ಪ್ರಿಯ ರೈತರೇ, ಕೇಂದ್ರ ಸರ್ಕಾರವು ಹಿಂಗಾರಿ ಬೆಳೆಗಳಿಗೆ ರಸಗೊಬ್ಬರ ಸಬ್ಸಿಡಿ ಹೆಚ್ಚಿಸಿದೆ.

ಫಾಸ್ಪಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ವಿವಿಧ ಪೋಷಕಾಂಶಗಳಾದ ಸಾರಜನಕ(ಎನ್), ರಂಜಕ(ಪಿ), ಪೊಟ್ಯಾಷ್(ಕೆ), ಸಲ್ಪರ್(ಎಸ್) ಪೊಟ್ಯಾಷ್(ಪಿ)ಗೆ ಪ್ರತಿ ಕಿಲೋಗ್ರಾಂ ದರದಲ್ಲಿ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ಒದಗಿಸುವ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.

ಕೇಂದ್ರ ಸಚಿವ ಸಂಪುಟ ಸಭೆಯು 2022ರ ಹಿಂಗಾರು ಹಂಗಾಮಿಗೆ ಅಂದರೆ 2022 ಅಕ್ಟೋಬರ್ 01ರಿಂದ 2023 ಮಾರ್ಚ್ 31ರ ವರೆಗೆ ಅನ್ವಯವಾಗುವಂತೆ, ರಸಗೊಬ್ಬರಗಳ ಪೋಷಕಾಂಶ ಆಧರಿತ ಸಬ್ಸಿಡಿ ಮೊತ್ತ 51,875 ಕೋಟಿ ರೂ. ಒದಗಿಸಲು ಅನುಮೋದನೆ ನೀಡಿದೆ. ದೇಶೀಯ ರಸಗೊಬ್ಬರ ಕಾರ್ಖಾನೆಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರವು, ಸರಕು ಸಬ್ಸಿಡಿ ಮೂಲಕ ಈ ಸಹಾಯಧನ ಒದಗಿಸುತ್ತಿದೆ.

2022-23ರ ಹಿಂಗಾರು ಹಂಗಾಮಿನಲ್ಲಿ ದೇಶದ ರೈತರಿಗೆ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಸಬ್ಸಿಡಿ ಹಾಗೂ ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಲು ಇದು ಸಹಕಾರಿಯಾಗಲಿದೆ.

ಕೇಂದ್ರ ಸರ್ಕಾರವು ರಸಗೊಬ್ಬರ ತಯಾರಕರು, ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಯೂರಿಯಾ ಮತ್ತು ಪಿ&ಕೆ ರಸಗೊಬ್ಬರಗಳ 25 ಶ್ರೇಣಿಗಳು ರೈತರಿಗೆ ಲಭ್ಯವಾಗುವಂತೆ ಮಾಡುತ್ತಿದೆ. ಪಿ ಅಂಡ್ ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಪೋಷಕಾಂಶ ಆಧರಿತ ಸಬ್ಸಿಡಿ(ಎನ್ ಬಿ ಎಸ್) ಯೋಜನೆ ಮೂಲಕ ರೈತಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೇಂದ್ರ ಸರ್ಕಾರವು ಕೈಗೆಟಕುವ ಬೆಲೆಗೆ ರೈತರಿಗೆ ಪಿ&ಕೆ ರಸಗೊಬ್ಬರಗಳ ದೊರೆಯುವಂತೆ ಮಾಡುತ್ತಿದೆ.

ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್ ಮತ್ತಿತರ ರಸಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆ ಏರಿಳಿತದಿಂದ ರೈತರಿಗೆ ಆಗುವ ಹಣಕಾಸಿನ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು, ಡಿಎಪಿ ಸೇರಿದಂತೆ ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವ ಮೂಲಕ ರೈತರಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅನುಮೋದಿತ ದರಗಳ ಪ್ರಕಾರ, ದೇಶೀಯ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಬಿಡುಗಡೆ ಮಾಡಲಾಗುವುದು ಇದರಿಂದ ಅವರು ರೈತರಿಗೆ ಕೈಗೆಟುಕುವ ಬೆಲೆಗೆ ರಸಗೊಬ್ಬರ ಲಭ್ಯವಾಗುವಂತೆ ಮಾಡುತ್ತಾರೆ.

2022-23ರ ಹಿಂಗಾರು ಸಬ್ಸಿಡಿ: ರೂಪಾಯಿಗಳಲ್ಲಿ.

ಸಾರಜನಕ(ಎನ್)- ₹98.02

ರಂಜಕ(ಪಿ)-₹ 66.93

ಪೊಟ್ಯಾಷ್(ಕೆ)- ₹23.65

ಸಲ್ಫರ್(ಎಸ್)- ₹6.12

ರೈತರು ಈ ಬಹುಮುಖ್ಯ ಮಾಹಿತಿಯ ಉಪಯೋಗವನ್ನು ಪಡೆದುಕೊಂಡು ಈ ಹಿಂಗಾರಿ ಬೆಳೆಗಳ ರಸಗೊಬ್ಬರಗಳಿಗೆ ಇರುವ ಸಬ್ಸಿಡಿ ಲಾಭವನ್ನು ಪಡೆದುಕೊಲ್ಲಬೇಕು. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಕೃಷಿಯಲ್ಲಿ ಅಭಿವೃದ್ಧಿ ಹೊಂದಿಲು ಸಹಾಯವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ…

Leave a Reply

Your email address will not be published. Required fields are marked *