ರಾಜ್ಯದ ರೈತ ಬಾಂಧವರಿಗೆ ನಮಸ್ಕಾರಗಳು,
ರೈತ ಸಮುದಾಯಕ್ಕೆ ಈ ಲೇಖನದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕುರಿತು ಮತ್ತೊಂದು
ಪ್ರಮುಖವಾದ ಮಾಹಿತಿ ಸಿಗಲಿದೆ. ಹೌದು ಬೆಳೆ ವಿಮೆ ಯೋಜನೆಯಡಿಯಲ್ಲಿ ಯಾವ ಜಿಲ್ಲೆ ಟಾಪ್ ಇದೆ ಮತ್ತು ಯಾವ ಜಿಲ್ಲೆ ಪರಿಹಾರ ಸಿಗಲಿದೆ ಎಂದು ಮಾಹಿತಿ ತಿಳಿದು ಬಂದಿದ್ದು ಪ್ರತಿಯೊಬ್ಬ ರೈತರು ಕೂಡ ಈ ಲೇಖನವನ್ನು ಸಂಪೂರ್ಣವಾಗಿ ಓದಿ ವಿಷಯವನ್ನು ತಿಳಿದುಕೊಳ್ಳಿ.
ಆರೋಗ್ಯ ವಿಮೆಯನ್ನೇ ಮಾಡಿಸಿಕೊಳ್ಳದಿರುವ ಜನರ ನಡುವೆ ಬೆಳೆ ವಿಮೆ ಮಾಡಿಸುವಂತಹ ರೈತರ ಸಂಖ್ಯೆ ಹೆಚ್ಚಾಗುತ್ತಿದೆ . ಇತ್ತೀಚೆಗೆ ಹವಾಮಾನ ವೈಪರಿತ್ಯಗಳಿಂದಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಸರ್ವೆ ಸಾಮಾನ್ಯ ಎಂಬಂತಾಗಿದ್ದು, ರೈತರು ಒಂದಿಲ್ಲೊಂದು ಕಾರಣಕ್ಕೆ ಬೆಳೆ ನಷ್ಟ ಮಾಡಿಕೊಳ್ಳುವುದು ಸಹ ಸಾಮಾನ್ಯವಾಗಿದೆ . ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಕೈಗೆ ಬಂದ ಬೆಳೆ ಗೋದಾಮಿಗೆ ಬರದಂತಾಗಿ ರೈತರು ತೀವ್ರ ನಷ್ಟಕ್ಕೆ ಒಳಗಾಗುತ್ತಿದ್ದಾರೆ . ಈ ನಷ್ಟವನ್ನು ತಪ್ಪಿಸಿಕೊಳ್ಳುವ ಸಲುವಾಗಿ ರೈತರು ಬೆಳೆ ವಿಮೆಗೆ ಮೊರೆ ಹೋಗುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಕೈಗೆ ಬಂದ ಬೆಳೆ ಗೋದಾಮಿಗೆ ಬರದಂತಾಗಿ ರೈತರು ತೀವ್ರ ನಷ್ಟಕ್ಕೆ ಒಳಗಾಗುತ್ತಿದ್ದಾರೆ . ಈ ನಷ್ಟವನ್ನು ತಪ್ಪಿಸಿಕೊಳ್ಳುವ ಸಲುವಾಗಿ ರೈತರು ಬೆಳೆ ವಿಮೆಗೆ ಮೊರೆ ಹೋಗುತ್ತಿದ್ದಾರೆ . 2002 ರಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿದ್ದು 20 ವರ್ಷಗಳಿಂದ ಬೆಳೆ ವಿಮೆ ಜಾರಿಯಲ್ಲಿದ್ದರೂ ವಿಮೆ ಮಾಡಿಸುವ ರೈತರ ಸಂಖ್ಯೆ ಬಹಳ ಕಡಿಮೆ ಇತು, ಕೃಷಿ, ತೋಟಗಾರಿಕೆ ಇಲಾಖೆ ಜಾಗೃತಿ ಮುಖ್ಯಮಂತ್ರಿಯಾಗಿದ್ದಾಗ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿದ್ದು, 20 ವರ್ಷಗಳಿಂದ ಬೆಳೆ ವಿಮೆ ಜಾರಿಯಲ್ಲಿದ್ದರೂ ವಿಮೆ ಮಾಡಿಸುವ ರೈತರ ಸಂಖ್ಯೆ ಬಹಳ ಕಡಿಮೆ ಇತ್ತು ಕೃಷಿ, ತೋಟಗಾರಿಕೆ ಇಲಾಖೆ ಜಾಗೃ ಹೊರತಾಗಿಯೂ ರೈತರು ವಿಮೆ ಮಾಡಿಸುತ್ತಿರಲಿಲ್ಲ . ಆದರೆ, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಾಗ ಈ ವರ್ಷ ದಾಖಲೆ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ಮಾಡಿಸಿದ್ದಾರೆ .
2022 ರ ಜೂನ್ ಅಂತ್ಯಕ್ಕೆ ಬೆಳೆ ವಿಮೆ ನೋಂದಣಿ ಅವಧಿ ಮುಗಿದಿದೆ . ರಾಜ್ಯದಲ್ಲಿ ಒಟ್ಟು 3,82,651 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 1,18,081 ನೋಂದಾಯಿಸಿದ್ದು ಮೊದಲನೇ ಸ್ಥಾನದಲ್ಲಿದೆ . ಉತ್ತರ ಕನ್ನಡದ 85,375 ನೋಂದಣಿ ಮೂಲಕ ದ್ವಿತೀಯ ಸ್ಥಾನದಲ್ಲಿದೆ . ಮೂರನೇ ಸ್ಥಾನದಲ್ಲಿ ಶಿವಮೊಗ್ಗ ಇದ್ದು 44,046
ಮಂದಿ ರೈತರು ಹೆಸರು ನೋಂದಾಯಿಸಿದ್ದಾರೆ .
ಪ್ರತಿ ಜಿಲ್ಲೆಯ ಬೆಳೆ ಪರಿಹಾರ ಪಟ್ಟಿ
ದಕ್ಷಿಣ ಕನ್ನಡ – 1,18,081
ಉತ್ತರ ಕನ್ನಡ – 85,375
ಶಿವಮೊಗ್ಗ – 44,046
ಚಿಕ್ಕಮಗಳೂರು -29,923
ತುಮಕೂರು – 20,289
ವಿಜಯಪುರ – 16,267
ಹಾಸನ – 9,317
ದಾವಣಗೆರೆ – 9,205
ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಬೆಳೆ ವಿಮಾ ಕಂಪನಿಯ ಅಧಿಕಾರಿಗಳ ಮೊಬೈಲ್ ನಂಬರ್ ಪಡೆಯಲು ಈ 18001801511 ಸಹಾಯವಾಣಿಗೆ ಕರೆ ಮಾಡಿ.
ಹೆಚ್ಚಿನ ಮಾಹಿತಿ ಪಡೆಯಲು ಫಸಲ್ ಭೀಮಾ ಯೋಜನೆಯ ವೆಬ್‌ಸೈಟ್ ಭೇಟಿ ಮಾಡಿ.
ಇದರ ಜೊತೆಗೆ ಇನ್ಸೂರೆನ್ಸ್ ಕಂಪನಿಗಳು ಹಣವನ್ನು ಇನ್ಸೂರೆನ್ಸ ಮಾಡಿಸಿಕೊಂಡು ಸುಮ್ಮನೆ ಕುಳಿತುಕೊಳ್ಳದೆ ರೈತನಿಗೆ ಸರಿಯಾದ ಸಮಯದಲ್ಲಿ ಬೆಳೆವಿಮೆ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು . ಒಂದು ವೇಳೆ ಆಧಾರ್ ಅಥವಾ ಬೇರೆ ಮಾಹಿತಿ ರೈತನಿಂದ ಅಥವಾ ಬೇರೆ ಯಾವುದೇ ಕಾರಣಗಳಿಂದ ಮಾಹಿತಿ ತಪ್ಪಿದ್ದಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡಬೇಕು.
ಈ ಕೆಲಸವನ್ನು ಎಲ್ಲಾ ಅಧಿಕಾರಿಗಳು ಮತ್ತು ಇನ್ಸೂರೆನ್ಸ್ ಕಂಪನಿಗಳು ನಿರ್ಲಕ್ಷ ಮಾಡಬಾರದು.ಸರಿಯಾಗಿ ಬೆಳೆ ವಿಮೆ ಪರಿಹಾರ ಕೃಷಿ ಅಧಿಕಾರಿಗಳೊಂದಿಗೆ ಕೈಜೋಡಿಸಬೇಕೆಂದು ಕೃಷಿ ಸಚಿವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ 🌱
ವೆಬ್ಸೈಟ್ ನ ಸಂಪರ್ಕದಲ್ಲಿರಿ..