ರೈತ ಬಾಂಧವರಿಗೆ ಸಂತಸದ ಸುದ್ದಿ. ಕೃಷಿ ಮೇಳದಂತೆ ಡಿಸೆಂಬರ್ ತಿಂಗಳಲ್ಲಿ ತೋಟಗಾರಿಕೆ ಮೇಳವೂ ಹಮ್ಮಿಕೊಳ್ಳಲಾಗುತ್ತಿದೆ. ಹೌದು ಡಿಸೆಂಬರ್ ತಿಂಗಳಲ್ಲಿ 23,24 ಮತ್ತು 25 ರಂದು ಮೂರು ದಿನಗಳ ಕಾಲ ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ ತೋಟಗಾರಿಕಾ ಮೇಳ ಹಮ್ಮಿಕೊಳ್ಳಲಾಗಿದೆ.

ತೋಟಗಾರಿಕೆ ವಿಶ್ವವಿದ್ಯಾಲಯ ಗಳಿಂದ ಬಿಡುಗಡೆಗೊಂಡ ಬೀಜಗಳು,ಸಸ್ಯ ಪರಿಕರಗಳು, ಸೂಕ್ಷ್ಮಾಣು ಜೀವಿಯ ಉತ್ಪಾದನೆಗಳು, ಮಾರಾಟ ಶ್ರೇಷ್ಠ ತೋಟಗಾರಿಕೆ ರೈತ/ ರೈತ ಮಹಿಳೆ ಪ್ರಶಸ್ತಿ ಮತ್ತು ಗೌರವ ಧನ ವಿತರಣೆ,ಸನ್ಮಾನ ಮತ್ತು ಇತರ ರೈತರೊಂದಿಗೆ ಯಶೋಧಗಾಥೆಗಳ ವಿನಿಮಯ.

ತೋಟಗಾರಿಕೆ ಮೇಳ ನಡೆಯುವ ದಿನಾಂಕ್:

ಡಿಸೆಂಬರ್ 23,24,25 ಬಾಗಲಕೋಟ ದಲ್ಲಿ ಬ್ರಹತ್ ತೋಟಗಾರಿಕೆ ಮೇಳ

ತೋಟಗಾರಿಕೆ ಮೇಳ ನಡೆಯುವ ಸ್ಥಳ: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ,ನವನಗರ,ಬಾಗಲಕೋಟೆ-587 104

ಮೇಳದ ವಿಶೇಷತೆಗಳು:

ಮೇಳದಲ್ಲಿ ಲಾಭದಾಯಕ ಪದ್ದತಿ, ಜಲ ವಿಜ್ಞಾನ ತೋಟಗಳ, ಮೀನುಗಾರಿಕೆ ಅಕ್ವೇರಿಯಂ ಮತ್ತು ಮುಧೋಳ ಶ್ವಾನ ತಳಿಗಳ ಪ್ರಾತ್ಯಕ್ಷಿಕೆ, ತೋವಿವಿಯ ಬಿಡುಗಡೆಗೊಳಿಸಿದ ಮತ್ತು ಅಭಿವೃದ್ದಿಪಡಿಸಿದ ಹಣ್ಣು, ತರಕಾರಿ, ಹೂ, ತೋಟಪಟ್ಟಿ, ಮಸಾಲೆ, ಔಷಧೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದರ್ಶನ, ರೈತರಿಗೆ ಸಲಹೆ ಮತ್ತು ತಾಂತ್ರಿಕ ಮಾಹಿತಿ ತಂತ್ರಜ್ಞಾನ, ತೋವಿವಿಯಿಂದ ಉತ್ಪಾದನೆಗೊಂಡ ಬೀಜಗಳು, ಸಸ್ಯ ಪರಿಕರಗಳು, ಸೂಕ್ಷ್ಮಾಣು ಜೀವಿಗಳ ಉತ್ಪಾದನೆಗಳ ಮಾರಾಟ ಹಾಗೂ ರೈತರ ಯಶೋಗಾಥೆಗಳ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರದರ್ಶನಗಳು:

ತೋಟಗಾರಿಕೆಯ ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ವಸ್ತು ಪ್ರದರ್ಶನವನ್ನು ಸಂಘಟಿಸುತ್ತದೆ. ಅಲ್ಲದೆ, ಗೋವಾದಲ್ಲಿ ಆಯೋಜಿತಗೊಂಡ ಕೊಂಕಣ ಶಿವಮೊಗ್ಗ ಮತ್ತು ನವದೆಹಲಿಯ ಪುಸಾ ಕೃಷಿ ಮೇಳಗಳಲ್ಲಿ ತೋವಿವಿಯು ಭಾಗವಹಿಸುತ್ತದೆ. ಇಂತಹ ಬೃಹತ್ ಮೇಳಗಳಲ್ಲಿ ತೋಟಗರಿಕೆ ವಿವಿಯ ತೋಟಗಾರಿಕೆ ತಂತ್ರಜ್ಞಾನಗಳ ಪ್ರಕಟಣೆಗಳು ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

ತೋಟಗಾರಿಕೆ ಮೇಳದಲ್ಲಿ ಸುಸ್ಥಿರ ಕೃಷಿಯ ಪ್ರಾತ್ಯಕ್ಷಿಕೆಗಳು ಪ್ರದರ್ಶಿತಗೊಂಡಿರುತ್ತವೆ. ಮೇಳದ ಮೂರು ದಿನಗಳಲ್ಲಿ ರೈತರು ಹಲವಾರು ಸಂವಾದಗಳಲ್ಲಿ ಪಾಲ್ಗೊಳ್ಳುತ್ತಾರೆ. ಮಾಹಿತ ಕೇಂದ್ರವು ಹಲವಾರು ರೈತರ ಕೃಷಿ ಸಮಸ್ಯೆಗಳನ್ನು ಬಗೆ ಹರಿಸುವ ಕೇಂದ್ರವಾಗಿರುತ್ತದೆ. ಶ್ರೇಷ್ಠ ತೋಟಗಾರಿಕೆ ಪ್ರಶಸ್ತಿಯನ್ನು ಪ್ರತಿ ಜಿಲ್ಲೆಯಿಂದ ಆಯ್ಕೆಯಾದ ರೈತರಿಗೆಪ್ರತಿ ವರ್ಷವೂ ಕೊಡಮಾಡುತ್ತಲಿದೆ. ಇದು 5000/- ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ.

ಹಣ್ಣು, ತರಕಾರಿ ಪ್ರದರ್ಶನ

ತೋಟಗಾರಿಕಾ ವಿವಿಯ ವಿಸ್ತರಣಾ ನಿರ್ದೇಶನಾಲಯದ ತರಬೇತಿ ಕೊಠಡಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಕಳೆದ ವರ್ಷ್ ಕೋವಿಡ್-19 ಹಿನ್ನೆಲೆಯಲ್ಲಿ ಈ ಮೇಳವನ್ನ ಆನ್‍ಲೈನ್ ಮತ್ತು ಆಫ್ಲೈನ್ ಎರಡು ಕ್ರಮಗಳ ಮೂಲಕ ವಿಶೇಷವಾಗಿ ಹಂಬಿಕೊಳ್ಳಲಾಗಿತ್ತು ಮೂರು ದಿನಗಳ ಕಾಲ ನಡೆಯುವ ಈ ತೋಟಗಾರಿಕೆ ಮೇಳದಲ್ಲಿ ಸೀಮಿತ ಪ್ರಮಾಣದಲ್ಲಿ ರೈತರನ್ನು ಆಹ್ವಾನಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *