ಪ್ರಿಯ ರೈತರೇ, ಯಶಸ್ವಿನಿ ಯೋಜನೆಯಿಂದ ವ್ಯಕ್ತಿಗೆ 5 ಲಕ್ಷ ರೂಪಾಯಿಗಳ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಹೆಸರು ಯಶಸ್ವಿನಿ ಕಾರ್ಡ್ ಅಥವಾ ಯಶಸ್ವಿನಿ ಯೋಜನೆ.
ಕೆಲವು ದಿನಗಳ ಹಿಂದೆ ಈ ಯಶಸ್ವಿನಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ ಈ ಯಶಸ್ವಿನಿ ಯೋಜನೆಯನ್ನು ಮರು ಪ್ರಾರಂಭಿಸುವ ನಿರ್ಣಯವನ್ನು ಕೈಗೊಂಡಿದೆ. ಅದೇ ರೀತಿಯಾಗಿ ಈಗಾಗಲೇ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ.
ಈ ಯೋಜನೆಯ ವಿಶೇಷತೆಗಳೇನು?ಮತ್ತು ಈ ಯೋಜನೆಯಿಂದ 5 ಲಕ್ಷಗಳನ್ನು ಒಂದು ಕುಟುಂಬದಿಂದ ನಾಲ್ಕು ಜನ ಸದಸ್ಯರು ಹೇಗೆ ಪಡೆದುಕೊಳ್ಳಬಹುದು? ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಮೊದಲನೆಯದಾಗಿ ಈ ಯೋಜನೆಯನ್ನು ರೈತರಿಗೋಸ್ಕರ ಜಾರಿಗೆ ತರಲಾಗಿದೆ. ಯಾರ ಹತ್ತಿರ ಜಮೀನು ಇದೆ, ಅಥವಾ ಯಾವ ರೈತರು ಜಮೀನನ್ನು ಹೊಂದಿದ್ದಾರೋ ಅಂತಹ ರೈತರು ನಿಮಗೆ ಹತ್ತಿರದ ಅಥವಾ ನಿಮಗೆ ಸಂಬಂಧಪಟ್ಟ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ಸಹಕಾರ ಸಂಘಗಳಲ್ಲಿ ನೀವು ಯಶಸ್ವಿನಿ ಕಾರ್ಡನ್ನು ಮಾಡಿಸಿಕೊಳ್ಳಬಹುದು.
# ಗ್ರಾಮೀಣ ಪ್ರದೇಶದಲ್ಲಿರುವ ರೈತರಿಗೆ ಒಂದು ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಲು ತಗಲುವ ವೆಚ್ಚ 500 ರೂಪಾಯಿಗಳು.
# ನಗರ ಪ್ರದೇಶದಲ್ಲಿ ರೈತರು 1,000 ರೂಪಾಯಿಯನ್ನು ಪಾವತಿಸಿ ಈ ಯಶಸ್ವಿನಿ ಕಾರ್ಡನ್ನು ಮಾಡಿಸಿಕೊಳ್ಳಬಹುದು.
ರೈತರು ಈ ಕಾರ್ಡನ್ನು ಬಳಸಿಕೊಂಡು ಸುಮಾರು ಐದು ಲಕ್ಷ ರುಪಾಯಿಗಳವರೆಗೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚವಾಗಿ ಬಳಸಿಕೊಳ್ಳಬಹುದು.
ಕೆಲವು ದಿನಗಳ ಹಿಂದೆ ಈ ಯಶಸ್ವಿ ಯೋಜನೆಯನ್ನು ತೆಗೆದುಹಾಕಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ ಈ ಯೋಜನೆಯನ್ನು ಮತ್ತೆ ಪುನರಾರಂಭಿಸಿದೆ.
ರೈತರು ತಮಗೆ ಹತ್ತಿರದ ಅಥವಾ ತಮಗೆ ಸಂಬಂಧಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಅಥವಾ ಸಹಕಾರಿ ಬ್ಯಾಂಕ್, ಅಲ್ಲಿ ಹೋಗಿ ಈ ಯೋಜನೆ ಲಾಭವನ್ನು ಪಡೆದುಕೊಳ್ಳಬೇಕು.
ಈ ಯೋಜನೆಯಲ್ಲಿ ನೀವು ಒಂದು ಕುಟುಂಬದಿಂದ ನಾಲ್ಕು ಜನ ಸದಸ್ಯರ ಹೆಸರಿನಲ್ಲಿ ಈ ಕಾಡನ್ನು ಮಾಡಿಸಿಕೊಳ್ಳಬಹುದು.
ಈ ಯೋಜನೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ರೈತರು ತಮಗೆ ಸಂಬಂಧಪಟ್ಟ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಸಂಪರ್ಕಿಸಿರಿ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ
ವೆಬ್ಸೈಟ್ ನ ಸಂಪರ್ಕದಲ್ಲಿರಿ..