ಪ್ರಿಯ ರೈತರೇ, ಕರ್ನಾಟಕ ರಾಜ್ಯದ ಅತಿ ಹೆಚ್ಚು ಪ್ರದೇಶಗಳಲ್ಲಿ ಹತ್ತಿ ಬಿತ್ತನೆ ಮಾಡಿದ್ದು, ಬೆಳೆ ಹೂ ಬಿಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿದೆ. ಇಂದಿನ ದಿನಗಳಲ್ಲಿ ಅತಿ ಹೆಚ್ಚಿನ ಮಳೆಯಿಂದ ಮಣ್ಣಿನ ತೇವಾಂಶ ಹೆಚ್ಚಾಗಿರುವುದರಿಂದ ಹತ್ತಿಯ ಎಲೆಗಳು ಕೆಂಪಾಗಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.
ಹತ್ತಿ ಬೆಳೆಯ ಎಲೆಯ ತುದಿ ಭಾಗವು ಅಗಲವಾಗಿ, ಬೆಳವಣೆಗೆ ಹೊಂದಿದ ಎಲೆಯಲ್ಲಿ ತಾಮ್ರದ ಬಣ್ಣ ಅಥವಾ ಕೆಂಪು ಬಣ್ಣ ಕಾಣುತ್ತದೆ.
ಎಲೆಯ ಮೇಲ್ಬಾಗದಲ್ಲಿ ಒರಟಾದ, ಉಬ್ಬು ತಗ್ಗುಗಳಿಂದ ಕೂಡಿದ ಎಲೆಗಳು, ಎಲೆಗಳು ಬಿರುಸಾಗಿ ಕಾಣುವವು. ಹಾಗೂ ಅದೇ ರೀತಿಯಲ್ಲಿ ಹತ್ತಿಯ ಗಿಡದ ಕಾಂಡವು ಕೆಂಪು ಬಣ್ಣಕ್ಕೆ ಅಥವಾ ತಾಮ್ರ ಬಣ್ಣಕ್ಕೆ ತಿರುಗುತ್ತವೆ.
ರೋಗ ಪೀಡಿತ ಸಸಿಯ ಎಲೆ, ಕಾಂಡ ಭಾಗಗಳು ಕೆಂಪಾಗಿ, ದಿಢೀರನೆ ಸೊರಗುವವು. ಇದರಿಂದ ಬೆಳೆಗಳ ಬೆಳವಣಿಗೆ ಕುಂಟಿತವಾಗುತ್ತದೆ. ಹಾಗೂ ಅದೇ ರೀತಿಯಲ್ಲಿ ಇಳುವರಿಯಲ್ಲಿ ಕಡಿಮೆಯಾಗುತ್ತದೆ.
# ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವಿಕೆ ಅಥವಾ ತಾಮ್ರ ರೋಗದ ನಿರ್ವಹಣಾ ಕ್ರಮಗಳು..
• ಮಣ್ಣಿನಲ್ಲಿರುವ ಪೋಷಕಾಂಶಗಳಿಗೆ ಅನುಗುಣವಾಗಿ, ಲಘು ಪೋಷಕಾಂಶಗಳ ಕೊರತೆ ಇರುವ ಮಣ್ಣಿಗೆ ಹತ್ತಿ ಬೀಜದ ಬಿತ್ತನೆಗೆ ಮೊದಲು ಪ್ರತಿ ಹೆಕ್ಟೇರ್‌ಗೆ 25 ಕಿ.ಗ್ರಾಂ. ಮೆಗ್ನೆಶಿಯಂ ಸಲ್ಪೇಟ್ (MgSo4) ಗೊಬ್ಬರದ ಜೊತೆಗೆ ತಲಾ 10 ಕಿ.ಗ್ರಾಂ. ಜಿಂಕ್ ಸಲ್ಪೇಟ್ (ZnSo4) ಹಾಗೂ ಕಬ್ಬಿಣದ ಸಲ್ಪೇಟ್ ಅನ್ನು ನೀಡುವುದರಿಂದ ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವಿಕೆ ಅಥವಾ ತಾಮ್ರ ರೋಗದ ನಿಯಂತ್ರಣವನ್ನು ಮಾಡಬಹುದು.
• ಹತ್ತಿ ಬೀಜವನ್ನು ಬಿತ್ತನೆ ಮಾಡಿದ ಸುಮಾರು 90 ಹಾಗೂ 110 ದಿನಗಳ ನಂತರ 10 ಗ್ರಾಂ. ಮೆಗ್ನಿಶಿಯಂ ಸಲ್ಪೇಟ್ ಅನ್ನು 1 ಲೀಟರ್ ನೀರಿನಲ್ಲಿ ಬೆರೆಸಿ, ಮಿಶ್ರಣ ಮಾಡಿ ಎಲೆಗಳ ಮೇಲೆ ಸಿಂಪಡಣೆ ಮಾಡಬೇಕು. ಇದರಿಂದ ಹತ್ತಿ ಬೆಳೆಯಲ್ಲಿ ತಾಮ್ರ ರೋಗ ಅಥವಾ ಎಲೆ ಕೆಂಪಾಗುವಿಕೆಯನ್ನು ನಿಯಂತ್ರಣ ಮಾಡಬಹುದು.
• ಈಗಿನ ದಿನಗಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವಿಕೆ ಅಥವಾ ತಾಮ್ರ ರೋಗ ಅತಿ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಬೆಳೆಯಲ್ಲಿ ಇಳುವರಿಯಲ್ಲಿ ಕಡಿಮೆಯಾಗುತ್ತಿರುವುದರಿಂದ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ
https://chat.whatsapp.com/EaIIjMOhBMy7qiof4xCMTo
• ಈ ಮೇಲೆ ಹೇಳಿದ ನಿಯಂತ್ರಣಾ ಕ್ರಮಗಳನ್ನು ಕೈಗೊಂಡು ರೈತರು ಹತ್ತಿ ರೋಗದ ತಾಮ್ರ ರೋಗ ಅಥವಾ ಎಲೆ ಕೆಂಪಾಗುವಿಕೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ
ವೆಬ್ಸೈಟ್ ಸಂಪರ್ಕದಲ್ಲಿರಿ..