ಆತ್ಮೀಯ ರೈತ ಭಾಂದವರಿಗೆ ನಮಸ್ಕಾರಗಳು. ಈ ಲೇಖನದಲ್ಲಿ ನಾವು ಗೋ ಕೃಪಾಮೃತ ಎಂಬ ಬ್ಯಾಕ್ಟೀರಿಯಾ ಕಲ್ಚರ್ ಬಗ್ಗೆ ತಿಳಿದುಕೊಳ್ಳೊಣ.
ಗೋ ಕೃಪಾಮೃತವು ಒಂದು ಬ್ಯಾಕ್ಟೀರಿಯಾ ಕಲ್ಚರ್ ಆಗಿದ್ದು, ಗೋ ಕೃಪಾಮೃತವು ಬ್ಯಾಕ್ಟೀರಿಯಾ ಕಲ್ಚರ್, ಪಂಚಗವ್ಯ ಉತ್ಪನ್ನಗಳು ಮತ್ತು ಸಂಪೂರ್ಣವಾಗಿ ನೈಸರ್ಗಿಕ ಮತ್ತು ಆಯುರ್ವೇದ ಗಿಡಮೂಲಿಕೆಗಳಿಂದ ಬನಸಿ ಗಿರ್ ಗೋಶಾಲೆ ಗುಜರಾತನಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಇದು ಅವರ ವ್ಯಾಪಕವಾದ ಸಂಶೋಧನೆ ಮತ್ತು ಪ್ರಯೋಗದ ಫಲಿತಾಂಶವಾಗಿದೆ. ಈ ಬ್ಯಾಕ್ಟೀರಿಯಾ ಕಲ್ಚರ್ ಸ್ನೇಹಿ ಬ್ಯಾಕ್ಟೀರಿಯಾದ 40 ವಿಭಿನ್ನ ತಳಿಗಳನ್ನು ಹೊಂದಿದೆ, ಇದು ಸಸ್ಯದ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಸ್ಯಗಳಿಗೆ ಬೇಕಾಗುವ ಹಲವಾರು ಪೋಷಕಾಂಶಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಗೋ ಕೃಪಾಮೃತವು ರೈತರಿಗೆ ವರದಾನವಾಗಿದೆ. ಏಕೆಂದರೆ ಗೋಶಾಲೆಯ ಮುಖ್ಯಸ್ಥರಾದ ಶ್ರೀ ಗೋಪಾಲಭಾಯಿ ಸುತಾರಿಯಾ ಅವರು ಈ ಕಲ್ಚರ್ ಅನ್ನು ರೈತರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
200 ಲೀಟರ್ ಗೋ ಕೃಪಾಮೃತವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು :
1. ಕೆಮಿಕಲ್ ರಹಿತ ಪ್ಲಾಸ್ಟಿಕ್ ಡ್ರಮ್ (200ಲೀಟರ್).
2. ಎರಡು ಲೀ ಗೋ ಕೃಪಾಮೃತ ಕಲ್ಚರ್.
3. ಎರಡು ಲೀಟರ್ ದೇಶಿ ಹಸುವಿನ ತಾಜಾ ಮಟ್ಟಿಗೆ.
4. ಎರಡು ಕೆಜಿ ಸಂಪೂರ್ಣ ಸಾವಯವ ಬೆಲ್ಲ.
ತಯಾರಿಕೆ ವಿಧಾನ :
• 200 ಲೀಟರ್ ಸಾಮರ್ಥ್ಯದ ಸ್ವಚ್ಚವಾದ ಡ್ರಂನ್ನು ನೆರಳಿನಲ್ಲಿಟ್ಟು ನೀರು ತುಂಬಿ.
• ನಂತರ ಅದಕ್ಕೆ ದೇಶಿ ಹಸುವಿನ ತಾಜಾ ಮಜ್ಜಿಗೆ ಹಾಗೂ ಸಂಪೂರ್ಣ ಸಾವಯವ ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಡ್ರಂಗೆ ಸುರಿಯಿರಿ.
• ಗೋ ಕೃಪಾಮೃತ ಬಳಸುತ್ತಿರುವ ರೈತರ ಹತ್ತಿರ ತಂದಂತಹ ಗೋ ಕೃಪಾಮೃತ ಮದರ್ ಕಲ್ಟರ್ ಅನ್ನು ಡ್ರಂನಲ್ಲಿ ಸುರಿದು ಕೋಲಿನಿಂದ ಚೆನ್ನಾಗಿ ತಿರುಗಿಸಿ ಬಟ್ಟೆಯನ್ನು ಕಟ್ಟಿರಿ.
• ಪ್ರತಿ ದಿನ 2 ರಿಂದ 3 ಬಾರಿ ತಿರುಗಿಸಿದಾಗ ಒಂದು ವಾರದ ನಂತರ ಸಂಪೂರ್ಣವಾಗಿ ಪೂರ್ತಿ ಡ್ರಂ ಗೋ ಕೃಪಾಮೃತವು ತಯಾರಾಗುತ್ತದೆ.
ಗೋ ಕೃಪಾಮೃತವನ್ನು ಬಳಸುವ ವಿಧಾನ :
• ಯಾವುದೇ ಬೆಳೆಗೆ ಸಿಂಪರಣೆ ಮಾಡುವಾಗ 15 ಲೀಟರ್ ನೀರಿಗೆ 5 ಲೀಟರ್ ಗೋ ಕೃಪಾಮೃತ ಸೇರಿಸಿ ಸಿಂಪರಣೆ ಮಾಡಬೇಕು. (15+5).
• ಸಿಂಪಡಿಸುವಾಗ ಪ್ರಮಾಣದಲ್ಲಿ ಹೆಚ್ಚುಕಮ್ಮಿಯಾದರೆ ಅಥವಾ ಬರೀ ಗೋ ಕೃಪಾಮೃತವನ್ನೇ ಸಿಂಪಡಿಸಿದರೂ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.
• ವಾರಕ್ಕೆ ಒಂದು ಸಲ ಸಿಂಪರಣೆ ಮಾಡುವುದು ಸೂಕ್ತ. ಆಗದೇ ಇದ್ದಲ್ಲಿ ಹತ್ತು ದಿನಕ್ಕೆ ಇಲ್ಲವಾದರೆ 15 ದಿನಗಳಿಗೆ ಒಮ್ಮೆಯಾದರೂ ಸಿಂಪರಣೆ ಮಾಡಬೇಕು.
• ಭೂಮಿಗೆ ಕೊಡುವುದಾದರೆ ಒಂದು ಎಕರೆಗೆ ಪ್ರತಿ ತಿಂಗಳು ಒಂದು ಸಾವಿರ ಲೀಟರ್ ಯಾವುದೇ ನೀರಾವರಿ ವ್ಯವಸ್ಥೆಯ ಮುಖಾಂತರ ನೀಡಬಹುದು.
ಗೋ ಕೃಪಾಮೃತದ ಉಪಯೋಗಗಳು :
• ಸಿಂಪಡಣೆ ಮಾಡುವುದರಿಂದ ಎಲೆಗಳಲ್ಲಿ ಆಹಾರ ತಯಾರಿಕೆಗೆ ಸಹಕಾರಿಯಾಗುತ್ತದೆ.
• ಬೆಳೆಗಳಲ್ಲಿ ಸಣ್ಣಪುಟ್ಟ ರೋಗಗಳು ಬರದಂತೆ ಬೆಳೆಗಳಿಗೆ ಶಕ್ತಿಯನ್ನು ಹೆಚ್ಚಿಸುತ್ತದೆ.
• ಹಲವಾರು ಬ್ಯಾಕ್ಟಿರಿಯಾಗಳು ಇದರಲ್ಲಿ ಇರುವುದರಿಂದ ಆಹಾರ ತಯಾರಿಕೆಯಲ್ಲಿ ಸಹಕಾರಿಯಾಗಿ ಎಲೆಗಳು ಅಗಲವಾಗಿ ಹಿಗ್ಗುತ್ತವೆ. ಇದರಿಂದ ಬೆಳವಣಿಗೆ ಉತ್ತಮವಾಗಿರುತ್ತದೆ.
• ಎಲೆಯ ಮೇಲೆ ಬೆಳೆಯನ್ನು ನಾಶ ಮಾಡುವ ಕೆಟ್ಟ ಶಿಲೀಂದ್ರಗಳು ಇದ್ದಾಗ ಹಾಗೂ ಅವುಗಳು ಮೊಟ್ಟೆ ಇಟ್ಟಿದ್ದರೆ ಅವುಗಳನ್ನು ನಾಶಪಡಿಸಿ ಬರಬಹುದಾದ ರೋಗಗಳನ್ನು ನಿಯಂತ್ರಿಸುತ್ತದೆ.
• ಗೋ ಕೃಪಾಮೃತ ಭೂಮಿಗೆ ಸೇರಿಸಿದಾಗ ಇದರಲ್ಲಿರುವ NPK ದೊರಕಿಸುವ ಬ್ಯಾಕ್ಟಿರಿಯಾಗಳು ಬೆಳೆಗಳಿಗೆ ಬೇರಿನ ಮುಖಾಂತರ NPK ದೊರಕಿಸಿದಾಗ ಬೆಳೆಗೆ ಬೆಳವಣಿಗೆ ವೃದ್ಧಿಯಾಗುತ್ತದೆ.
• ಭೂಮಿಗೆ ನೀಡುವುದರಿಂದ ಭೂಮಿಯಲ್ಲಿನ ತ್ಯಾಜ್ಯವನ್ನು ಬೇಗನೆ ಕೊಳೆಸುತ್ತದೆ.
• ಭೂಮಿಯಲ್ಲಿನ ರಾಸಾಯನಿಕ ಅಂಶವನ್ನು ತಿಳಿಗೊಳಿಸುತ್ತಾ ಮಣ್ಣನ್ನು ವಿಷಮುಕ್ತಗೊಳಿಸಿ, ಫಲವತ್ತತೆ ಹೆಚ್ಚಿಸಿ ಎರೆಹುಳುಗಳು ಉತ್ಪಾದನೆಯಾಗುವಂತೆ ಮಣ್ಣು ಮೃದುವಾಗಿಸುತ್ತದೆ.
ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ –
ಗೋ ಕೃಪಾಮೃತ ಮದರ್ ಕಲ್ಚರ್ ಬೇಕಿದ್ದಲ್ಲಿ, ಸಾವಯವ ಬೆಲ್ಲ ಬೇಕಿದ್ದಲ್ಲಿ ವಾಟ್ಸಪ್ ಮುಖಾಂತರ ಸಂಪರ್ಕಿಸಿ.
ವಿರೇಶ. ಮನಗೂಳಿ
ಸಾವಯವ ಕೃಷಿಕ Mob-9591436195
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ಮಾಹಿತಿ ಕೊಡಲು ಕೆಳಕಂಡ ಲಿಂಕನ್ನು ಒತ್ತಿ 👇