ಪ್ರೀಯ ರೈತರೇ, ದೇಶದ ಕೋಟ್ಯಾಂತರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತ ಬಾಂಧವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಈ ಯೋಜನೆಯ 12ನೇ ಕಂತಿನ ಹಣ ಯಾವ ಯಾವ ರೈತರಿಗೆ ಬಂದಿಲ್ಲವೋ ಈಗ ಅಂತಹ ರೈತರಿಗೆ ಹಣ ಜಮೆ ಮಾಡಲಾಗಿದೆ ಎಂದು ರೈತರಿಗೆ ಕೇಂದ್ರ ಸರ್ಕಾರ ಬಹುಮುಖ್ಯ ಮಾಹಿತಿ ನೀಡಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರೈತರಿಗೆ 2000 ರೂ ನೇರವಾಗಿ ರೈತರ ಖಾತೆಗೆ ಜಮಯಾಗಿದೆ. ಅಕ್ಟೋಬರ್ 17 ನೇ ತಾರೀಕಿಗೆ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು ಎಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹೇಳಲಾಗಿತ್ತು.ಆದರೆ ಬಹಳಷ್ಟು ಜನ ರೈತರಿಗೆ 12ನೇ ಕಂತಿನ ಹಣ ಜಮೆಯಾಗಿಲ್ಲಾ. 12ನೇ ಕಂತಿನ ಹಣ ಯಾವ ರೈತರಿಗೆ ಜಮಾ ಆಗಿರುವುದಿಲ್ಲವೋ ಅಂತಹ ರೈತರಿಗೆ 2,000 ರೂ ಕೇಂದ್ರ ಸರ್ಕಾರದಿಂದ ಜಮಾ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
12ನೇ ಕಂತಿನ ಹಣವನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ ಹನ್ನೆರಡನೇ ಕಂತಿನ ಹಣ ಜಮೆಯಾಗದ ರೈತರು ಕೂಡಲೇ ತಮ್ಮ ಮೊಬೈಲ್ ನಲ್ಲಿ ಮೆಸೇಜ್ ಅನ್ನು ಚೆಕ್ ಮಾಡಿಕೊಳ್ಳಬೇಕು. ಅಥವಾ ನಿಮ್ಮ ನೊಂದಾಯಿತ ಬ್ಯಾಂಕಿನಲ್ಲಿ ಹೋಗಿ ವಿಚಾರಿಸಬೇಕು.
ಒಂದು ವೇಳೆ ಹಣ ಜಮೆ ಯಾಗದಿದ್ದರೆ ಇನ್ನೂ ಒಂದು ಅಥವಾ ಎರಡು ದಿನಗಳ ಅವಧಿಯಲ್ಲಿ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಇದೇ ತಿಂಗಳು 17 ನೇ ತಾರೀಖಿನಿಂದ ಯಾವ ಯಾವ ರೈತರಿಗೆ ಹಣ ಬಂದಿಲ್ಲವೋ ಅವರಿಗೆ ಹಣವನ್ನು ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಆಧಾರ್ ಕಾರ್ಡ್ ಅಲ್ಲಿ ನಿಮ್ಮ ಹೆಸರು ಸರಿಯಾಗಿಲ್ಲದಿದ್ದರೆ, ಆಧಾರ್ ಕಾರ್ಡ್ ಅಥವಾ ಬ್ಯಾಂಕ್’ನಲ್ಲಿ ಹಾಕಿರುವ ದಾಖಲೆಗಳಲ್ಲಿ ಹಲವು ಬಾರಿ ರೈತರ ಹೆಸರು ಸರಿಯಾಗಿರುವುದಿಲ್ಲ. ಪೋರ್ಟಲ್ನಲ್ಲಿ ನೋಂದಾಯಿಸುವಾಗ ರೈತರು ತಪ್ಪು ಹೆಸರುಗಳನ್ನ ನಮೂದಿಸುತ್ತಾರೆ. ಇದರಿಂದ ರೈತರ ಕಂತುಗಳು ಬಂದಿರುವದಿಲ್ಲ.
ಬ್ಯಾಂಕ್ ವಿವರಗಳನ್ನು ಸರಿಯಾಗಿ ಭರ್ತಿ ಮಾಡದಿದ್ದರೂ ಬ್ಯಾಂಕ್ ವಿವರಗಳನ್ನ ಸರಿಯಾಗಿ ಭರ್ತಿ ಮಾಡದಿದ್ದರೂ ರೈತರ ಖಾತೆಗೆ ಹಣ ಬರುತ್ತಿಲ್ಲ. ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಬ್ಯಾಂಕ್ನ ಐಎಫ್‌ಎಸ್ಸಿ ಕೋಡ್(IFSC Code) ತಪ್ಪಾಗಿ ನಮೂದಿಸಿದ್ದರೆ, ರೈತರಿಗೆ ಹಣ ಸಿಗುವುದಿಲ್ಲ.
12ನೇ ಕಂತಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಹಣ ಬಂದಿಲ್ಲವೆಂದಲ್ಲಿ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿ..
ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ( ಟೋಲ್ ಫ್ರೀ ) ಅಥವಾ 011-23381092 ಅನ್ನು ಸಹ ಸಂಪರ್ಕಿಸಬಹುದು..
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ ನ ಸಂಪರ್ಕದಲ್ಲಿರಿ..