ಪ್ರೀಯ ರೈತರೇ, ವ್ಯಾಪಾರ ಅಥವಾ ಉದ್ಯಮ ಮಾಡಲು ನೇರ ಸಾಲ ಯೋಜನೆ ಅಡಿಯಲ್ಲಿ 20 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹಾಗಾದರೆ ಈ ನೇರ ಸಾಲ ಸೌಲಭ್ಯವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ? ಅರ್ಜಿಗಳನ್ನು ಸಲ್ಲಿಸುವುದು ಹೇಗೆ? ಮತ್ತು ಅದಕ್ಕೆ ಬೇಕಾದ ದಾಖಲೆಗಳೇನು?ಇವೆಲ್ಲವುಗಳ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಡೆಯಿಂದ ವ್ಯಾಪಾರ ಅಥವಾ ಉದ್ಯೋಗ ಮಾಡಲು ನೇರ ಸಾಲ ಯೋಜನೆಯಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಲ್ಲಿ ಕೇವಲ ಅಲ್ಪಸಂಖ್ಯಾತರು ಅಂದರೆ ಮುಸ್ಲಿಮ್ಸ್, ಬೌದ್ಧರು, ಕ್ರಿಶ್ಚಿಯನ್ನರು, ಜೈನರು, ಸಿಕ್ಕರು ಮತ್ತು ಪಾರ್ಸಿಗಳು.
ಈ ಸಮುದಾಯಗಳ ಅಭ್ಯರ್ಥಿಗಳು ಮಾತ್ರ ಈ ನೇರ ಸಾಲ ಯೋಜನೆ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಈ ನೇರ ಸಾಲ ಯೋಜನೆ ಅಡಿಯಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ 15/11/2022 ಆಗಿರುತ್ತದೆ.
ಫಲಾನುಭವಿಗಳು ಅಂದರೆ ಯಾರು ಈ ಸಾಲ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಾರೋ ಅವರು ತಮ್ಮ ಆಸ್ತಿಯನ್ನು ಅಥವಾ ಆಸ್ತಿಯ ದಾಖಲೆಗಳನ್ನು ಕಡ್ಡಾಯವಾಗಿ ಒತ್ತೆಯಾಗಿ ಇಡಬೇಕಾಗುತ್ತದೆ.
# ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳನ್ನು ನೋಡುವುದಾದರೆ,
• ಕರ್ನಾಟಕ ನಿವಾಸಿ ಆಗಿರಬೇಕು.
• ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು.
• ಅರ್ಜಿದಾರರ ವಯಸ್ಸು 18 ರಿಂದ 55 ರ ಒಳಗೆ ಇರಬೇಕು.
• ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ಕೆಲಸಕ್ಕೆ ಸೇರಿರಬಾರದು.
• ಅರ್ಜಿದಾರರ ಆಸ್ತಿ ಪತ್ರಗಳನ್ನು ಒತ್ತೆಯಾಗಿ ಇಡಬೇಕಾಗುತ್ತದೆ.
• ಆಸ್ತಿಯ ಮೌಲ್ಯವು ನೀವು ಸಾಲ ಪಡೆಯುವ ಮೌಲಕ್ಕಿಂತ ಕಡಿಮೆ ಇರಬೇಕು.
• ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯಲ್ಲಿ ಅವಕಾಶವಿರುತ್ತದೆ.
# ಈ ಯೋಜನೆಯಲ್ಲಿ ನೀಡುವ ಸಾಲದ ವಿವರಗಳ ಬಗ್ಗೆ ನೋಡುವುದಾದರೆ,
* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇದ್ದರೆ ಅದಕ್ಕೆ ಸುಮಾರು 20 ಲಕ್ಷ ರೂಪಾಯಿಗಳನ್ನು ಸಾಲವಾಗಿ ನೀಡಲಾಗುತ್ತದೆ. ಮತ್ತು ಅದಕ್ಕೆ ಸುಮಾರು ಶೇಕಡಾ 4ರಷ್ಟು ಬಡ್ಡಿ ಇರುತ್ತದೆ.
* ಒಂದು ವೇಳೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷದಿಂದ 15 ಲಕ್ಷ ರೂಪಾಯಿಗಳು ಇದ್ದರೆ ಅವರಿಗೂ ಸಹ ಸುಮಾರು 20 ಲಕ್ಷ ರೂಪಾಯಿಗಳನ್ನು ಸಾಲವಾಗಿ ನೀಡಲಾಗುತ್ತದೆ. ಆದರೆ ಇವರಿಗೆ ಶೇಕಡ 6 ರಷ್ಟು ಬಡ್ಡಿ ಹಾಕಲಾಗುತ್ತದೆ.
# ಈ ಸಾಲ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ನೋಡುವುದಾದರೆ,
» ಆಧಾರ್ ಕಾರ್ಡ್
» ಜಾತಿ ಪ್ರಮಾಣ ಪತ್ರ
» ಆದಾಯ ಪ್ರಮಾಣ ಪತ್ರ
» ಜಮೀನಿನ ಪ್ರಮಾಣ ಪತ್ರ
» ವ್ಯಾಪಾರ ಅಥವಾ ಉದ್ಯೋಗದ ಸಂಕ್ಷಿಪ್ತ ರಿಪೋರ್ಟ್
» ಜಮೀನಿನ ಪಹಣಿ ಅಥವಾ ಉತಾರ.
# ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನೋಡುವುದಾದರೆ,
• ಮೊದಲು ಸರ್ಕಾರದಿಂದ ಬಿಡುಗಡೆ ಮಾಡಿರುವ ಅಲ್ಪಸಂಖ್ಯಾತರ ಅಧಿಕೃತ ವೆಬ್ಸೈಟನ್ನು ತೆರೆಯಬೇಕು.
• ಅಲ್ಲಿ ಕೆಳಗಡೆ ಕಾಣುವ “ವ್ಯಾಪಾರ ಅಥವಾ ಉದ್ಯಮಗಳಿಗೆ ನೇರ ಸಾಲ ಯೋಜನೆ” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
• ಇದಾದ ನಂತರ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ ಎಂಬುದಾಗಿ ನಮೂದಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
• ಅಲ್ಲಿ ನಿಮಗೆ ಕೇಳಲಾದ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಅದಕ್ಕೆ ಬಂದಿರುವ ಓಟಿಪಿಯನ್ನು ನಮೂದಿಸಿ ಮುಂದುವರೆಯಬೇಕು.
• ನಂತರದಲ್ಲಿ “ಅರ್ಜಿ ಸಲ್ಲಿಸಿ” ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಅರ್ಜಿಯ ನಮೂನೆ ತೆರೆದುಕೊಳ್ಳುತ್ತದೆ.
• ಅಲ್ಲಿ ನಿಮಗೆ ನಿಮ್ಮ ವಿವರಗಳನ್ನು ಮತ್ತು ನಿಮ್ಮ ಬ್ಯಾಂಕಿನ ವಿವರಗಳನ್ನು ಮತ್ತು ಇನ್ನಿತರೆ ದಾಖಲಾತಿಗಳ ವಿವರಗಳನ್ನು ಕೇಳಲಾಗುತ್ತದೆ. ಮಾಹಿತಿಯನ್ನು ಸರಿಯಾದ ಜಾಗದಲ್ಲಿ ತುಂಬಬೇಕು ಮತ್ತು ಸಂಬಂಧಪಟ್ಟ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.
ಈ ರೀತಿ ಈ ಒಂದು ನೇರ ಸಾಲ ಯೋಜನೆ ಅಡಿಯಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ..
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ
ವೆಬ್ಸೈಟ್ನ ಸಂಪರ್ಕದಲ್ಲಿರಿ..