ಪ್ರಿಯ ರೈತ ಭಾಂದವರೇ, ಈಗಿನ ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ರೈತರು ಸಾಂಪ್ರದಾಯಿಕ ಬೆಳೆಗಳಲ್ಲಿ ಹೆಚ್ಚು ನಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರು ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವ ಪದ್ದತಿಯನ್ನು ಕೈ ಬಿಟ್ಟು ಲಾಭದಾಯಕ ಕೃಷಿ ಪದ್ಧತಿ ಅನುಸರಿಸುವುದು ಉತ್ತಮ.

ಅಂತಹ ಪದ್ಧತಿಗಳಲ್ಲಿ ಈ ಚೆಂಡು ಹೂ ಬೆಳೆಯೂ ಒಂದು.

ಚೆಂಡು ಹೂವಿನ ಬೆಳೆಯು ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಮತ್ತು ಬೆಲೆ ಇರುವ ಉತ್ಪನ್ನವಾಗಿದೆ.

ರೈತರು ವರ್ಷಕ್ಕೆ ಎರಡು ಬಾರಿ ಚೆಂಡು ಹೂವಿನ ಬೆಳೆಯನ್ನು ಬೆಳೆದು ಲಕ್ಷಾಂತರ ರೂಪಾಯಿ ಲಾಭ ಕಂಡುಕೊಳ್ಳುಬಹುದು.

ನರ್ಸರಿಯಲ್ಲಿ ಒಂದು ಗಿಡಕ್ಕೆ 3ರಂತೆ 9,000 ಸಸಿಗಳನ್ನು ತಂದು, ಭೂಮಿ ಹದ ಮಾಡಿ ನಾಟಿ ಮಾಡಬಹುದು. ಅದಕ್ಕಾಗಿ ರೈತರಿಗೆ ಆಗುವ ಖರ್ಚು ಸುಮಾರು 40,000 ರೂಪಾಯಿಗಳು.

ಸಾಮಾನ್ಯವಾಗಿ ಅಂದಾಜು 60 ರಿಂದ 80 ದಿನಗಳಲ್ಲಿ ಚಂಡು ಹೂ ಕಟಾವಿಗೆ ಬರುತ್ತದೆ.

2 ಅಡಿ ಎತ್ತರದ ಆರೆಂಜ್ ತಳಿಯ ಒಂದು ಗಿಡದಲ್ಲಿ ಸಾಮಾನ್ಯವಾಗಿ 2 ಕೆ.ಜಿ.ಯಷ್ಟು ಹೂವು ಸಿಗುತ್ತದೆ.

ಉಳಿದ ಬೆಳೆಗಳಿಗೆ ಹೋಲಿಸಿದರೆ ಈ ಚೆಂಡು ಹೂವು ಬೆಳೆಯ ಉತ್ಪಾದನಾ ವೆಚ್ಚ ತುಂಬಾ ಕಡಿಮೆ.

ರೈತರು ಸಾಮಾನ್ಯಾವಾಗಿ ಜಿನ್ ಫ್ಲವರ್, ಯೂನೋ ಫ್ಲವರ್, ವೀವ-666 ಎಂಬ ಔಷಧಗಳನ್ನು ಹೆಚ್ಚಿನ ಇಳುವರಿ ಪಡೆಯಲು ಬಳಸುತ್ತಾರೆ.

ರೈತರು ಮುಕ್ಕಾಲು ಅಥವಾ ಒಂದು ಎಕರೆಯಲ್ಲಿ 15 ರಿಂದ 18 ಕ್ವಿಂಟಲ್ ವರೆಗೆ ಇಳುವರಿಯನ್ನು ಪಡೆಯಬಹುದು. ರೈತರು ಈ ಚೆಂಡು ಬೆಳೆ ಕಡಿಮೆ ಸಮಯದ್ದಾಗಿರುವುದರಿಂದ ಕೇವಲ 60 ರಿಂದ 80 ದಿನಗಳಲ್ಲಿ ಇಳುವರಿಯನ್ನು ಪಡೆಯಬಹುದು. ರೈತರು ಇದರಿಂದ ಉಳಿದ ದಿನಗಳಲ್ಲಿ 1 ಎಕರೆಯಿಂದ ಅಂದಾಜು 2 ಲಕ್ಷ ರೂಪಾಯಿಗಳವರೆಗೆ ಲಾಭವನ್ನು ಪಡೆಯಬಹುದು. ಇನ್ನು ಹಬ್ಬ ಮತ್ತು ಸಮಾರಭಂದ ದಿನಗಳಲ್ಲಿ ಚೆಂಡು ಹೂವಿನ ಬೆಲೆ ಗಗನಕ್ಕೆರಿರುತ್ತದೆ. ರೈತರು ಈ ಬೆಳೆಯನ್ನು ಬೆಳೆಯುವುದರಿಂದ ಯಾವುದೇ ರೀತಿಯ ನಷ್ಟ ಅನುಭವಿಸಲಾರರು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇವತ್ತಿನ ಮಾರುಕಟ್ಟೆಯಲ್ಲಿ 1 ಕೆ.ಜಿ.ಗೆ ಸರಿಸುಮಾರು 100 ರೂಪಾಯಿಯಂತೆ ಹೂವು ಮಾಟವಾಗುತ್ತದೆ. ದಲ್ಲಾಳಿಗಳು ಅಥವಾ ಮಾರಾಟಗಾರರು ಚೆಂಡು ಹೂವು ಬೆಳೆದಂತಹ ರೈತರ ಹತ್ತಿರ ಕಡಿಮೆ ಬೆಲೆಗೆ ಕೊಂಡು ಹೆಚ್ಚಿನ ದರಕ್ಕೆ ಜನಸಾಮಾನ್ಯರಿಗೆ ಮಾರಾಟ ಮಾಡುತ್ತಾರೆ.

ರೈತರು ಎಕರೆ ಲೆಕ್ಕದಲ್ಲಿ ಹೂ ಮಾರಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು.

ಸಾಮಾನ್ಯವಾಗಿ ಸ್ಥಳೀಯವಾಗಿ ಸಿಗುವ ಚೆಂಡು ಹೂವಿನ ಸಸಿಗಳು ಹೆಚ್ಚಿನ ಗುಣಮಟ್ಟವನ್ನು ಹೊಂದಿರುವುದಿಲ್ಲ. ತಮಿಳುನಾಡಿನಿಂದ ವಿಭಿನ್ನ ತಳಿಯ ಸಸಿಗಳು ಹೆಚ್ಚಿನ ಗುಣಮಟ್ಟವನ್ನು ಹೊಂದಿರುತ್ತವೆ. ಅಂತಹ ಹೂಗಳು ದಪ್ಪವಾಗಿ ಇರುವುದಲ್ಲದೇ, ರೋಗ ಬಾಧೆ ತೀರಾ ಕಡಿಮೆ ಮತ್ತು ನಿರ್ವಹಣೆ ವೆಚ್ಚ, ಕೆಲಸ ಕೂಡಾ ಕಡಿಮೆ. ಒಮ್ಮೆ ಕಟಾವು ಮಾಡಿದ ಹೂವು ಸುಮಾರು ನಾಲ್ಕು ದಿವಸದವರೆಗೆ ಹಾಗೇ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *