ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಸಂರಕ್ಷಣೆ ಪೋರ್ಟಲ್ https://www.samrakshane.karnataka.gov.in ಸಂಪರ್ಕಿಸಬಹುದಾಗಿದೆ.