ಪ್ರೀಯ ರೈತರೇ, ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರು ಸೇರಿದಂತೆ ಎಲ್ಲಾ ರೈತ ಬಾಂಧವರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ.
ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಬೆಳೆಗಳ ಬೆಂಬಲ ಬೆಲೆಯನ್ನು ಈಗಾಗಲೇ ಘೋಷಣೆ ಮಾಡಿದ್ದು, ಇದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ರಾಜ್ಯ ಸರ್ಕಾರವು ರೈತರು ಬೆಳೆಯುವ ವಿವಿಧ ಬೆಳೆಗಳ ಹಾಗೂ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಘೋಷಣೆ ಮಾಡಿದ್ದು ರೈತರಿಗೆ ಇದರ ಸದುಪಯೋಗವಾಗಬೇಕಿದೆ
ಕನಿಷ್ಠ ಬೆಂಬಲ ಬೆಲೆ, ಕೃಷಿ ಉತ್ಪಾದಕರಿಗೆ ಕೃಷಿ ಬೆಲೆಗಳಲ್ಲಿ ಯಾವುದೇ ರೀತಿಯ ಕುಸಿತದ ಬೆಲೆಯನ್ನು ತಡೆಯಲು ಭಾರತ ಸರ್ಕಾರದಿಂದ ಮಾರುಕಟ್ಟೆ ಮಧ್ಯಸ್ಥಿಕೆಯೊಂದು ರೂಪವಾಗಿದೆ.
ವೆಚ್ಚಗಳು ಮತ್ತು ಬೆಲೆಗಳ ಆಧಾರದ ಶಿಫಾರಸ್ಸಿನ ಮೇಲೆ ಭಾರತ ಸರ್ಕಾರವು ಕೆಲವು ಬೆಳೆಗಳಿಗೆ ಬಿತ್ತನೆ ಋತುವಿನ ಆರಂಭದಲ್ಲಿ ಕನಿಷ್ಠ ಬೆಲೆಗಳನ್ನು ಘೋಷಿಸುತ್ತದೆ. ಕನಿಷ್ಠ ಬೆಂಬಲ ಬೆಲೆ ಎಂಬುದು ಬಂಪರ್ ಉತ್ಪಾದನಾ ವರ್ಷದಲ್ಲಿ, ಬೆಲೆಯಲ್ಲಿ ಅತಿಯಾದ ಕುಸಿತದ ವಿರುದ್ಧ ಉತ್ಪಾದಕರನ್ನು ಹಾಗೂ ರೈತರನ್ನು ರಕ್ಷಿಸುವ ಭಾರತ ಸರ್ಕಾರದಿಂದ ನಿಗದಿಪಡಿಸಿರುವಂತಹ ಬೆಳೆಯಗಿರುತ್ತದೆ.
ಹೀಗಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಎಂಬುದು ಅತ್ಯಂತ ಸಹಾಯಕಾರಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಇದೀಗ ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು, ರೈತರ ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಯೋಜನೆ ಅಡಿಯಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ. ರೈತರಿಗೆ ಅನ್ಯಾಯ ಆಗದಂತೆ ಕ್ರಮವಹಿಸಿದೆ.
° ಅದೇ ರೀತಿ ಯಾವ ಯಾವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಬೆಲೆಯನ್ನು ಘೋಷಿಸಲಾಗಿದೆ ಎಂಬುದನ್ನು ನೋಡುವುದಾದರೆ,
• ಹೆಸರು – 7,755 ರೂ.
• ಉದ್ದು- 6,600 ರೂ.
• ಭತ್ತ – 2,040 ರೂ.
• ಜೋಳ – 2,990 ರೂ.
• ಸಜ್ಜೆ – 2,350 ರೂ. (ಪ್ರತಿ ಕ್ವಿಂಟಲ್)
• ರಾಗಿ – 3,578 ರೂ.
• ಮೆಕ್ಕೆಜೋಳ – 1,962 ರೂ.
• ತೊಗರಿ – 6,600 ರೂ.
• ಶೇಂಗಾ (ಸಿಪ್ಪೆ ಸಹಿತ) – 5,850 ರೂ.
• ಸೂರ್ಯಕಾಂತಿ – 6,400 ರೂ.
• ಸೋಯಾಬೀನ್ (ಹಳದಿ) – 4,300 ರೂ.
• ಎಳ್ಳು – 7,830 ರೂ.
• ಹುಚ್ಚೆಳ್ಳು – 7,287 ರೂ.
• ಹತ್ತಿ – 6,080 ರೂ.
ಹೀಗೆ ಸರ್ಕಾರವು ಈ ಬೆಳೆಗಳ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು, ರೈತರಿಗೆ ಇದರಿಂದ ಬಹಳ ಅನುಕೂಲವಾಗಲಿದೆ. ಮಾರುಕಟ್ಟೆ ಕುಂಟಿತಗೊಂಡ ಸಮಯದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಅವರ ಸರಕುಗಳನ್ನು ಖರೀದಿ ಮಾಡಿ ರೈತರಿಗೆ ಬೆನ್ನೆಲುಬಾಗಿ ನಿಲ್ಲುವುದೇ ಈ ಯೋಜನೆ ಮುಖ್ಯ ಉದ್ದೇಶ.
ಒಂದು ವೇಳೆ ಬಂಪರ್ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿನ ಕೊರತೆಯಿಂದಾಗಿ ಸರಕುಗಳು ಮಾರುಕಟ್ಟೆ ಬೆಲೆ ಘೋಷಸಿದ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದರೆ ಸರ್ಕಾರಿ ಸಂಸ್ಥೆಗಳು ರೈತರು ನೀಡುವ ಸಂಪೂರ್ಣ ಪ್ರಮಾಣವನ್ನು ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆಗೆ ಸರಕುಗಳನ್ನು ಖರೀದಿಸುತ್ತವೆ.
ಕನಿಷ್ಠ ಬೆಂಬಲ ಬೆಲೆಗಳು ಸರ್ಕಾರದಿಂದ ಅವರ ಉತ್ಪನ್ನಗಳಿಗೆ ಖಾತರಿಪಡಿಸಿದಂತ ಬೆಲೆಯಾಗಿರುತ್ತದೆ. ರೈತರನ್ನು ಸಂಕಷ್ಟದ ಮಾರಾಟದಿಂದ ಬೆಂಬಲಿಸುವುದು ಮತ್ತು ಸಾರ್ವಜನಿಕ ವಿತರಣೆಗಾಗಿ ಆಹಾರ ಧನಗಳನ್ನು ಸಂಗ್ರಹಿಸುವುದು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಉದ್ದೇಶವಾಗಿದೆ.
ಇದಿಷ್ಟು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಯಾವ ಯಾವ ಬೆಳೆಗಳಿಗೆ ಎಷ್ಟೆಷ್ಟು ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ ಎಂಬುದರ ಮಾಹಿತಿಯನ್ನು ತಿಳಿಸಲಾಗಿದೆ. ಆದಷ್ಟು ಎಲ್ಲ ರೈತರು ಈ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿ..