ಪ್ರಿಯ ರೈತರೇ, ಅಡಕೆ, ಗಾಜು, ಬ್ಯಾಟರಿ, ನೀರು ಶುದ್ದೀಕರಣ ಒಂದಕ್ಕೊಂದು ಸಂಬಂಧ ಇಲ್ಲದಿದ್ದರೂ ತಾಂಬೂಲವಾಗಿ ತಿನ್ನಲು ಬಳಸುವ ಅಡಕೆಯನ್ನು ಬಳಸಿ ಹೊಸ ರೀತಿಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಅಡಕೆಯಿಂದ ಮಾಡಿದ ಗಾಜುಗಳು ಒಡೆಯುವುದಿಲ್ಲ, ಮುರಿಯುವುದಿಲ್ಲ, ಬೆಂಕಿಯಲ್ಲೂ ಕರಗುವುದಿಲ್ಲ, ಸುಲಭವಾಗಿ ರಂಧ್ರ ಮಾಡಬಹುದು. ಸಾಮಾನ್ಯ ಗಾಜಿಗಿಂತ ಬಹಳ ಹಗುರವಾದರೂ ಸದೃಢ. ಹೀಗಾಗಿ ಅಡಕೆ ಗಾಜು ಒಡೆಯದಿರುವ ಕಾರಣ ಕಟ್ಟಡಗಳು, ವಾಹನಗಳಿಗೆ ಮರು ಬಳಕೆ ಮಾಡಬಹುದು. ಸೈನ್ಯದಲ್ಲಿ ಬಳಸಲಾಗುವ ಬುಲೆಟ್ ಪೂಫ್ ಜಾಕೆಟ್ ತಯಾರಿಕೆಗೂ ಬಳಸಬಹುದಾಗಿದೆ.

# ಮುರಿಯದ ಪೈಪ್‌:

ಇದೇ ತಂತ್ರಜ್ಞಾನ ಬಳಸಿ ಮುರಿಯದ ಪೈಪ್‌ ಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಕಟ್ಟಡ, ಭೂಮಿಯೊಳಗೆ ಹುದುಗಿಸಬಹುದಾದ ಮತ್ತು ಈ ಪೈಪ್ ಒಮ್ಮೆ ಅಳವಡಿಸಿದ ಬಳಿಕ ಯಾವುದೇ ಕಾರಣಕ್ಕೂ ಒಡೆಯುವುದಿಲ್ಲ. ಪೈಪ್ ಒಡೆದು ಸೋರಿಕೆಯಾಗುವುದು, ಕಟ್ಟಡಗಳ ಗೋಡೆ ಸೋರುವ ಸಮಸ್ಯೆ ಇರುವುದಿಲ್ಲ.

# ಅಗ್ಗದ ಬ್ಯಾಟರಿ:

ಸಂಪೂರ್ಣ ಅಡಕೆಯಿಂದಲೆ ಅಗ್ಗದ ಬ್ಯಾಟರಿಯನ್ನೂ ತಯಾರಿಸಲಾಗಿದೆ. ಪ್ರಸ್ತುತ ವಾಹನಗಳಲ್ಲಿ ಬಳಸಲಾಗುತ್ತಿರುವ ಬ್ಯಾಟರಿಗಳ ಅರ್ಧಕ್ಕಿಂತ ಕಡಿಮೆ ಬೆಲೆಗೆ ಹೆಚ್ಚು ಸಾಮರ್ಥ್ಯದ ಬ್ಯಾಟರಿ ತಯಾರಿಸಲಾಗಿದೆ. ಇಂಧನಗಳ ಬದಲಿಗೆ ಎಲೆಕ್ಟ್ರಾನಿಕ ವಾಹನಗಳು ಲಗ್ಗೆ ಇಡುತ್ತಿರುವ ಈ ಸಮಯದಲ್ಲಿ ಅಡಕೆ ಬ್ಯಾಟರಿಗಳು ಹೊಸ ಕ್ರಾಂತಿಯಾಗಲಿದೆ. ಅಡಕೆ ಬ್ಯಾಟರಿಗಳು ಅಡಕೆ ಭಾರಿ ಬೇಡಿಕೆಯನ್ನು ತಂದುಕೊಡಲಿದೆ ಎನ್ನುವುದು ಕೇಳಿಬರುತ್ತಿದೆ.

# ಜಲಶುದ್ದಿ:

ಅಡಕೆ ನ್ಯಾನೋ ಪಾರ್ಟಿಕಲ್‌ ನ ಮತ್ತೊಂದು ಬಹುಮುಖ್ಯ ಸಂಶೋಧನೆ ಎಂದರೆ ನೀರು ಶುದ್ಧಿಕಾರಕ, ಟೆಕ್ಸ್‌ಟೈಲ್ಸ್ ಉದ್ಯಮ, ಕೈಗಾರಿಕೆಗಳಲ್ಲಿ ಭಾರಿ ಪ್ರಮಾಣದ ನೀರು ಕಲುಷಿತಗೊಳ್ಳುತ್ತದೆ. ನ್ಯಾನೋ ಪಾರ್ಟಿಕಲ್ ಹಾಕಿದಲ್ಲಿ ನೀರು ಪೂರ್ಣ ಶುದ್ದಿಗೊಳ್ಳುವುದಲ್ಲದೆ ಉದ್ಯಮಗಳಿಗೆ ಮರು ಬಳಕೆ ಮಾಡಬಹುದಾಗಿದೆ. ಆ ಮೂಲಕ ಕೆರೆ, ಹಳ್ಳಿ, ನದಿಗಳ ಕಲುಷಿತೆಯನ್ನು ತಡೆಗಟ್ಟಿಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *