ಪ್ರೀಯ ರೈತರೇ ಸರ್ಕಾರವು ಮತ್ತೋಂದು ಹೊಸ ಹೆಜ್ಜೆ ಇಟ್ಟಿದೆ. ಇಂಧನ ಇಲಾಖೆಯಿಂದ ಗುಡ್ ನ್ಯೂಸ್ ನೀಡಿದೆ. ರೈತರಿಗೆ ಇದೊಂದು ಒಳ್ಳೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೂ ರೈತರಿಗೆ ಉಚಿತ ಮೀಟರ್ ಅಳವಡಿಕೆ ಸರ್ಕಾರವು ನಿರ್ಧರಿಸಿದೆ. 116 ಕೋಟಿ ರೂ. ವೆಚ್ಚದ ಯೋಜನೆಯಡಿ ಸಿಂಗಲ್ ಫೇಸ್ ಡಿಜಿಟಲ್‌ ಮೀಟರ್‌ಗೆ ತೆರಿಗೆ ವೈರಿಂಗ್ ಮತ್ತು ಅಳವಡಿಕೆ ಮಾಡಲು ಸರ್ಕಾರವು ನಿರ್ಧರಿಸಿದೆ. ಅದೇ ರೀತಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ 1,497 ರೂ.ನಿಂದ 1,507 ರೂ.ವರೆಗೆ ಹಾಗೂ 3 ಫೇಸ್ ಮೀಟರ್‌ಗೆ 3,612 ರೂ.ನಿಂದ 3,652 ರೂ.ವರೆಗೆ ತಗಲುವ ವೆಚ್ಚವನ್ನು ಬೆಸ್ಕಾಂ ಭರಿಸಲಿದೆ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದರು. ಸರ್ಕಾರವು ಇದರ ಸಂಪೂರ್ಣ ಜವಾಬ್ದಾರಿ ಪಡೆದುಕೊಂಡಿದೆ.

ಅದರಂತೆ ಇಲ್ಲಿ ನೀವು ಗಮನಿಸಿರಬಹುದು ಏನೆಂದರೆ ಉತ್ತರ ವೃತ್ತ 61,333 ಪಶ್ಚಿಮ ವೃತ್ತ 1,10,909 , ದಕ್ಷಿಣ ವೃತ್ತ 2,095 ಪೂರ್ವ ವೃತ್ತದ ವ್ಯಾಪ್ತಿಯ ಗ್ರಾಹಕರಿಗೆ 1,11,604 ಒಟ್ಟು 2,85,941 ಮಾಪನ ಅಳವಡಿಸಲಾಗಿದೆ. ಸರ್ಕಾರವು ಸರ್ವೆ ಮಾಡಿ ಸಾರ್ವಜನಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಉತ್ತರದಲ್ಲಿ ಕಾರ್ಯ ಪೂರ್ಣಗೊಂಡಿದ್ದು ದಕ್ಷಿಣ ವೃತ್ತದಲ್ಲಿ ಇನ್ನೂ ಆರಂಭವಾಗಿಲ್ಲ. ಇವುಗಳನ್ನು ಅಳವಡಿಸಲು ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದ್ದಾರೆ. ಇದರ ಖರ್ಚು ಸರ್ಕಾರವು ಭರಿಸಲಿದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುತ್ತಿದೆ.

ಮುಖ್ಯವಾಗಿ ಹೇಳಬೇಕೆಂದರೆ ಸದ್ಯದಲ್ಲಿ ಪ್ರತಿನಿತ್ಯ ಸರಾಸರಿ 3,500 ರಿಂದ 3,800 ಅಳವಡಿಸಲಾಗುತ್ತಿದೆ. ಈಗ ಸಿಂಗಲ್ ಫೇಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದ್ದು , ತ್ರೀ ಫೇಸ್ ಮೀಟರ್‌ ಅಳವಡಿಕೆ ಕಾರ್ಯವನ್ನು ಶೀಘ್ರದಲ್ಲೇ ಕೈಗೆತ್ತಿಗೊಳ್ಳಲಾಗುವುದು. ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಪ್ರದೇಶ ವಲಯಗಳಲ್ಲಿ ಉಚಿತ ಡಿಜಿಟಲ್ ಮೀಟರ್‌ ಸರ್ಕಾರಕ್ಕೆ 116 ಕೋಟಿ ರೂ. ಅನುಮತಿ ನೀಡಿದೆ. ಅದರಂತೆ ಈಗಾಗಲೇ ರಾಜ್ಯದಲ್ಲಿ ಅದರಂತೆ ಬೆಂಗಳೂರು ಪ್ರದೇಶದಲ್ಲಿ ಡಿಜಿಟಲ್ ಮೀಟರ್‌ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು , ಈವರೆಗೆ ಲಕ್ಷ ಮೀಟರ್ ಅಳವಡಿಸಲಾಗಿದೆ. ಅಂದಾಜು 9 ಲಕ್ಷ ಡಿಜಿಟಲ್ ಮೀಟರ್‌ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ಶುರುವಾಗಿದೆ . 2024 ರ ವೇಳೆಗೆ ಎಲೆಕ್ಟ್ ಮೆಕಾನಿಕಲ್ ಮೀಟರ್‌ಗಳನ್ನು ಡಿಜಿಟಲ್‌ ಮೀಟರ್‌ಗೆ ಬದಲಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರವು ಇದರ ಸಂಪೂರ್ಣ ಜವಾಬ್ದಾರಿ ಪಡೆದುಕೊಂಡಿದೆ. ಹಾಗೂ ಇದರ ಖರ್ಚು ಸರ್ಕಾರವು ಭರಿಸಲಿದ್ದು ಸಾರ್ವಜನಿಕರಿಗೆ ಆರ್ಥಿಕ ಉತ್ತೇಜನ ನೀಡಲು ಸಹಾಯವಾಗುತ್ತದೆ ಹಾಗೂ ಸಾರ್ವಜನಿಕರಿಗೆ ಇದೊಂದು ಒಳ್ಳೆಯ ಬೆಳವಣಿಗೆಗೆ ದಾರಿಯಾಗಿದೆ. ಈಗಾಗಲೇ 116ಕೋಟಿ ಬಿಡುಗಡೆ ಆಗಿದ್ದು ಇನ್ನೂ ಸಹ ಹೆಚ್ಚಿನ ಆದ್ಯತೆ ನೀಡಿ ಬೇಗನೆ ಕೆಲಸವನ್ನು ಸಂಪೂರ್ಣ ಮಾಡುತ್ತೇವೆ ಎಂದು ಸರ್ಕಾರವು ತಿಳಿಸಿದೆ.

ಅಧಿಕೃತ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *