ದಿನದಿಂದ ದಿನಕ್ಕೆ ಕೂಲಿ ಕಾರ್ಮಿಕರ ಕೊರತೆ ಹಾಗೂ ಹೆಚ್ಚಿನ ಕೂಲಿ ದರದಿಂದ ಹೈರಾಣಾಗಿರುವ ರೈತರು ಬಹಳ ಯಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ.
ಇದೀಗ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ಭತ್ತ ಹಾಗೂ ಜೋಳದ ಹೊಲಗಳಿಗೆ ಹುಲ್ಲು ಪೆಂಡಿ ಕಟ್ಟುವ ಯಂತ್ರವೂ ಕಾಲಿಟ್ಟಿದೆ. ಈ ಯಂತ್ರಕ್ಕೆ ವಿಪರೀತ ಬೇಡಿಕೆಯಿದ್ದು, ಹೆಚ್ಚು ಹಣ ಕೊಡುತ್ತೇನೆ ಮೊದಲು ನಮ್ಮ ಹೊಲಕ್ಕೆ ಬನ್ನಿ ಎನ್ನುತ್ತಾ ರೈತರು ನಾಮುಂದು ತಾಮುಂದು ಎಂದು ಕರೆದೊಯ್ಯುತ್ತಿದ್ದಾರೆ. ಈ ಯಂತ್ರದ ಸಹಾಯದಿಂದ ಕೆಲಸವು ಅತಿ ಕಡಿಮೆ ಸಮಯದಲ್ಲಿ ಮುಗಿಯುತ್ತದೆ.
ಈ ಯಂತ್ರ ರೈತರಿಗೆ ವರದಾನವಾಗಿದ್ದು, ಬತ್ತದ ಕೊಯ್ಲು ನಂತರ ಹೊಲದಲ್ಲಿ ಬಿದ್ದಿರುವ ಹುಲ್ಲನ್ನು ಕ್ಷಣ ಮಾತ್ರದಲ್ಲೇ ಹುಲ್ಲಿನ ಪೆಂಡಿ ಅಂದರೆ, ಎಕರೆಗೆ ಸುಮಾರು 50 ರಿಂದ 60 ಪೆಂಡಿ ಕಟ್ಟುತ್ತದೆ. ಒಬ್ಬರೇ ಆರಾಮವಾಗಿ ಪೆಂಡಿಯನ್ನು ಎತ್ತಿಡಬಹುದು.ಗೋವಿನ ಜೋಳದ ರೌದಿ 1 ಎಕರೆಗೆ 8 ರಿಂದ 10 ಪೆಂಡಿ ಆಗುತ್ತದೆ
ಇಬ್ಬರು ರೈತರು ಈ ಹುಲ್ಲಿನ ಪೆಂಡಿಗಳನ್ನು ಟ್ರ್ಯಾಕ್ಟರ್‌ಗೆ ಲೋಡ್ ಹಾಗೂ ಅನ್ ಲೋಡ್ ಮಾಡಿ, ಬಣವೆ ಹಾಕಬಹುದಾಗಿದೆ.
ಅಧಿಕೃತ ಮಾಹಿತಿಗಾಗಿ ಸಂಪರ್ಕಿಸಿರಿ,
ಶ್ರೀ ಬಸವೇಶ್ವರ ಹಾರ್ವೆಸ್ಟರ್& ಬೇಲರ್ ಹಿರೇಹುಲ್ಲಾಳ
ಜಿಲ್ಲೆ : ಹಾವೇರಿ
ತಾಲೂಕು : ಹಾನಗಲ್
ಊರು : ಹಿರೇಹುಲ್ಲಾಳ
ಶ್ರೀ ಸಾಯಿ ಬೇಲರ್
ವೀರನಗೌಡ.ಮ.ಮಾಳಗಿ
ಮೊಬೈಲ್ ಸಂಖ್ಯೆ
ನಾಗನಗೌಡ ಮರಿಗೌಡ್ರ.
ಬತ್ತದ ಹುಲ್ಲು,ರಾಗಿ ಹುಲ್ಲು,ನವಣೆ,ಸಾವಿ ಹುಲ್ಲು ಮತ್ತು ಗೋವಿನ ಜೋಳದ ರವದಿ ಪೆಂಡಿ ಕಟ್ಟುವ ಯಂತ್ರಕ್ಕಾಗಿ ಸಂಪರ್ಕಿಸಿರಿ..