ಪ್ರಿಯ ರೈತರೇ, ಕಡಿಮೆ ಆದಾಯವನ್ನು ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿದ್ದಿ ಬಂದಿದೆ. ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ನೀವು ಖರೀದಿ ಮಾಡುವ ಟ್ರ್ಯಾಕ್ಟರ್ ಗೆ ಸುಮಾರು 50ರಷ್ಟು ಸಬ್ಸಿಡಿಯನ್ನು ನೀಡಲಿದೆ. ಹಾಗಾದರೆ ಈ ಯೋಜನೆಯಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡುವುದು ಹೇಗೆ ಮತ್ತು ಇದರಲ್ಲಿ ಎಷ್ಟು ಸಬ್ಸಿಡಿ ಸಿಗುತ್ತದೆ ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಭಾರತವು ಒಂದು ಕೃಷಿ ಪ್ರಧಾನ ದೇಶವಾಗಿದೆ. ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಈಗಿನ ಕಾಲದಲ್ಲಿ ಕೃಷಿಯಲ್ಲಿ ಟ್ರ್ಯಾಕ್ಟರ್ ನ ಅವಶ್ಯಕತೆ ತುಂಬಾ ಇದೆ. ಹೆಚ್ಚು ಆದಾಯ ಹೊಂದಿರುವ ರೈತರು ಸುಲಭವಾಗಿ ಟ್ರ್ಯಾಕ್ಟರ್ ಗಳನ್ನು ಖರೀದಿಸಬಹುದು. ಕಡಿಮೆ ಆದಾಯ ಹೊಂದಿರುವ ರೈತರು ಟ್ರ್ಯಾಕ್ಟರ್ ಗಳನ್ನು ಖರೀದಿಸುವಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ.

ಇಂತಹ ರೈತರಿಗಾಗಿ ಕೇಂದ್ರ ಸರ್ಕಾರವು “ಪಿಎಂ ಕಿಸಾನ್ ಟ್ರ್ಯಾಕ್ಟರ್” ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಶೇಕಡ 50ರಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು. ಅಂದರೆ ಒಟ್ಟು ಮೊತ್ತದಲ್ಲಿ ಸುಮಾರು ಅರ್ಧದಷ್ಟು ಮೊತ್ತವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು.

ಹಾಗಾದರೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಇರಬೇಕಾದ ಅರ್ಹತೆಗಳನ್ನು ನೋಡುವುದಾದರೆ,

• ಕಳೆದ ಏಳು ವರ್ಷಗಳಲ್ಲಿ ಯಾವುದೇ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಿರಬಾರದು.

•ರೈತರು ತಮ್ಮ ಹೆಸರಿನಲ್ಲಿ ಜಮೀನನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

• ಒಬ್ಬ ರೈತ ಒಮ್ಮೆಮಾತ್ರ ಈ ಟ್ರಾಕ್ಟರ್ ಖರೀದಿಸಲು ಸಬ್ಸಿಡಿಯನ್ನು ಪಡೆಯಬಹುದು.

• ರೈತ ಖರೀದಿಸುವ ಟ್ಯಾಕ್ಟರ್ ಅನ್ನು ಬೇರೆ ಯಾವುದೇ ಟ್ರ್ಯಾಕ್ಟರ್ ಸಬ್ಸಿಡಿಯಿಂದ ಖರೀದಿಸಿರಬಾರದು.

• ಒಂದು ಕುಟುಂಬದಿಂದ ಒಬ್ಬ ವ್ಯಕ್ತಿ ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಈ ಮೇಲೆ ಹೇಳಿದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ನೋಡುವುದಾದರೆ,

• ಆಧಾರ್ ಕಾರ್ಡ್

• ಜಮೀನಿನ ದಾಖಲಾತಿಗಳು

• ಅರ್ಜಿದಾರರ ಗುರುತಿನ ಚೀಟಿ ಅಂದರೆ

* ವೋಟರ್ ಐಡಿ

* ಪ್ಯಾನ್ ಕಾರ್ಡ್

* ಪಾಸ್ ಪೋರ್ಟ್

* ವಾಹನ ಚಾಲನಾ ಪರವಾಗಿ

ಇವುಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕು.

• ಪಾಸ್ ಪುಸ್ತಕದ ಪ್ರತಿ

• ಪಾಸ್ ಪೋರ್ಟ್ ಸೈಜ್ ಫೋಟೋ

• ಮೊಬೈಲ್ ಸಂಖ್ಯೆ

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನೋಡುವುದಾದರೆ,

• ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ದೇಶಾದ್ಯಂತ ಜಾರಿಯಲ್ಲಿರುವ ಯೋಜನೆಯಾಗಿದ್ದು, ಈಗಾಗಲೇ ಹಲವಾರು ರಾಜ್ಯಗಳು ಈ ಯೋಜನೆಯನ್ನು ಜಾರಿಗೆ ತಂದಿವೆ.

• ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ರೈತರು ನಿಮ್ಮ ಹತ್ತಿರದ “ಕಾಮನ್ ಸರ್ವಿಸ್ ಸೆಂಟರ್” ಅಂದರೆ “ಸಾಮಾನ್ಯ ಗ್ರಾಹಕ ಸೇವಾ ಕೇಂದ್ರ” ಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅಥವಾ ಆಫ್ ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು ಈ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಎಲ್ಲ ರೈತರು ಈ ಮೇಲೆ ಹೇಳಿದ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆ ಲಾಭವನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *