ಪ್ರೀಯ ರೈತರೇ, ದೇಶದ ಕೋಟ್ಯಾಂತರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತ ಬಾಂಧವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಈ ಯೋಜನೆಯ 12ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿರುವ ರೈತರಿಗೆ ಸರ್ಕಾರ ಬಹುಮುಖ್ಯ ಮಾಹಿತಿ ನೀಡಿದೆ.

ಇದನ್ನು ಸ್ವತಃ ಕೇಂದ್ರ ಕೃಷಿ ಸಚಿವರು ಮಾಹಿತಿ ನೀಡಿದ್ದು, ಅನೇಕ ರೈತ ಮಿತ್ರರು ಇಲ್ಲಿಯವರೆಗೂ 12ನೇ ಕಂತಿನ ಹಣ ಅವರ ಖಾತೆಗೆ ಜಮಾ ಆಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿದ್ದರು.

ಕೇಂದ್ರ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ತಮ್ಮ ಟ್ವಿಟರ್ ಖಾತೆ ಮುಖಾಂತರ ಈ 12ನೇ ಕಂತಿನ ಹಣ ಬಿಡುಗಡೆಯಗುವ ದಿನಾಂಕವನ್ನು ಘೋಷಿಸಿದ್ದಾರೆ. ಹಾಗಾದರೆ ಯಾವ ದಿನಾಂಕದಂದು ಈ 12ನೇ ಕಂತನ ಹಣ ರೈತರ ಖಾತೆಗೆ ಜಮಾ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರಾಗಿದ್ದರೆ ಈ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು.

ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ 12ನೇ ಕಂತನ ಹಣದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.

# ಕೇಂದ್ರ ಕೃಷಿ ಸಚಿವರು ನೀಡಿರುವ ಮಾಹಿತಿಯ ಪ್ರಕಾರ ಭಾರತದ ಕೋಟ್ಯಂತರ ರೈತರ ಮಾಹಿತಿ ಪರಿಶೀಲನೆಯು ಇನ್ನೂ ಮುಗಿಯದೇ ಇರುವ ಕಾರಣ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತಿನ ಹಣ ಬಿಡುಗಡೆ ಮಾಡಲು ತಡವಾಗುತ್ತಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ. ರೈತರ ಮಾಹಿತಿಯ ವಿವರಗಳು ಪರಿಶೀಲನೆಯಾದ ನಂತರ ಹಣ ಬಿಡುಗಡೆ ಮಾಡಲಾಗುತ್ತದೆ.

# ಈ ವರ್ಷದ “ಅಕ್ಟೋಬರ್ 16″ನೇ ತಾರೀಖಿನವರೆಗೂ ರೈತರ ಮಾಹಿತಿ ವಿವರಗಳ ಪರಿಶೀಲನೆ ನಡೆಯಲಿದ್ದು, ಇದಾದ ನಂತರ ಮರುದಿನ ಅಂದರೆ “ಅಕ್ಟೋಬರ್ 17” ರಂದು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವರು ತಿಳಿಸಿದ್ದಾರೆ.

# ಈಕೆವೈಸಿ (E-KYC) ಮಾಡಿಸಿದ ರೈತರಿಗೆ ಮಾತ್ರ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನು ಓದಿ :

ಬೆಳೆ ಪರಿಹಾರ ಬರದಿದ್ದರೆ ಈ ಚಿಕ್ಕ ಕೆಲಸ ಮಾಡಿ!

ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತ ಬೋರ್ವೆಲ್!!

ಹಾಗಾಗಿ 12ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಈ ವರ್ಷದ “ಅಕ್ಟೋಬರ್ 17″ನೇ ತಾರೀಕಿನಂದು ಪಿಎಂ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಅಥವಾ ಹಣ ಬಿಡುಗಡೆ ಮಾಡಲಾಗುತ್ತದೆ.

ಇದಿಷ್ಟು 12ನೇ ಕಂತಿನ ಹಣ ಬಿಡುಗಡೆಯ ಮಾಹಿತಿಯಾಗಿದ್ದು, ಯಾರು ಈ 12ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೋ ಅಂತಹ ರೈತರು ಈ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು.

ಅಧಿಕೃತ ಕೃಷಿ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇

https://chat.whatsapp.com/EaIIjMOhBMy7qiof4xCMTo

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *