ಮುಖ್ಯವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ಸರ್ಕಾರವು ಹಲವು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ರಾಜ್ಯದ ರೈತರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಲು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈಗ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬ್ಯಾಂಕುಗಳು ಅವರ ಆಸ್ತಿ ಜಪ್ತಿ ಮಾಡುವುದು ಅಥವಾ ನೋಟಿಸ್ ನೀಡುವುದನ್ನು ನಿಷೇಧಿಸಲು ಸರಕಾರ ನಿರ್ಧರಿಸಿದೆ. ಇದು ಒಂದು ಸರ್ಕಾರದ ಮಹತ್ವಾಕಾಂಕ್ಷಿ ನಡೆಯಾಗಿದೆ. ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗದಂತೆ ತಡೆಯಲು ಈ ಕಾರ್ಯಕ್ಕೆ ಮುಂದಾಗಿದೆ. ರೈತರು ಸಂಕಷ್ಟದಲ್ಲಿರುವಾಗ ಬ್ಯಾಂಕ್‌ಗಳು ಆಸ್ತಿ ಪಾಸ್ತಿ ಜಪ್ತಿ ಮಾಡುವುದು ನೋಟಿಸ್ ಜಾರಿಗೊಳಿಸಿ ಕಿರುಕುಳ ನೀಡುವ ಕೆಲಸ ಮಾಡುತ್ತಿವೆ. ಇದಕ್ಕೆ ಅಂತ್ಯ ಹಾಡಲು ಕಾನೂನಿಗೆ ತಿದ್ದುಪಡಿ ತಂದು ಅವರ ಆಸ್ತಿ – ಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಅದೇ ರೀತಿ ಇನ್ನೋಂದು ಬದಲಾವಣೆ ಎಂದರೆ ಈ ಕಾನೂನು ಜೊತೆಗೆ ಜತೆಗೆ ಸಾಲದ ಪ್ರಮಾಣವನ್ನು 8 ರಿಂದ 10 ಲಕ್ಷ ರೂ.ಗೆ ಹೆಚ್ಚಿಸುವ ಸಂಬಂಧ ಈಗಾಗಲೇ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) 3 ಚರ್ಚಿಸಿರುವುದಾಗಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ನಡೆದ ಕೃಷಿಮೇಳದಲ್ಲಿ ಮಾತನಾಡಿದ ಅವರು ಅತಿವೃಷ್ಟಿ , ಅನಾವೃಷ್ಟಿ ಸೇರಿ ಇನ್ನಿತರ ಕಾರಣಕ್ಕೆ ಬೆಳೆ ನಷ್ಟವಾಗಿ ರೈತರು ಮಾಡಿದ ಮರುಪಾವತಿ ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗಳು ಸಾಲ ವಸೂಲಿಗಾಗಿ ರೈತರ ಆಸ್ತಿ ಆಸ್ತಿ ಮಾಡುತ್ತದೆ ಇದರ ಬದಲಿಗೆ ಸಾಲ ಮರುಪಾವತಿಗೆ ಸಮಯ ನೀಡುವಂತೆ ಕಾನೂನು ತರಲಾಗುವುದು ಈ ಕುರಿತು ಕಾನೂನು ಜಾರಿಗೆ ತರಲು ಸರ್ಕಾರವು ಮುಂದಾಗಿದೆ. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದೆ.
ರಾಜ್ಯದಲ್ಲಿ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಸಹಾಯ ಮಾಡಲು ಮುಂದಾಗಿದ್ದು ಅದೇ ರೀತಿ ಕಾನೂನಿನಲ್ಲಿ ಆ ಎಲ್ಲ ಸಹಕಾರ ಬ್ಯಾಂಕ್ ಗಳಿಗೂ ಅಸ್ತಿ ಜಪ್ತಿ ಮಾಡದಂತೆ ಸೂಚಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ರೈತರು ಹೆಚ್ಚಿನ ಆದ್ಯತೆ ನೀಡುತ್ತಿದ್ದು ಜನಸಂಖ್ಯೆ ಏರಕೆಯಿಂದ ಸಣ್ಣ ಹಿಡುವಳೆದಾರರೇ ಹೆಚ್ಚಾಗಿದ್ದಾರೆ, ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಆದಾಯ ಕುಸಿಯುತ್ತಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಕೃಷಿ ಹಾಗೂ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಚೇತರಿಕೆ ನೀಡಲು ಪಿಎಂ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ಸಾವಿರ ರೂ. ರಾಜ್ಯದಿಂದ 4 ಸಾವಿರ ರೂ . ಸೇರಿ ವಾರ್ಷಿಕ 10 ಸಾವಿರ ನೆರವು ನೀಡುತ್ತಿದೆ ಎಂದರು .
ಇನ್ನು ಬಹುತೇಕ ರೈತರು 2 ರಿಂದ 3 ಹೆಕ್ಟೇರ್ ಭೂಮಿ ಹೊಂದಿದ್ದು , ಅವರಿಗೆ ಬ್ಯಾಂಕ್‌ಗಳಿಂದ 40 ರಿಂದ 60 ಸಾವಿರ ರೂ. ಸಾಲ ದೊರೆಯುತ್ತದೆ . ಇಷ್ಟು ಹಣ ದಲ್ಲಿ ಕೃಷಿ ಸಾಧ್ಯವಿಲ್ಲ . ಹೀಗಾಗಿ ಬ್ಯಾಂಕ್ ಗಳು ಸಾಲದ ಅಥವಾ ಆರ್ಥಿಕ ನೆರವಿನ ಪ್ರಮಾಣವನ್ನು 8-10 ಲಕ್ಷ ರೂ . ವರೆಗೆ ಹೆಚ್ಚಿಸಬೇಕು . ಈ ಬಗ್ಗೆ ನಬಾರ್ಡ್‌ನ ತಜ್ಞರ ಜತೆ ಚರ್ಚಿಸಲಾಗಿದೆ ಎಂದರು.
ರಾಜ್ಯದ ಮಕ್ಕಳು ಹಣದ ಕೊರತೆಯಿಂದ ಓದು ನಿಲ್ಲಿಸಬಾರದು ಅವರ ಭವಿಷ್ಯ ಉಜ್ವಲವಾಗಿ ನಿರ್ಮಾಣವಾಗಲಿ ಎಂದು ಈ ಕೆಲಸ ಮಾಡಲಾಗಿದ್ದು ನೀರಾವರಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. 3 ಲಕ್ಷ ದವರೆಗೆ ಬಡ್ಡಿರಹಿತ ಸಾಲ ನೀಡಿದರೂ ಅತಿವೃಷ್ಟಿ ಅನಾವೃಷ್ಟಿ ಕಾರಣದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದು ಈ ವರ್ಷ ಉತ್ತಮ ಮಳೆಯಾಗಿದೆ. ಕೆರೆ ಕಟ್ಟೆ ತುಂಬಿ ನೀರು ಇನ್ನು 2-3 ವರ್ಷಗಳಿಗೆ ತೊಂದರೆ ಇಲ್ಲ. ಕೆಲವೆಡೆ ಪ್ರವಾಹವಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.