ದೇಶದಲ್ಲಿ ದಿನದಿಂದ ದಿನಕ್ಕೆ ಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಹೌದು ದೇಶದಲ್ಲಿ ಅಕಾಲಿಕವಾಗಿ ಮಳೆಯಾಗುತ್ತಿರುವುದು ಕಾರಣ ದೇಶದಲ್ಲಿ ಜನರು ಬಳಕೆ ಮಾಡುವ ಕೆಲವು ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ.

ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ಸೇರಿದಂತೆ ಜನರು ಪ್ರತಿನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯತ್ತ ಮುಖವನ್ನ ಮಾಡುತ್ತಿದ್ದು ವಸ್ತುಗಳ ಬೆಲೆ ಏರಿಕೆ ಜನರ ಜೇಬಿಗೆ ಕತ್ತರಿಯನ್ನ ಹಾಕುತ್ತಿದೆ.

ರುಚಿಕರವಾದ ಅಡುಗೆಯನ್ನ ಮಾಡಲು ಬಳಸುವ ಅಗತ್ಯ ತರಕಾರಿಗಳಲ್ಲಿ ಈರುಳ್ಳಿ ಕೂಡ ಒಂದಾಗಿದೆ. ಒಂದು ಬಹುತೇಕ ಎಲ್ಲಾ ಅಡುಗೆಯನ್ನ ಮಾಡಲು ಜನರು ಹೆಚ್ಚಾಗಿ ಈರುಳ್ಳಿಯನ್ನ ಬಳಸುತ್ತಾರೆ. ಹೇಗೆ ಈರುಳ್ಳಿ ಕತ್ತರಿಸುವ ಸಮಯದಲ್ಲಿ ಜನರ ಕಣ್ಣಲ್ಲಿ ನೀರು ಬರುತ್ತದೆಯೋ ಅದೇ ರೀತಿಯಲ್ಲಿ ಈಗ ಈರುಳ್ಳಿ ಬೆಲೆ ಜನರ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತಿದೆ.

ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದರ ಜೊತೆಗೆ ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ. 20 ರೂಪಾಯಿ ಇದ್ದ ಈರುಳ್ಳಿ ಬೆಲೆಯಲ್ಲಿ ಈಗ 35 ರೂಪಾಯಿಯ ಗಡಿಯನ್ನ ದಾಟಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗುವ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ.

ಒಂದೇ ದಿನದಲ್ಲಿ 10 ರೂಪಾಯಿ ಏರಿಕೆ ಆಯಿತು ಈರುಳ್ಳಿಯ ಬೆಲೆ.

ನಿನ್ನೆ 25 ರೂಪಾಯಿ ಗಡಿಯಲ್ಲಿ ಇದ್ದ ಪ್ರತಿ ಕೆಜಿ ಈರುಳ್ಳಿ ಇಂದು 10 ರೂಪಾಯಿ ಏರಿಕೆಯನ್ನ ಕಾಣುವುದರ ಮೂಲಕ 35 ರೂಪಾಯಿ ಆಗಿದ್ದು ಇದು ಹೋಟೆಲ್ ಮಾಲೀಕರ ಜೇಬಿಗೆ ಮತ್ತು ಹೆಚ್ಚು ಈರುಳ್ಳಿ ಬಳಸುವ ಜನರ ಬೇಸರಕ್ಕೆ ಕಾರಣವಾಗಿದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *