ರಾಜ್ಯದ ರೈತ ಬಾಂಧವರಿಗೆ ನಮಸ್ಕಾರ.ಇವತ್ತು ನಿಮಗೆ ಮತ್ತೊಂದು ಪ್ರಮುಖವಾದ ಮಾಹಿತಿ ಸಿಗಲಿದೆ.ಬೆಳೆ ವಿಮೆ ಮೊತ್ತ ಜಮವಾಗಿದೆ.2021 ಮತ್ತು 2022 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಿದ ರೈತರ ಬ್ಯಾಂಕ್ ಖಾತೆಗೆ ಹಣ ಬೆಳೆ ವಿಮೆ ಮೊತ್ತ ಜಮವಾಗಿದ್ದು ಜಿಲ್ಲಾಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.ಇದು ರೈತರಿಗೆ ಸಿಹಿಸುದ್ದಿಯಾಗಿದೆ. ಹಾಗಾದರೆ ಯಾವ ಜಿಲ್ಲೆಗೆ ಎಷ್ಟು ರೈತರ ಬ್ಯಾಂಕ್ ಖಾತೆಗೆ ಹಣ ಜಮವಾಗಿದೆ ಎಂಬ ಮಾಹಿತಿಯನ್ನು ನೋಡೋಣ.
ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಿದ ಕಲಬುರ್ಗಿ ಜಿಲ್ಲೆಯ ರೈತರಿಗೆ ವಿಮಾ ಮೊತ್ತ ಜಮವಾಗಿದೆ.2021-22 ನೇ ಸಾಲಿನ ವಿಮೆಗಾಗಿ ನೋಂದಣಿ ಮಾಡಿಸಿದ್ದಾರೆ.2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪಿಎಂ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಮಾಡಿಸಿದ 79277 ರೈತರ ಪೈಕಿ ಬೆಳೆ ಹಾನಿಯಾದ 28848 ರೈತರಿಗೆ ಸ್ಥಳೀಯ ನಿರ್ಧಿಷ್ಟ ವಿಕೋಪದಡಿ 31,84,41,769 ರೂಪಾಯಿ ಪರಿಹಾರ ಪಾವತಿಸಲಾಗಿದೆ. ಇದಲ್ಲದೆ ಬೆಳೆ ಕಟಾವು ಪ್ರಯೋಗದ ಆಧಾರದ ಮೇರೆಗೆ 21,679 ರೈತರಿಗೆ 22,81,19,854 ರೂಪಾಯಿ ಪಾವತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಿಮೆ ಮಾಡಿಸಿದ್ದು ವಿಮೆ ಪರಿಹಾರಕ್ಕೆ ಕಾತುರದಿಂದ ಕಾಯುತ್ತಿದ್ದು ಇದೀಗ ರೈತರಿಗೆ ವಿಮೆ ಪರಿಹಾರ ಜಮವಾಗಿದೆ.ಇದರ ಜೊತೆಗೆ ಮುಂಗಾರು ಹಂಗಾಮಿನ ಪರಿಹಾರ ಹಣವನ್ನು ಎಷ್ಟು ಹೆಕ್ಟರ ಗೇ ನಿಮಗೆ ಎಷ್ಟು ಹಣವನ್ನು ಕೊಡಲಾಗಿದೆ ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಫೋನ್ ಮುಖಂತರವೆ ನೋಡಿಕೊಳ್ಳಬಹುದಾಗಿದೆ. “https://www.samrakshane.karnataka.gov.in/” ವೆಬ್ ಸೈಟ್ ಮೂಲಕ ನೀವು ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
2020-21 ನೇ ಸಾಲಿನ ಕಲಬುರಗಿ ಜಿಲ್ಲೆಯ ಹಾಗೂ ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಿಗೆ ಬೆಳೆ ವಿಮೆ ಹಣ ಜಮೆಯಾಗಿದೆ.ಈಗಾಗಲೇ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ಕಲಬುರಗಿ ಹಾಗೂ ಚಿತ್ರದುರ್ಗ ಜಿಲ್ಲೆಯ ರೈತರ ಖಾತೆಗೂ ಹಣ ಜಮೆಯಾಗಿದೆ.
ಒಟ್ಟಿನಲ್ಲಿ 2021-22 ನೇ ಸಾಲಿನ ಬಾಕಿ ಇರುವ ಪರಿಹಾರ ಮೊತ್ತ ಈಗ ರೈತರ ಖಾತೆಗೆ ಜಮವಾಗುತ್ತಿದೆ.ಇದರ ಜೊತೆಗೆ ಈ ಸಾಲಿನ ಬೆಳೆ ಹಾನಿ ಮೊತ್ತ ಅತೀ ಶೀಘ್ರದಲ್ಲಿ ರೈತರ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ. ಇದೆ ಡಿಸೆಂಬರ್ ಒಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮವಾಗುವ ಮಾಹಿತಿಯನ್ನು ಬಿ ಸಿ ಪಾಟೀಲ್ ಅವರು ತಿಳಿಸಿದ್ದಾರೆ.ಈ ಬಾರೀ ಅತೀ ಹೆಚ್ಚಿನ ರೈತರು ಪಸಲು ಭಿಮಾ ಯೋಜನೆಯನ್ನು ನೋಂದಣಿ ಮಾಡಿಕೊಂಡಿದ್ದಾರೆ. ಬೆಳೆ ಹಾನಿಯಾದಲ್ಲಿ ನೀವು ವಿಮಾ ಕಚೇರಿಗಳಿಗೆ ಅಥವಾ ವಿಮಾ ಸಹಾಯವಾಣಿ ಕಚೇರಿಗಳಿಗೆ ಕರೆ ಮಾಡಬೇಕಾಗುತ್ತದೆ. ಇದರ ಜೊತೆಗೆ ವಿಮಾ ಪ್ರತಿನಿಧಿಗಳು ಇದರ ಸಮೀಕ್ಷೆಯನ್ನು ನಡಿಸಿ ರೈತರಿಗೆ ಪರಿಹಾರ ಹಣವನ್ನು ಒದಗಿಸುವ ಕೆಲಸವನ್ನು ಮಾಡುತ್ತಾರೆ.