ಪ್ರಿಯ ರೈತರೇ, ರಾಜ್ಯದ ರೈತರಿಗೆ ಬೆಳೆ ಹಾನಿ ಪರಿಹಾರ ಹಣಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟೆಡ್ ಮಾಹಿತಿ ಬಂದಿದ್ದು, ಈಗ ಜಿಲ್ಲಾವಾರು ಬೆಳೆ ಹಾನಿ ಪರಿಹಾರದ ಮಾಹಿತಿ ನಿಮಗೆ ಸಿಗಲಿದೆ. ಯಾವ ಯಾವ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ ಆಗಿದೆ? ಎಷ್ಟು ಕೋಟಿ ರೂಪಾಯಿ ಪರಿಹಾರ ಹಣ ಬಿಡುಗಡೆಯಾಗಿದೆ? ಎಂಬುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

2022 ಮತ್ತು 23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಗಿರುವಂತ ಅಧಿಕ ಮಳೆ ಮತ್ತು ಅತಿವೃಷ್ಟಿಯಿಂದ ಉಂಟಾದಂತಹ ಬೆಳೆ ಹಾನಿಗೆ ಜಿಲ್ಲಾವಾರು ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಹಾಗೂ ರಾಜ್ಯ ಸರ್ಕಾರಗಳು NDRF ಮತ್ತು SDRF ನಿಧಿಯಿಂದ ಹಣ ಬಿಡುಗಡೆ ಮಾಡಲಾಗಿದೆ.

2022-23 ನೇ ಸಾಲಿನ ಪ್ರಕೃತಿ ವಿಕೋಪ ಮಾರ್ಗಸೂಚಿ ಅನ್ವಯ ಪರಿಹಾರ ಹಣ ಬಿಡುಗಡೆ ಆಗಿರುತ್ತದೆ. ಕೇಂದ್ರ ಸರ್ಕಾರದಿಂದ ಒಟ್ಟು 664 ಕೋಟಿ ರೂಪಾಯಿಗಳಷ್ಟು ಹಾಗೂ ರಾಜ್ಯ ಸರ್ಕಾರದಿಂದ 224.34 ಕೋಟಿ ರೂಪಾಯಿ ಸೇರಿ ಒಟ್ಟು ರಾಜ್ಯದ ರೈತರಿಗೆ ಬೆಳೆ ಹಾನಿ ಪರಿಹಾರ ಹಣವಾಗಿ ಒಟ್ಟು 885.34 ಕೋಟಿ ರೂಪಾಯಿಗಳಷ್ಟು ಪರಿಹಾರ ಹಣ ಬಿಡುಗಡೆ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

2022 ಮತ್ತು 23ನೇ ಸಾಲಿನಲ್ಲಿ ರಾಜ್ಯದಲ್ಲಿ ಸುರಿದಂತಹ ಭಾರಿ ಮಳೆಯಿಂದ ಮಾನವ ಜೀವಹಾನಿ, ಜಾನುವಾರು ಜೀವಹಾನಿ, ಮನೆ ಹಾನಿ ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದ್ದು ಈ ಒಂದು ಹಾನಿಗಳಿಗೆ ಜಿಲ್ಲಾವಾರು ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ.

ಅದರ ಮಾಹಿತಿ ಈ ರೀತಿ ಇದ್ದು ಇದು ಆಗಸ್ಟ್ ತಿಂಗಳಿನಲ್ಲಿ ಆದಂತಹ ಪ್ರಕೃತಿ ವಿಕೋಪದ ಪರಿಹಾರ ಹಣವಾಗಿದ್ದು ಜಿಲ್ಲಾವಾರು ಎಷ್ಟು ಪರಿಹಾರ ಹಣ ಬಿಡುಗಡೆಯಾಗಿದೆ ಎಂಬುದನ್ನು ನೀವು ಇಲ್ಲಿ ನೋಡಬಹುದು.

ಜಿಲ್ಲೆ ಹಣ(ಕೋಟಿಗಳಲ್ಲಿ)

ಬಳ್ಳಾರಿ 5

ಚಿಕ್ಕಮಗಳೂರು 10

ಚಿತ್ರದುರ್ಗ 5

ದಕ್ಷಿಣ ಕನ್ನಡ 20

ದಾವಣಗೆರೆ 15

ಧಾರವಾಡ 5

ಗದಗ 5

ಹಾಸನ 15

ಹಾವೇರಿ 5

ಕೊಪ್ಪಳ 10

ಶಿವಮೊಗ್ಗ 10

ರಾಯಚೂರು 10

ಮಂಡ್ಯ 10

ತುಮಕೂರು 10

ಉಡುಪಿ 15

ಉತ್ತರ ಕನ್ನಡ 10

ವಿಜಯನಗರ 5

ಮೈಸೂರು 15

ಚಾಮರಾಜನಗರ 5

ಕೋಲಾರ 5

ಚಿಕ್ಕಬಳ್ಳಾಪುರ. 15

ಇದು ಆಗಸ್ಟ್ ತಿಂಗಳಲ್ಲಿ ಉಂಟಾದ ಬೆಳೆ ಹಾನಿ ಪರಿಹಾರದ ಹಣವಾಗಿದೆ. ಈ ರೀತಿ ಜಿಲ್ಲಾವಾರು ಪರಿಹಾರ ಹಣ ಬಿಡುಗಡೆಯಾಗಿತ್ತು. ಈ ಪರಿಹಾರವನ್ನು ಹಣವನ್ನು ಅರ್ಹರಾಗಿರುವ ರೈತರ ಖಾತೆಗೆ ಜಮಾ ಮಾಡಲಾಗಿದೆ ಹಾಗೂ ಇನ್ನೂ ಮಾಡಲಾಗುತ್ತಿದೆ. ನಿಮ್ಮ ಜಿಲ್ಲೆಗೆ ಎಷ್ಟು ಪರಿಹಾರ ಹಣ ಬಿಡುಗಡೆಯಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ

ವೆಬ್ಸೈಟ್ ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *