ರಾಜ್ಯದಲ್ಲಿ ಬುಧವಾರ, ಗುರುವಾರ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದ್ದು, ಕರಾವಳಿಯ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ..

ರಾಜ್ಯದ ದಕ್ಷಿಣ, ಉತ್ತರ ಒಳನಾಡಿನಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ.

ಜತೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ.

ಉಳಿದಂತೆ ಕಲಬುರಗಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಇತ್ತ ರಾಜಧಾನಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

• ರೈತರಿಗೆ ಕೃಷಿ ಸಲಹೆಗಳು??

ಈಗಾಗಲೇ ರೈತರು ಹಿಂಗಾರು ಬೆಳೆಗಳು ಬಿತ್ತನೆ ಮಾಡುತ್ತಿದ್ದಾರೆ ಅದರಲ್ಲಿ ಪ್ರಮುಖವಾಗಿ ಕಡಲೆ ಮತ್ತು ಜೋಳ. ಬಿತ್ತನೆ ಮಾಡುತ್ತಿದ್ದರೆ ಬಿಜೋಪಚಾರ ಮಾಡುವುದನ್ನು ಮರೆಯಬಾರದು ಕಡಲೆ ಬೀಜಗಳನ್ನು ಉಪಚಾರ ಅಂದರೆ ಟ್ರೈಕೋ ಡರ್ಮ ಪ್ರತಿ ಕೆಜಿಗೆ ನಾಲ್ಕು ಗ್ರಾಂ ಹಾಕಿ ನಂತರ ಬೀಜಗಳನ್ನು ಬಿತ್ತನೆ ಮಾಡಬೇಕು ಇದರಿಂದಾಗಿ ಕೊಳೆರೋಗವನ್ನು ಮುಂದಿನ ದಿನಗಳಲ್ಲಿ ಬರುತ್ತಿದ್ದರೆ ಅದರ ನಿರ್ವಹಣೆಯನ್ನು ಮಾಡಬಹುದು.

ತೊಗರಿ ಬೆಳೆಯು ಕರ್ನಾಟಕದ ಬಹು ಭಾಗಗಳಲ್ಲಿ ಬೆಳೆಯುತ್ತಾರೆ ಅದಕ್ಕಾಗಿ ಈಗಾಗಲೇ ತೊಗರಿ ಹೂವಿನ ಹಂತಕ್ಕೆ ಬಂದಿದ್ದು, ಈ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಅದಕ್ಕಾಗಿ ನೀವು ಈ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಮೊದಲನೆಯ ಸಿಂಪಡಣೆಗಾಗಿ prophenophos @ 2 ml ಸಿಂಪಡಣೆ ಮಾಡಬೇಕು , ನಂತರ ಹೆಚ್ಚಿನ ಸಂಖ್ಯೆಯಲ್ಲಿ ಹೂಗಳನ್ನು ಬರಲು ನೀವು ಪ್ಲಸ್ ಮ್ಯಾಜಿಕ್ ಎಕರೆಗೆ ನಾಲ್ಕು ಕೆಜಿ ಎರಡು ಬಾರಿ ಸಿಂಪಡಣೆ ಮಾಡಬೇಕು. ಅಥವಾ ನೀವು ಈ ಲೇಟೆಡ್ ಜಿಂಕ್ ಅರ್ಧ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿ.

ಜೋಳವನ್ನು ಬಿತ್ತನೆ ಮಾಡುತ್ತಿದ್ದರೆ, ಬೀಜಗಳನ್ನು ಉಪಚಾರ ಮಾಡಿ ಜೋಳವನ್ನು ಸಾಕಷ್ಟು ಪ್ರಮಾಣದಲ್ಲಿ ಮಳೆಯಾಧಾರಿತವಾಗಿ ಬಿತ್ತನೆ ಮಾಡುವುದರಿಂದ ಕ್ಯಾಲ್ಸಿಯಂ ಕ್ಲೋರೈಡ್ ಸಹಾಯದಿಂದ ಕಾಳು ಹಾರ್ಡನಿಂಗ್ ಮಾಡಬೇಕಾಗುತ್ತದೆ. ಇದರಿಂದಾಗಿ ಬರನಿರೋಧಕತೆಯನ್ನು ಹೆಚ್ಚಿಸಬಹುದು.

ಹತ್ತಿ ಬೆಳೆಗಳಲ್ಲಿ ಎಲೆಗಳು ಕೆಂಪಾಗುವುದು ಹಾಗೂ ಗುಲಾಬಿ ಹುಳುಗಳು ನಿಯಂತ್ರಣ ಮಾಡಲು ಒಳ್ಳೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಇಲ್ಲವಾದರೆ ಹತ್ತಿ ಬೆಳೆಯಲ್ಲಿ ಇಳುವರಿ ತೆಗೆದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಹತ್ತಿ ಕೆಂಪಾಗೋಕೆಯನ್ನು ಕಡಿಮೆಗೊಳಿಸಲು ಮೆಗ್ನೀಷಿಯಂ ಸಲ್ಫೇಟ್ ಹತ್ತು ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಗುಲಾಬಿ ಕೀಟಗಳ ನಿರ್ವಹಣೆಗಾಗಿ lamdacyahalothrin @1ml ಪ್ರತಿ ಲೀಟರ್ ನೀರಿನಲ್ಲಿ ಬಳಸಿ ಸಿಂಪಡಿಸಿ ಇದರಿಂದಾಗಿ ಇದರ ನಿರ್ವಹಣೆಯನ್ನು ಮಾಡಬಹುದು.

ಕೃಷಿ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇👇

ಕೃಷಿಯೊಂದಿಗೆ ಹೈನುಗಾರಿಕೆ ನೀವು ಮಾಡುತ್ತಿದ್ದರೆ ದನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಏಕೆಂದರೆ ಚರ್ಮಗಂಟು ರೋಗ ದೇಶ್ಪಾದ್ಯಂತ ಹರಡುತ್ತಿದ್ದು ಅದಕ್ಕಾಗಿ ತಕ್ಕ ಉಪಚಾರವನ್ನು ಮಾಡಲು ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ. ದನಗಳಿಗೆ ವಿಮೆ ಮಾಡಿಸುವುದನ್ನು ಮರೆಯಬೇಡಿ ಏಕೆಂದರೆ ಚರ್ಮಗಂಟು ರೋಗದಿಂದ ಏನಾದರೂ ಪ್ರಾಣ ಹಾನಿ ಆದರೆ ರಾಜ್ಯ ಸರ್ಕಾರವು ನಿಮಗೆ 20 ರಿಂದ 30 ಸಾವಿರ ಪರಿಹಾರ ಧನವನ್ನು ಘೋಷಣೆ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *