ಪ್ರೀಯ ರೈತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದ್ದು, ಈ ಬಾರಿ ಕೆಲವು ರೈತರ ಖಾತೆಗೆ ರೂ.2,000 ಬದಲಿಗೆ 4000ರೂ.ಗಳನ್ನು ಜಮಾ ಮಾಡಲಾಗುತ್ತದೆ. ಯಾವ ರೈತರಿಗೆ ಈ 2,000ರೂ. ಬದಲಿಗೆ 4000ರೂ.ಗಳನ್ನು ಜಮಾ ಮಾಡಲಾಗುತ್ತದೆ ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಹಲವು ರೈತರ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಎಲ್ಲಾ ರೈತರ ಖಾತೆಗೆ ಈ ಸಮ್ಮಾನ್ ನಿಧಿಯ ಹಣ ಜಮಾ ಮಾಡಲಾಗುತ್ತದೆ. ಆದರೆ ಕೆಲವರು ರೈತರ ಖಾತೆಗೆ ರೂ.2,000 ಬದಲಿಗೆ 4,000 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ.

ಇದೇ ತಿಂಗಳ ಅಕ್ಟೋಬರ್ 24 ನೇ ತಾರೀಕಿನೊಳಗೆ ಎಲ್ಲ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ. ಆದರೆ ಈ ಬಾರಿ ಕೆಲವರು ರೈತರ ಖಾತೆಗೆ 4,000ರೂ.ಗಳನ್ನು ಜಮಾ ಮಾಡಲಾಗುವುದೆಂದು ಕೃಷಿ ಇಲಾಖೆ ತಿಳಿಸಿದೆ.

ಮೇ ತಿಂಗಳ ಕೊನೆಯ ವಾರದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಿನ ರೈತರ ಖಾತೆಗೆ ಜಮಾ ಮಾಡಲಾಗಿರುತ್ತದೆ. ಕೆಲವು ತಾಂತ್ರಿಕ ಕಾರಣಗಳಿಂದ ಹಲವು ರೈತರ ಖಾತೆಗೆ ಈ ಹನ್ನೊಂದನೇ ಕಂತಿನ ಹಣ ಜಮಾ ಆಗಿರುವುದಿಲ್ಲ. ಅಂತಹ ರೈತರನ್ನು ಗುರುತಿಸಿ 11ನೇ ಕಂತಿನ 2,000 ರೂಪಾಯಿ ಮತ್ತು 12ನೇ ಕಂತಿನ 2,000 ರೂಪಾಯಿ ಒಟ್ಟು 4,000 ರೂಪಾಯಿಗಳನ್ನು ಅಂತಹ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

11ನೇ ಕಂತಿನ ಹಣ ಯಾರ ಖಾತೆಗೆ ಬಂದಿಲ್ಲವೋ ಅವರು ಈಗ 11ನೇ ಕಂತಿನ ಹಣ ಮತ್ತು 12ನೇ ಕಂತಿನ ಹಣ ಒಟ್ಟು ಸೇರಿ 2,000 ರೂಪಾಯಿಗಳ ಬದಲಿಗೆ 4,000 ರೂಪಾಯಿಗಳನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಈ ಬಾರಿ Ekyc ಯನ್ನು ಕಡ್ಡಾಯಗೋಳಿಸಿತ್ತು. Ekyc ಮಾಡಿಸಿದ ರೈತರಿಗೆ ಮಾತ್ರ 12 ನೇ ಕಂತಿನ ಹಣ ಅವರ ಖಾತೆಗೆ ಜಮಾ ಮಾಡಲಾಗಿದೆ. ಯಾವುದೊ ತಾಂತ್ರಿಕ ಕಾರಣದಿಂದ ನಿಂತು ಹೋಗಿದ್ದ 11ನೇ ಕಂತಿನ ಹಣ ಹಾಗೂ 12ನೇ ಕಂತಿನ ಹಣ ಒಟ್ಟು ಸೇರಿ 4,000 ರೂಪಾಯಿಗಳನ್ನು ಜಮಾ ಮಾಡಲಾಗುವುದು ಎಂದು ಕೃಷಿ ಇಲಾಖೆಯ ತಿಳಿಸಿದೆ.

ಕೆಲವು ರೈತರಿಗೆ ಅಂದರೆ ಯಾವ ರೈತರಿಗೆ 11ನೇ ಕಂತಿನ ಹಣ ಬಂದಿಲ್ಲವೋ ಅವರ ಸ್ಟೇಟಸ್ ನಲ್ಲಿ “ಪೇಮೆಂಟ್ ಪ್ರೋಸೆಸ್ಸಿಂಗ್” (payment processing) ಎಂಬುದಾಗಿ ತೋರಿಸುತ್ತದೆ. ಅಂತಹ ರೈತರಿಗೆ 11ನೇ ಕಂತಿನ ಬಂದ ಕೆಲವು ದಿನಗಳ ನಂತರ 12ನೇ ಕಂತಿನ ಹಣ ಜಮಾ ಮಾಡಲಾಗುತ್ತದೆ.

ಹೀಗೆ 11ನೇ ಕಂತಿನ ಹಣ ಬರದಿದ್ದ ರೈತರಿಗೆ ಒಟ್ಟು 4,000 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ.

ರೈತರು ಇದರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕನ್ನು ಒತ್ತಿ.. https://pmkisan.gov.in/BeneficiaryStatus.aspx

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *