ರಾಜ್ಯದ ಎಲ್ಲಾ ರೈತರಿಗೆ ಬಂಪರ್ ಗಿಫ್ಟ್. ಕೃಷಿ ಸಚಿವ ಬಿ ಸಿ ನಾಗೇಶ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಎಲ್ಲಾ ರೈತರಿಗೆ, ಕೃಷಿಕರಿಗೆ, ಕಾರ್ಮಿಕರಿಗೆ ಸಿಹಿ ಸುದ್ದಿಯನ್ನ ನೀಡಿದ್ದಾರೆ.

ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಯನ್ನು ನಿಗಿಸಿ ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆ ತಗ್ಗಿಸಿ ಸಕಾಲದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಹಾಗೂ ಕೃಷಿಯಲ್ಲಿ ಯಾಂತ್ರಿಕರಣವನ್ನ ಅಳವಡಿಸಿಕೊಳ್ಳಲು, ರೈತರನ್ನು ಪ್ರೋತ್ಸಾಹಿಸಲು ಕೃಷಿ ಯಾಂತ್ರಿಕರಣ ಯೋಜನೆಯಡಿ ಅರ್ಜಿಯನ್ನ ಆಹ್ವಾನಿಸಲಾಗಿದೆ.

ಕೃಷಿ ಯಾಂತ್ರಿಕರಣ ಯೋಜನೆ ಅಡಿ ಉಳುಮೆಯಿಂದ ಕೊಯ್ಲಿನವರೆಗೆ ಉಪಯುಕ್ತವಿರುವ ವಿವಿಧ ಮಾದರಿಯ ಚಿಕ್ಕ ಟ್ರ್ಯಾಕ್ಟರ್ ಗಳು, ಪವರ್ ಟೈಲರ್ ಗಳು, ಭೂಮಿ ಸಿದ್ಧತೆ ಉಪಕರಣಗಳು, ನಾಟಿ ಬಿತ್ತನೆ ಉಪಕರಣಗಳು, ಅಂತರ್ ಬೇಸಾಯ ಉಪಕರಣಗಳು, ಡಿಸೈಲ್ ಪಂಪ್ ಸೆಟ್, ಟ್ರ್ಯಾಕ್ಟರ್ ಟೈಲರ್ ಇಂಜಿನ್ ಚಾಲಿತ ಸಂಸ್ಕರಣ ಉಪಕರಣಗಳು, ಬೆಳೆ ಕಟಾವು ಒಕ್ಕಳೆ ಯಂತ್ರಗಳು, ತ್ಯಾಜ್ಯ ವಸ್ತುಗಳ ನಿರ್ವಹಣಾ ಉಪಕರಣಗಳು ಮತ್ತು ಕೃಷಿ ಚಟುವಟಿಕೆಗೆ ಸಂಬಂಧಿಸಿದ ಇತರೆ ಉಪಕರಣ ಸಹಾಯಧನಕ್ಕಾಗಿ ಅರ್ಜಿಯನ್ನ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಸಾಮಾನ್ಯ ರೈತರಿಗೆ ಶೇಕಡಾ 50% ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಕಡಾ 90%ರಷ್ಟು ಸಹಾಯಧನವನ್ನು ಗರಿಷ್ಟ 1 ಲಕ್ಷ ದವರೆಗೆ ಮಿತಿಗೊಳಿಸಲಾಗಿದೆ.ಸಣ್ಣ ಟ್ರ್ಯಾಕ್ಟರ್ ಗಳಿಗೆ ಸಾಮಾನ್ಯ ರೈತರಿಗೆ 75ಸಾವಿರ ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ 3ಲಕ್ಷದ ವರೆಗೆ ಸಹಾಯಧನವನ್ನ ನೀಡಲಾಗುತ್ತಿದೆ.

ರೈತರು ಇಚ್ಚೆ ಪಡುವ ಕೃಷಿ ಯಂತ್ರೋಪಕರಣಗಳನ್ನು ಕೇಂದ್ರ ಕಚೇರಿಯಿಂದ ಅನುಮೋದನೆಯಾಗಿರುವ ಸಂಸ್ಥೆಗಳಿಂದ ಪ್ರಚಲೀತವಿರುವ ಮಾರುಕಟ್ಟೆ ದರ ಅಥವಾ ಅನುಕೂಲಕರ ದರದಲ್ಲಿ ಚೌಕಾಸಿ ಮಾಡಿ ಸೌಲತ್ತನ್ನು ಪಡೆಯಲು ಸಂಪೂರ್ಣವಾಗಿ ಸ್ವತಂತ್ರರಾಗಿರುತ್ತಾರೆ. ಒಬ್ಬರಿಗೆ ಒಂದಕ್ಕಿಂತ ಹೆಚ್ಚಿನ ಸೌಲಭ್ಯವನ್ನು ಪಡೆಯಲು ಅನುದಾನ ಲಭ್ಯತೆ ನೋಡಿಕೊಂಡು ಅವಕಾಶ ನೀಡಲಾಗುತ್ತದೆ. ಪ್ರತಿ ಫಲಾನುಭವಿಗೆ ಆಯಾ ಆರ್ಥಿಕ ವರ್ಷದಲ್ಲಿ ಗರಿಷ್ಟ 1 ಲಕ್ಷ ಸಹಾಯಧನ ಮಿತಿಗೊಳಿಸಲಾಗಿದೆ.ಒಂದಕ್ಕಿಂತ ಹೆಚ್ಚು ಬಗೆಯ ಉಪಕರಣ ಮತ್ತು ಸೌಲಭ್ಯಗಳಿಗೆ ಸರ್ಕಾರದಿಂದ ಸಹಾಯಧನವನ್ನು ನೀಡುತ್ತಿದೆ.

ಒಂದು ಉಪಕರಣವನ್ನ ಸಹಾಯಧನ ಯೋಜನೆಯಡಿ ಪಡೆದ ನಂತರ ಅದೇ ಉಪಕರಣವನ್ನ ಮುಂದಿನ 3 ವರ್ಷಗಳ ವರೆಗೆ ಸಹಾಯಧನ ಪಡೆಯಲು ಅವಕಾಶ ಇರುವುದಿಲ್ಲ. ಈ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿಸಲ್ಲಿಸುವುದು ಹೇಗೆಂದರೆ,

1)ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.ನಿಮ್ಮ ಹತ್ತಿರದ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರ ಗಳು ಇರುತ್ತವೆ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕು.

2) ಗ್ರಾಮ ಪಂಚಾಯತಿ ಕಚೇರಿಯಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.ಅಷ್ಟೇ ಅಲ್ಲದೆ ಕಂದಾಯ ಕೃಷಿ ತೋಟಗಾರಿಕೆ ಇಲಾಖೆ ಕಚೇರಿಯಲ್ಲೂ ಕೂಡ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು. ನೀವು ಕೂಡ ರೈತರು, ಕಾರ್ಮಿಕರು ಆಗಿದ್ದರೆ ಈ ಯೋಜನೆ ಅಡಿ ಅರ್ಜಿ ಸಲ್ಲಿಸಿ 75 ಸಾವಿರ ದಿಂದ 3 ಲಕ್ಷದ ವರೆಗೆ ಸಹಾಯಧನವನ್ನು ಪಡೆಯಬಹುದಾಗಿದೆ.

ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *