ರಾಜ್ಯದಲ್ಲಿರುವ ರೈತರಿಗೆ ಪ್ರಮುಖವಾದ ಸುದ್ದಿ.2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯನ್ನು ರಾಜ್ಯದ ಹಲವಾರು ಜನ ಮಾಡಿಸಿದ್ದಾರೆ.ಈ ಬೆಳೆ ವಿಮೆ ಹಣ ನಿಮಗೆ ಸಿಗಬೇಕಾದರೆ ಹೇಗೆ ಮಾಡಬೇಕು?ವಿಮೆ ಮಾಡಿಸಿದ ನಂತರ ಏನು ಮಾಡಬೇಕು?ರೈತರಿಗೆ ಗೊತ್ತಿರಬೇಕಾದ ಮಾಹಿತಿ ಇಲ್ಲಿದೆ.ಕೇವಲ ಬೆಳೆ ವಿಮೆ ಮಾಡಿಸುವುದರಿಂದ ಬೆಳೆ ವಿಮೆ ಹಣ ಜಮಾ ಆಗುವುದಿಲ್ಲ.ಬೆಳೆ ವಿಮೆ ಮಾಡಿಸಿದ ರೈತರು ಏನು ಮಾಡಬೇಕು ಎಂಬುದನ್ನು ತಿಳಿಯೋಣ.

ಬೆಳೆ ವಿಮೆ ಮಾಡಿಸಿದ ರೈತರು ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ಯಾವ ಬೆಳೆ ವಿಮಾ ಕಂಪನಿಗೆ ವಿಮೆ ಮಾಡಿಸಿದ್ದಾರೋ ಆ ಕಂಪನಿಗೆ 72 ಗಂಟೆಯೊಳಗೆ ವಿಮಾ ಕಂಪನಿಯ ಸಿಬ್ಬಂದಿಗೆ ಕರೆ ಮಾಡಬೇಕು, ಆ ಕಂಪನಿಯ ಸಿಬ್ಬಂದಿ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸುತ್ತಾರೆ.ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂಬುದನ್ನು ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತಾರೆ. ಮೇಲಾಧಿಕಾರಿಗಳು ಕೆಲವು ದಿನಗಳ ನಂತರ ರೈತರ ಖಾತೆಗೆ ಬೆಳೆ ವಿಮೆ ಹಣವನ್ನು ಜಮಾ ಮಾಡುತ್ತಾರೆ

ರೈತರು ಬೆಳೆ ವಿಮೆ ಮಾಡಿಸುತ್ತಾರೆ ಆದರೆ ಯಾವ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸುತ್ತಾರೋ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ.ಅಂತಹ ರೈತರು http://www.samrakshane.karnataka. gov ಲಿಂಕ್ ಮೇಲೆ ಕ್ಲಿಕ್ ಮಾಡುವುದರಿಂದ ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿ ಇದೆ ಎಂಬ ಪಟ್ಟಿ ಸಿಗುತ್ತದೆ. ಆ ಪಟ್ಟಿಯ ಮೂಲಕ ನೀವು ಯಾವ ಬೆಳೆ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ ಎಂಬುದು ಗೊತ್ತಾಗುತ್ತದೆ.ಬೆಳೆ ಹಾನಿ ಮಾಹಿತಿ ಪಡೆಯಲು ಜಿಲ್ಲೆಯ ಬೆಳೆ ವಿಮಾ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 18001801551 ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

ಕೇವಲ ಬೆಳೆ ವಿಮೆ ಮಾಡಿಸಿದ ನಂತರ ಹಣ ಜಮೆಯಾಗುವುದಿಲ್ಲ .ಹಿಂಗಾರು ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ವಿಮಾ ಕಂತು ಕಟ್ಟಿದ ಮಾತ್ರಕ್ಕೆ ಹಣ ಜಮಾ ಆಗುವುದಿಲ್ಲ. ಬೆಳೆ ವಿಮೆ ಮಾಡಿಸಿದ ನಂತರ ರೈತರು ಬೆಳೆಯ ಪ್ರಕೃತಿ ವಿಕೋಪದಿಂದ ಅಂದರೆ ಅತಿವೃಷ್ಟಿ, ಅನಾವೃಷ್ಟಿ, ಅಲಿಕಲ್ಲು, ಭೂಕುಸಿತ, ಪ್ರವಾಹವಾದಲ್ಲಿ ಬೆಳೆ ಮುಳುಗಡೆ ಆದಲ್ಲಿ ನಷ್ಟಕ್ಕೆ ಅನುಗುಣವಾಗಿ ಬೆಳೆ ವಿಮಾ ಕಂಪನಿ ಪರಿಹಾರವನ್ನು ನೀಡುತ್ತದೆ.

ಬೆಳೆ ಕಟಾವಿನ ನಂತರ ಜಮೀನಲ್ಲಿ ಬೆಳೆ ಒಣಗಲು ಬಿಟ್ಟ ಸಮಯದಲ್ಲಿ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದರೆ ಪ್ರಕೃತಿಕನುಗುಣವಾಗಿ ನಷ್ಟ ಪರಿಹಾರ ಹಣವನ್ನು ನೀಡಲಾಗುತ್ತದೆ.ರೈತರು ಬೆಳೆ ವಿಮೆ ಮಾಡಿಸಿದ ನಂತರ ಹಿಂಗಾರು ಬೆಳೆ ಸಮೀಕ್ಷೆ app ನಲ್ಲಿ ಮಾಹಿತಿಯನ್ನ ಅಪ್ಲೋಡ್ ಮಾಡಬೇಕು.ಒಂದು ವೇಳೆ ಮೊಬೈಲ್ ನಲ್ಲಿ ಅಪ್ಲೋಡ್ ಮಾಡಲು ಸಮಸ್ಯೆಯಾಗಿದ್ದಾರೆ, ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿಸಬಹುದು.

ಈ ಬೆಳೆ ವಿಮೆಯನ್ನು ಎಲ್ಲಿ ಮಾಡಿಸುವುದೆಂದರೆ’ ಪ್ರಧಾನ್ ಮಂತ್ರಿ ಫಸಲ್ ಭೀಮ ಯೋಜನೆ ‘ ಅಡಿಯಲ್ಲಿ ಹಿಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ.ಬೆಳೆ ಸಾಲ ಪಡೆಯದ ರೈತರು’ ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆ’

ಅಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕುಗಳಲ್ಲಾಗಲಿ ಅಥವಾ ಗ್ರಾಮಾ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ಅರ್ಜಿಯೊಂದಿಗೆ ಜಮೀನು ಹೊಂದಿದ ಪಹಣಿಯನ್ನು ನೀಡಬೇಕು. ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ನೀಡಬೇಕು.ಅರ್ಜಿಯೊಂದಿಗೆ ಯಾವ ಬೆಳೆಗೆ ವಿಮೆ ಮಾಡಿಸಿದ್ದೋರೋ ವಿಮೆ ಕಂಪನಿಗೆ ನೀವು ಬೆಳೆ ವಿಮಾ ಕಂತನ್ನು ಕಟ್ಟಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ ನ ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *