ಪ್ರೀಯ ರೈತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಮೊಬೈಲ್ ನಿಂದ ಬೆನಿಫಿಸಿಯರಿ (beneficiary) ಸ್ಟೇಟಸ್ ಚೆಕ್ ಮಾಡುವ ಆಯ್ಕೆಯನ್ನು ಮತ್ತೊಮ್ಮೆ ನೀಡಲಾಗಿದೆ. ಕೇವಲ ಮೊಬೈಲ್ ನಂಬರ್ ನಿಂದ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ನೋಡುವ ಆಯ್ಕೆಯನ್ನು ಈ ಮೊದಲು ತೆಗೆದು ಹಾಕಲಾಗಿತ್ತು. ಆದರೆ ಈಗ ಮತ್ತೊಮ್ಮೆ ಈ ಆಯ್ಕೆಯನ್ನು ಸೇರಿಸಲಾಗಿದೆ.
ರೈತರಿಗೆ ವಾರ್ಷಿಕವಾಗಿ 6000 ರೂ. ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 12 ನೇ ಕಂತಿನ ಮೊತ್ತವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ್ದು, ನಮ್ಮ ಕರ್ನಾಟಕ ರಾಜ್ಯದ ಒಟ್ಟು 50.36 ಲಕ್ಷ ರೈತರು ಒಟ್ಟು 1007.26 ಕೋಟಿ ಸಹಾಯಧನವನ್ನು ನೇರ ನಗದು ಪಾವತಿ ಮೂಲಕ ಪಡೆದುಕೊಳ್ಳಲಿದ್ದಾರೆ.
ಮುಖ್ಯವಾಗಿ ಹೇಳಬೇಕೆಂದರೆ ಪಿಎಂ ಕಿಸಾನ್ ಯೋಜನೆ ಹಣವು ಈಗಾಗಲೇ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕೆಲವರಿಗೆ ಅನರ್ಹರು ಸಹ ಹಣ ಪಡೆದು ಕೊಂಡಿದ್ದಾರೆ. ಅದಕ್ಕೆ ನಿಮ್ಮ ಖಾತೆಗೆ ಹಣಬಂದಿದೆ ಎಂದು ತಿಳಿಯುವುದು ಮುಖ್ಯ ಅವಶ್ಯಕ ಆಗಿದೆ.
ಫಲಾನುಭವಿಗಳು ಅಥವಾ ರೈತರು ಕೇವಲ ತಮ್ಮ ಮೊಬೈಲ್ ನಂಬರ್ ಅನ್ನು ಉಪಯೋಗಿಸಿಕೊಂಡು ಪಿಎಂ ಕಿಸಾನ್ ಹಣ ಅವರ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
ಈಗ ನಾವು ಕೇವಲ ಮೊಬೈಲ್ ನಂಬರನ್ನು ಬಳಸಿಕೊಂಡು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆಯೋ ಇಲ್ಲವ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ವಿವರವವನ್ನು ತಿಳಿದುಕೊಳ್ಳೋಣ.
• ಮೊದಲಿಗೆ ಫಲಾನುಭವಿಗಳು ಪಿಎಂ ಕಿಸಾನ್ https://www.pmkisan.gov.in/ ಸಮ್ಮಾನ್ ನಿಧಿ ಎಂಬ ವೆಬ್ಸೈಟ್ ತೆರೆಯಬೇಕಾಗುತ್ತದೆ.
ಆ ಮುಖಪುಟದಲ್ಲಿ ನೀವು ಕೆಳಗಡೆ ಬಂದಾಗ ನಿಮಗೆ ಅಲ್ಲಿ ಬೆನಿಫಿಶಿಯರಿ ಸ್ಟೇಟಸ್ (beneficiary status) (https://pmkisan.gov.in/BeneficiaryStatus.aspx)
ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
ನಿಮಗಿಲ್ಲಿ ಚೆಕ್ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗುತ್ತದೆ.
• ಮೊಬೈಲ್ ನಂಬರ್
• ರಿಜಿಸ್ಟ್ರೇಷನ್ ನಂಬರ
ಇವೆರಡವುಗಳಿಂದ ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಅದರಲ್ಲಿ ನೀವು “ಮೊಬೈಲ್ ನಂಬರ್” ಇಂದ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಕೇಳಲಾಗುವ ಕ್ಯಾಪ್ಚ ನಮೂದಿಸಿ “ವಿವರವನ್ನು ಪಡೆಯಿರಿ” (get details) ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.
ಇದಾದ ನಂತರ ನಿಮಗೆ ಅಲ್ಲಿ,
• ನಿಮಗೆ ಎಷ್ಟು ಕಂತುಗಳ ಹಣ ಬಂದಿದೆ.
• ಇನ್ನು ಎಷ್ಟು ಕಂತುಗಳ ಹಣ ಬರುವುದು ಬಾಕಿ ಇದೆ.
• ಪಿಎಂ ಕಿಸಾನ್ ಫಲಾನುಭವಿಯ ಹೆಸರು.
• ಅವರ ಬ್ಯಾಂಕ್ ಖಾತೆ ಮತ್ತು ಅಕೌಂಟ್ ನಂಬರ್.
ಮುಂತಾದವುಗಳ ಸಂಪೂರ್ಣ ವಿವರವನ್ನು ಅಲ್ಲಿ ನೀಡಲಾಗುತ್ತದೆ.
ಫಲಾನುಭವಿಗಳು ಅಥವಾ ರೈತರು ತಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಕೇವಲ ಮೊಬೈಲ್ ನಂಬರ್ ಬಳಸಿಕೊಂಡು ಈ ರೀತಿ ಚೆಕ್ ಮಾಡಿಕೊಳ್ಳಬಹುದು.
ಕೇವಲ ಮೊಬೈಲ್ ನಂಬರ್ ಅನ್ನು ಬಳಸಿಕೊಂಡು ನೀವು ಈ ಮೊದಲು ನಿಮಗೆ ಎಷ್ಟು ಕಂತು ಬಂದಿದೆ ಮತ್ತು ಎಷ್ಟು ಕಂತು ಬರುವುದು ಬಾಕಿ ಇದೆ. ಇವೆಲ್ಲವುಗಳ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ
ವೆಬ್ಸೈಟ್ನ ಸಂಪರ್ಕದಲ್ಲಿರಿ..